ಐಪಿಎಲ್‌ಗೂ ತಟ್ಟಿದ ಕರೋನಾ ಭೀತಿ

Soma shekhar

ನವದೆಹಲಿ: ಈ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯಾವಳಿ ಮೊದಲಿನಂತೆ ಇರೋದು ಡೌಟು. ಹೌದು ಯಾಕೆಂದರೆ, ಪಂದ್ಯಗಳ ವೇಳೆ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶವನ್ನು ನಿರ್ಬಂಧಿಸುವ ಸಾಧ್ಯತೆ ಇದೆ. ಈ ಕುರಿತು ಶನಿವಾರ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿಯ ಐಪಿಎಲ್ ಅನ್ನು ನಾವು ಟಿವಿಯಲ್ಲಿ ಮಾತ್ರ ನೋಡಿ ಆನಂದಿಸಬಹುದು ಹೊರತು ಸ್ಟೇಡಿಯಂನಲ್ಲಿ ಅಲ್ಲ.

 

ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಏನು? 

 

ಈ ಬಾರಿಯ ಐಪಿಎಲ್ ಅನ್ನು ಸ್ಟೇಡಿಯಂ ನಲ್ಲಿ ಕಣ್ತುಂಬಿಕೊಳ್ಳೋಕೆ ಸಾಧ್ಯ ಆಗದೇ ಇರೋದಕ್ಕೆ ಕಾರಣ ಕರೋನಾ. ಹೌದು ಕರೋನಾ ಸಾಂಕ್ರಾಮಿಕ ರೋಗ ಆಗಿರೋದರಿಂದ ಕ್ರೀಡಾಕೂಟಗಳ ವೇಳೆ ಜನಸಮೂಹ ಸೇರುವುದನ್ನು ನಿರ್ಬಂಧಿಸುವಂತೆ ಆರೋಗ್ಯ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಐಪಿಎಲ್ ಗೂ ಈ ಬಿಸಿ ತಟ್ಟಿದೆ. ಈ ಸೂಚನೆಯನ್ನು ಬಿಸಿಸಿಐ ಸೇರಿದಂತೆ ಇತರ ಎಲ್ಲಾ ಕ್ರೀಡಾ ಫೆಡರೇಷನ್‌ಗಳೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಕ್ರೀಡಾ ಸಚಿವಾಲಯವು ಆದೇಶ ಹೊರಡಿಸಿದೆ.

 


ಐಪಿಎಲ್ ಪಂಧ್ಯಗಳನ್ನು ಮುಂದೂಡಿ...!

 

ಇಡೀ ದೇಶದಲ್ಲೆಡೆ ಕರೋನಾ ಭೀತಿ ಇದೆ. ಹೀಗಾಗಿ ಮುಂಬೈನಲ್ಲಿ ನಡೆಯಲಿರುವ ಐಪಿಎಲ್ ಪಂಧ್ಯಗಳನ್ನು ಮುಂದೂಡಬೇಕು . ಇಲ್ಲದೇ ಇದ್ದರೆ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರದೇ ಕೇವಲ ಟಿವಿಯಲ್ಲೇ ಪಂದ್ಯವನ್ನು ವೀಕ್ಷಿಸಬಹುದು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿಇವರಾದ ರಾಜೇಶ್ ಟೋಪೆ ಅವರು ಹೇಳಿದ್ದಾರೆ. ನಿನ್ನೆಯಷ್ಟೇ ಮುಂಬೈನಲ್ಲಿ ಇಬ್ಬರಿಗೆ ಕರೋನಾ ಸೋಂಕು ಹರಡಿರೋದು ತಿಳಿದು ಬಂದಿತ್ತು.

 

ಇನ್ನು ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಕರ್ನಾಟಕದಲ್ಲಿಯೂ ಕೆಲವರಿಗೆ ಕರೊನಾ ಸೋಂಕು ಪತ್ತೆ ಆಗಿದೆ. ಹೀಗಾಗಿ  ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಪತ್ರ ಬರೆದಿದ್ದಾರೆ. ಬೆಂಗಳೂರಿನಲ್ಲಿಯೂ ಕರೋನಾ ಪತ್ತೆ ಆಗಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿಗಳಿಗೆ ಅವಕಾಶ ನೀಡಬೇಕೋ ಬೇಡವೋ ಎನ್ನುವುದರ ಕುರಿತು ಸ್ಪಷ್ಟ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. 

 

ಒಟ್ಟಿನಲ್ಲಿ ಕರೋನಾ ವೈರಸ್ ಭೀತಿ ಐಪಿಎಲ್ ಪಂದ್ಯಾವಳಿಗಳ ಮೇಲೆಯೂ ಬಿದ್ದಿದೆ. ಹೀಗಾಗಿ ಐಪಿಎಲ್ ಟಿಕೇಟ್ ಮಾರಾಟ ಕೂಡ ಅಸಾಧ್ಯ ಎಂದು ತಿಳಿದುಬಂದಿದೆ. ಒಂದು ವೇಳೆ ಐಪಿಎಲ್ ಟಿಕೇಟ್ ಮಾರಾಟ ಆಗದಿದ್ದರೆ ದೊಡ್ಡದಾದ ಆದಾಯದ ಮೂಲವೊಂದು ಕೈಬಿಟ್ಟು ಹೋಗಲಿದೆ. ಯಾವುದಕ್ಕೂ ಕಾದು ನೋಡಬೇಕಿದೆ .

Find Out More:

ipl

Related Articles: