ವಿಶ್ವ ಚಾಂಪಿಯನ್ನರಿಗೆ ಸೋಲುಣಿಸಿದ ಭಾರತದ ವನಿತಾ ತಂಡ

Soma shekhar
ಸಿಡ್ನಿ: ವನಿತಾ ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಹರ್ಮನ್ ಕೌರ್ ಬಳಗ ಹಾಲಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಿದೆ. ಇದರೊಂದಿಗೆ ಭಾರತ ಕೂಟದಲ್ಲಿ ಶುಭಾರಂಭ ಮಾಡಿದೆ. ಹೌದು, ಚಾಂಪಿಯನ್ನರನ್ನೇ ಸೋಲಿಸಲು ಕಾರಣವಾಗಿದ್ದು ಟೀಂ ವನಿತಾ ಇಂಡಿಯಾದ ಬೌಲರ್ ಗಳು. ಹೌದು, ಗೆದ್ದು ಬೀಗಿದ ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ. 
 
ಸಿಡ್ನಿ ಅಂಗಳದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದರೆ, ಭಾರತದ ಬಿಗು ದಾಳಿಗೆ ತತ್ತರಿಸಿದ ಆಸೀಸ್ ಇನ್ನೂ ಒಂದು ಎಸೆತ ಬಾಕಿ ಇರುವಾಗ 115 ರನ್ ಗೆ ಆಲ್ ಔಟ್ ಆಗಿದೆ.  ಭಾರತದ ಪರ ಯುವ ಆಟಗಾರ್ತಿ ಶಿಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ಶಿಫಾಲಿ 15 ಎಸೆತಗಳಲ್ಲಿ 29 ರನ್ ಬಾರಿಸಿದರು. ಉಳಿದಂತೆ ಜೆಮಿಮಾ 26 ರನ್ ಮತ್ತು ಅಂತ್ಯದಲ್ಲಿ ದೀಪ್ತಿ ಶರ್ಮಾ ಅಜೇಯ 49 ರನ್ ಗಳಿಸಿದರು. ಗುರಿ ಬೆನ್ನತ್ತಿದ ಆಸೀಸ್ ಪವರ್ ಪ್ಲೇ ನಲ್ಲಿ ಉತ್ತಮವಾಗಿ ಆಡಿದರೂ ನಂತರ ಸತತ ವಿಕೆಟ್ ಕಳೆದುಕೊಂಡಿತು. ಅಲಿಸಾ ಹೀಲಿ 51ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಗಾರ್ಡನರ್ 34ರನ್ ಗಳಿಸಿದರು. ಉಳಿದಂತೆ ಆರು ರನ್ ಗಳಿಸಿದ ಬೆತ್ ಮೂನಿಯದ್ದೇ ಗರಿಷ್ಠ ಗಳಿಕೆ. ಭಾರತದ ಪರ ಪೂನಂ ಯಾದವ್ ನಾಲ್ಕು ವಿಕೆಟ್ ಕಬಳಿಸಿದರೆ, ಶಿಖಾ ಪಾಂಡೆ ಮೂರು ವಿಕೆಟ್ ಪಡೆದರು. ಭಾರತ 17ರನ್ ಅಂತರದಲ್ಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸಿ ಗೆಲುವಿನ ನಗೆ ಬೀರಿದೆ. 
 
ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಉದಯೋನ್ಮುಖ ಆಟಗಾರ್ತಿ ಶಫಾಲಿ ವರ್ಮಾ  ಕೇವಲ 15ಎಶೆತಗಳಲ್ಲೇ 29ರನ್ ಗಳಿಸುವ ಮೂಲಕ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಮಹಿಳಾ ಟ್ವೆಂಟಿ-20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿಯಾಗಿರುವ ಶಫಾಲಿ ವರ್ಮಾ 15ಎಸೆತಕ್ಕೆ 29ರನ್ ಬಾರಿಸಿ ಭವಿಷ್ಯದ ಆಟಗಾರ್ತಿ ಎಂದು ಸಾರಿ ಹೇಳಿದ್ದಾರೆ.

Find Out More:

Related Articles: