ವಾಂಖೆಡೆಯಲ್ಲಿ ಸ್ಟಂಪ್‌ ಮುರಿದ ಬುಮ್ರಾ! ನಡೆದಿದ್ದೇವೆ ಗೊತ್ತಾ!?

Soma shekhar
ವಿಶ್ವ ಶ್ರೇಷ್ಠ ನಂಬರ್ ಒನ್ ಬೌಲರ್ ಬೂಮ್ ಬೂಮ್ ಬೂಮ್ರಾ ಇದೀಗ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸ್ಟಂಪ್ ಮುರಿದಿರುವ ಘಟನೆ ನಡೆದಿದೆ. ಅಷ್ಟಕ್ಕೂ ನಡೆದಿದ್ದು ಏನಾದರೂ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ. ಸ್ಟಂಪ್ ಏಕೆ ಮುರಿಯಿತು ಗೊತ್ತಾ!
 
ಬೆನ್ನು ನೋವಿನಿಂದ ಚೇತರಿಸಿದ ಬಳಿಕ ಮರಳಿ ಅಭ್ಯಾಸ ಆರಂಭಿಸಿರುವ ಬಲಗೈ ವೇಗಿ, ವಾಂಖೆಡೆ ಕ್ರೀಡಾಂಗಣದಲ್ಲಿ ನೆಟ್ಸ್‌ ಅಭ್ಯಾಸದ ವೇಳೆ ಮಧ್ಯದ ಸ್ಟಂಪ್‌ ತುಂಡಾಗುವಂತೆ ಬೌಲಿಂಗ್‌ ಮಾಡಿದ್ದಾರೆ. ಹೌದು, ಶಾಕ್ ಆದರೂ ಕೂಡ ನಂಬಲೇ ಬೇಕಾದ ವಿಷಯವಿದು. 
 
ಯಾರ್ಕರ್ ಬೂಮ್ರಾ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಮಂಗಳವಾರ ಫೋಟೊ ಒಂದನ್ನು ಪ್ರಕಟಿಸಿದ್ದಾರೆ. ಬೆನ್ನು ನೋವಿನಿಂದ ಚೇತರಿಸಿದ ಬಳಿಕ ಮರಳಿ ಅಭ್ಯಾಸ ಆರಂಭಿಸಿರುವ ಬಲಗೈ ವೇಗಿ, ವಾಂಖೆಡೆ ಕ್ರೀಡಾಂಗಣದಲ್ಲಿ ನೆಟ್ಸ್‌ ಅಭ್ಯಾಸದ ವೇಳೆ ಮಧ್ಯದ ಸ್ಟಂಪ್‌ ತುಂಡಾಗುವಂತೆ ಬೌಲಿಂಗ್‌ ಮಾಡಿದ್ದಾರೆ. ಇದರ ಫೋಟೊವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಳ್ಳುವ ಮೂಲಕ ಎದುರಾಳಿಗಳಿಗೆ ತಮ್ಮ ಪುನರಾಗಮನ ಸಂದೇಶ ರವಾನಿಸಿದ್ದಾರೆ.
 
"ದಿ ಎಂಡ್‌. ಅಭ್ಯಾಸ ಮತ್ತು ಸ್ಟಂಪ್ಸ್‌ ಎರಡೂ," ಎಂದು ಬುಮ್ರಾ ತಮ್ಮ ಟ್ವಿಟರ್‌ ಗೋಡೆ ಮೇಲೆ ಬರೆದುಕೊಂಡಿದ್ದಾರೆ. ಬೆನ್ನು ನೋವಿನಿಂದ ಚೇತರಿಸಿದ ಬಳಿಕ ತಾವು ಎಂದಿನ ಲಯಕ್ಕೆ ಮರಳಲು ನಡೆಸುತ್ತಿರುವ ಎಲ್ಲಾ ಪ್ರಯತ್ನಗಳ ಫೋಟೊ ಮತ್ತು ವಿಡಿಯೊಗಳನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ. 
 
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿ ವೇಳೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾದ ಬುಮ್ರಾ, ಹೆಚ್ಚಿನ ತಪಾಸಣೆ ಸಲುವಾಗಿ ಲಂಡನ್‌ಗೆ ತೆರಳಿದ್ದರು. ಆದರೆ, ನೈಸರ್ಗಿಕವಾಗಿಯೇ ಸಮಸ್ಯೆ ಗುಣವಾಗುತ್ತದೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇಲ್ಲ ಎಂದು ವೈದ್ಯರು ಭರವಸೆ ನೀಡಿದ್ದರು. ಭಾರತ ತಂಡ ಇದೀಗ ನ್ಯೂಜಿಲಂಡ್‌ ಪ್ರವಾಸ ಕೈಗೊಳ್ಳಲಿದ್ದು, ತಂಡದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದ ನೈಜ ಸಾಮರ್ಥ್ಯದ ಪರೀಕ್ಷೆ ನಡೆಯಲಿದೆ. ಡಿಸೆಂಬರ್ ನಲ್ಲಿ ನಡೆಯಲಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಬುಮ್ರಾಗೆ ಸ್ಥಾನ ನೀಡಲಾಗಿಲ್ಲ. ಹೀಗಾಗಿ ಕಿವೀಸ್‌ ವಿರುದ್ಧದ ಸರಣಿ ಮೂಲಕ ಬಮ್ರಾ ತಂಡ ಸೇರಿಕೊಳ್ಳಲಿದ್ದಾರೆ. ಮುಂದಿನ ತಮ್ಮ ಫರ್ಫಾಮೆನ್ಸ್ ಹೇಗಿರುತ್ತೆ ಎಂಬುದು ಕಾದುನೋಡಬೇಕಾಗಿದೆ.
 
 
 

Find Out More:

Related Articles: