ಹಾರ್ದಿಕ್‌ ಪಾಂಡ್ಯ ಭಾವಿ ಪತ್ನಿ ಎಂಥಾ ಪೋಟೋ ಹರಿಬಿಟ್ಟಿದ್ದಾರೆ ಗೊತ್ತಾ ?

Soma shekhar
ಟೀಂ ಇಂಡಿಯಾದ ಸ್ಟಾರ್ ಆಟಗಾರ, ಸಿಕ್ಸರ್ ಧೀರ ಹಾರ್ದಿಕ್ ಪಾಂಡ್ಯ ಇದೀಗ ಅವರ ಭಾವಿ ಪತ್ನಿ ಜೊತೆಗೆ ಎಂಥಾ ಪೋಟೋ ಕ್ಲಿಕಿಸಿಕೊಂಡಿದ್ದಾರೆ ಗೊತ್ತಾ. ಆ ಪೋಟೋ ವನ್ನು ಅವರ ಭಾವಿ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಫುಲ್ ವೈರಲ್ ಆಗಿದೆ  ಹೌದು, ಸಾಕಷ್ಟು ಲೈಕ್ಸ್, ಕಾಮೆಂಟ್ಸ್ ಬಂದಿವೆ. ಕೆಲವರು ವಿಚಿತ್ರ ಲೈಕ್ಸ್ ಮಾಡಿದ್ದಾರೆ. ಯಾಕೆ, ಯಾವ ಪೋಟೋ ಅಂತ ಇಲ್ನೋಡಿ. 
 
ಇತ್ತೀಚೆಗಷ್ಟೇ ಎಂಗೇಜ್ಮೆಂಟ್‌ ಮಾಡಿಕೊಂಡಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮತ್ತು ನಟಿ ನತಾಶಾ ಸ್ಟ್ಯಾನ್ಕೊವಿಚ್‌ ರೊಮ್ಯಾಂಟಿಕ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಪಾಂಡ್ಯ ಮತ್ತು ನತಾಶಾ ಸ್ಟ್ಯಾನ್ಕೊವಿಚ್‌ ಡೇಟಿಂಗ್‌ ನಡೆಸುತ್ತಿದ್ದ ವದಂತಿಗಳು ನಿಜವಾಗಿ ಇಬ್ಬರ ಎಂಗೇಜ್ಮೆಂಟ್‌ನೊಂದಿಗೆ ಅಂತ್ಯಗೊಂಡಿತು. ಇದೀಗ ತಮ್ಮಿಬ್ಬರ ನಡುವಣ ಬಾಂಧವ್ಯದ ಕುರಿತಾಗಿ ಸಾರ್ವಜನಿಕವಾಗಿ ಸಾರುತ್ತಿರುವ ನತಾಶಾ, ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲಕ ಪಾಂಡ್ಯ ಜೊತೆಗಿನ ರೊಮ್ಯಾಂಟಿಕ್‌ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
 
ನತಾಶಾ, ತಮ್ಮ ಅಧಿಕೃತ ಫೇಸ್‌ ಬುಕ್‌ ಮತ್ತು ಇನ್‌ ಸ್ಟಾಗ್ರಾಮ್‌ ಖಾತೆ ಮೂಲಕ ಫೋಟೊ ಹಂಚಿಕೊಂಡಿದ್ದು, ಬೀಚ್‌ ಬಳಿ ಭಾವಿ ಪತಿಯೊಡನೆ ಕಳೆದ ರೊಮ್ಯಾಂಟಿಕ್‌ ಸಮಯವನ್ನು ನೆನೆದಿದ್ದಾರೆ. ಬಿಕಿನಿ ತೊಟ್ಟ ನತಾಶ ಹಾಗೂ ಸಿಕ್ಸ್‌ ಪ್ಯಾಕ್ಸ್‌ ಪ್ರದರ್ಶಿಸುತ್ತಿರುವ ಹಾರ್ದಿಕ್‌, ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿ ಎಂಬಂತೆ ಬಿಂಬಿಸಿದ್ದಾರೆ. ಹೌದು, ಪೋಟೋಸ್ ವೈರಲ್ ಆಗಿವೆ. 
 
ಟೀಮ್‌ ಇಂಡಿಯಾ ನೆಟ್ಸ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಅಭ್ಯಾಸ ಶುರು
ಜನಪ್ರಿಯ ಟೆಲಿವಿಷನ್‌ ಕಾರ್ಯಕ್ರಮ ನಚ್‌ ಬಲ್ಲಿಯೇ ಮೂಲಕ ಜನಮನ ಗೆದ್ದಿದ್ದ ಡ್ಯಾನ್ಸರ್‌ ನತಾಶಾ, ಕನ್ನಡದ 'ದನ ಕಾಯೋನು' ಸಿನಿಮಾ ಸೇರಿದಂತೆ ಕೆಲ ಬಾಲಿವುಡ್‌ ಸಿನಿಮಾಗಳಲ್ಲೂ ನಟಿಸಿದ್ದಾರೆ.
 
ಕುಟುಂಬಸದಸ್ಯರು ಮತ್ತು ಬಂಧುಮಿತ್ರರೊಡನೆ ಬೋಟ್‌ ಒಂದರಲ್ಲಿ ಸಮುದ್ರದ ಮಧ್ಯಕ್ಕೆ ಸಾಗಿರೊಮ್ಯಾಂಟಿಕ್‌ ಗೀತೆಯೊಂದಿಗೆ ನತಾಶಾಗೆ ಮದುವೆಯಾಗುವುದಾಗಿ ಕೋರಿ ಹಾರ್ದಿಕ್‌ ಉಂಗುರ ತೊಡಿಸಿದ್ದರು. ಇಬ್ಬರೂ ತಮ್ಮ ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡ ವಿಡಿಯೋ ಭಾರಿ ವೈರಲ್‌ ಆಗಿದ್ದವು. ಈ ರೀತಿಯ ಪೋಟೋಸ್ ಎಷ್ಟರ ಮಟ್ಟಿಗೆ ಸರಿ ಎಂದು ಕೆಲವರು ಎಂದರೆ, ಇನ್ನು ಕೆಲವರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.

Find Out More:

Related Articles: