ಬಣ್ಣದ ಲೋಕದಲ್ಲಿ ಕಮಾಲ್ ಮಾಡ್ತೀರಾ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್

Soma shekhar
ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ  ಹೌದು, ಪತ್ನಿ ಹಜೇಲ್ ಕೀಜ್ ಜೊತೆ ವೆಬ್ ಸೀರಿಸ್‍ ನಲ್ಲಿ ನಟನೇ ಮಾಡುವ ಮೂಲಕ ಕ್ರಿಕೆಟ್ ಬಳಿಕ ಸಿನಿಮಾರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧವಾಗಿದ್ದಾರೆ.
 
ಹೌದು ಕ್ರಿಕೆಟ್ ಆಟಕ್ಕೆ ಯುವಿ ವಿದಾಯ ಹೇಳಿದ ಮೇಲೆ ಅವರು ಮತ್ತೇನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ವಿದಾಯದ ನಂತರ ಯುವರಾಜ್ ಸಿಂಗ್ ಅವರು ಕೆಲ ವಿದೇಶಿ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಪತ್ನಿ ಜೊತೆ ವೆಬ್ ಸೀರಿಸ್ ನಲ್ಲಿ ನಟಿಸುವ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇಷ್ಟು ದಿನ ಕ್ರಿಕೆಟ್‍ ನಲ್ಲಿತನ್ನ ಆಲ್‍ ರೌಂಡರ್ ಆಟದ ಮೂಲಕ ಕ್ರೀಡಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದ ಈಎಡಗೈ ದಾಂಡಿಗ,ಈಗ ಅಸ್ಸಾಂನ ಡ್ರೀಮ್ ಹೌಸ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ವೆಬ್ ಸರಣಿಯಲ್ಲಿ ಅಭಿನಿಯಿಸುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ಅವರ ಪತ್ನಿ ಹಜೇಲ್ ಕೀಜ್ ಮತ್ತು ಸಹೋದರ ಜೋರಾವರ್ ಸಿಂಗ್ ಅವರು ಕೂಡ ಅಭಿನಯಿಸಲಿದ್ದು ಅಭಿಮಾನಿಗಳಿಗೆ ಫುಲ್ ಖುಷ್ ಆಗಿದೆಯಂತೆ. 
 
ಈವೆಬ್ ಸರಣಿಯ ಇನ್ನೊಂದು ವಿಶೇಷವೆಂದರೆ ಇದರಲ್ಲಿ ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೂ ದಿನ ಬ್ಯಾಟ್ ಹಿಡಿದು ಘರ್ಜಿಸಿದ್ದ ಯುವಿ ಈಗ ಬಣ್ಣ ಹಚ್ಚಿ ಮೋಡಿ ಮಾಡಲು ಬರುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಸಿಗದಿದ್ದು ಸಹ ಬಣ್ಣ ಹಚ್ಚೋದು ಮಾತ್ರ ಪಕ್ಕಾ ಆಗಿದೆ. 
 
ಇತ್ತೀಚೆಗೆ ಭಾರತದ ಕ್ರಿಕೆಟ್ ತಂಡದ ಆಟಗಾರರು ಹೆಚ್ಚು ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ತಮಿಳಿನಲ್ಲಿ ಫ್ರೆಂಡ್ ಶಿಪ್ ಎಂಬಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಸ್ವತಃ ಅವರೇ ಟ್ವೀಟ್ ಮಾಡಿ ತಿಳಿಸಿದ್ದರು. ಇದಾದ ನಂತರ ಮಾಜಿ ವೇಗಿ ಇರ್ಫಾನ್ ಪಠಾಣ್ ಕೂಡ ಮೊದಲ ಬಾರಿಗೆ ಇದೇವರ್ಷ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.
 

Find Out More:

Related Articles: