ವಾಂಖೆಡೆಯಲ್ಲಿ ಭಾರತ - ವಿಂಡೀಸ್ ಹೈವೋಲ್ಟೇಜ್ ಫೈನಲ್ ಪಂದ್ಯ. ಟೀಂ ಇಂಡಿಯಾ ಗೆಲ್ಲಲು ಕಿಂಗ್ ಕೊಹ್ಲಿ ಮಾಡಿದ ಉಪಾಯವೇನು!?

Soma shekhar
ಪ್ರಸ್ತುತ ಟೀಂ ಇಂಡಿಯಾ ವರ್ಸಸ್ ವಿಂಡೀಸ್ ಟೀ-ಟ್ವಂಟಿ ಸರಣಿ 1-1 ಸಮಬಲ ಸಾಧಿಸಿದ್ದು, ಸರಣಿಯ ಕೊನೆಯ ಪಂದ್ಯವು ರೋಹಿತ್ ತವರು ಮೈದಾನ ಮುಂಬಯಿಯ ವಾಂಖೆಡೆ ಮೈದಾನದಲ್ಲಿ ಬುಧವಾರ ನಡೆಯಲಿದೆ. ಇತ್ತಂಡಗಳ ಪಾಲಿಗೂ ಇದು ನಿರ್ಣಾಯಕವೆನಿಸಿದ್ದು ಟೀಂ ಇಂಡಿಯಾ ಗೆಲ್ಲಲು ಕ್ಯಾಪ್ಟನ್ ಕೊಹ್ಲಿ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ದಪಡಿಸಿ ಕೊಂಡಿದ್ದಾರೆ. ಅದರಿಂದ ಭಾರತ ಗೆಲ್ಲೋದು ಖಚಿತ ಎನ್ನುತ್ತಿದ್ದು, ಯಾರು ಗೆಲ್ತಾರೆ ಎಂಬುದು ಇದೀಗ ಭಾರೀ ಕುತೂಹಲ ಮೂಡಿಸಿದೆ. 
 
ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಜೀವನಶ್ರೇಷ್ಠ ಆಟದ (94*) ನೆರವಿನಿಂದ ದಾಖಲೆ ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ಬಾರಿಸಿತ್ತು. ಆದರೆ ತಿರುವನಂತಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಈ ಹಿನ್ನಲೆಯಲ್ಲಿ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಅಂತಿಮ ಪಂದ್ಯ ಹೆಚ್ಚು ರೋಚಕತೆ ಪಡೆದಿದೆ. ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲದಿರುವುದು ಯೋಚಿಸಲೇ ಬೇಕಾದ ವಿಚಾರವಾಗಿದೆ. ಭುವನೇಶ್ವರ್ ಕುಮಾರ್, ದೀಪಕ್ ಚಹರ್ ಜತೆಗೆ ಸ್ಪಿನ್ನರ್‌ಗಳು ವಿಕೆಟ್ ಕಬಳಿಸುವಲ್ಲಿ ವಿಫಲವಾಗಿದ್ದಾರೆ. ಇದು ಆತಂಕದ ವಿಷಯವಾಗಿದೆ.
 
ತಂಡಗಳು ಇಂತಿದೆ:
 
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ರಿಷಬ್ ಪಂತ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಕುಲ್‌ದೀಪ್ ಯಾದವ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ
 
ವೆಸ್ಟ್‌ಇಂಡೀಸ್: ಕೀರಾನ್ ಪೊಲಾರ್ಡ್, ಫ್ಯಾಬಿಯಾನ್ ಅಲೆನ್, ಶೆಲ್ಡನ್ ಕಾಟ್ರೆಲ್, ಶಿಮ್ರಾನ್ ಹೆಟ್ಮಾಯರ್, ಜೇಸನ್ ಹೋಲ್ಡರ್, ಬ್ರೆಂಡನ್ ಕಿಂಗ್, ಎವಿನ್ ಲೂಯಿಸ್, ಕೀಮೊ ಪಾಲ್, ನಿಕೋಲಸ್ ಪೂರನ್, ಖ್ಯಾರಿ ಪಿಯೆರ್, ದಿನೇಶ್ ರಾಮ್‌ದಿನ್, ಶೆರ್ಫಾನ್ ರುಥರ್‌ಫೋರ್ಡ್, ಲೆಂಡ್ಲ್‌ ಸಿಮನ್ಸ್, ಹೇಡನ್ ವಾಲ್ಶ್, ಜೂ. ಕೆಸ್ರಿಕ್ ವಿಲಿಯಮ್ಸ್.

Find Out More:

Related Articles: