ಐಪಿಎಲ್: ಆರ್.ಸಿ.ಬಿ ಸೋಷಿಯಲ್ ಮೀಡಿಯಾ ಹ್ಯಾಕ್

Soma shekhar

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಅತೀ ಜನಪ್ರಿಯ ತಂಡವಾದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ) ತಂಡ ಸಾಮಾಜಿಕ ಜಾಲತಾಣಗಳಲ್ಲೂ ಸದಾ ಮುಂದು. ಈ ಸಲ ಕಪ್ ನಮ್ಗೆ ಎನ್ನುವ ಡೈಲಾಗ್ ಭಾರೀ ಫೇಮಸ್ ಕೂಡ ಆಗಿದ್ದೇ ಸೋಷಿಯಲ್ ಮೀಡಿಯಾಗಳಿಂದ. ಇನ್ಸ್ಟಾಗ್ರಾಮ್, ಟ್ವಿಟ್ಟರ್ ಗಳಲ್ಲಿ ಜನರೊಂದಿಗೆ ಸದಾ ಸಂಪರ್ಕ ಸಾಧಿಸುವ ಆರ್.ಸಿ.ಬಿ ತಂಡದ ಎಲ್ಲಾ ಪೇಜ್ ಗಳ ಪ್ರೊಫೈಲ್ ಫೋಟೊಗಳೇ ಕಾಣುತ್ತಿಲ್ಲ. ಫ್ರಾಂಚೈಸಿಯ ಈ ನಡೆ ಭಾರಿ ಚರ್ಚೆಗೆ ಕಾರಣವಾಗಿದೆ. 

 

ಪ್ರಸಕ್ತ ವರ್ಷದ ಐಪಿಎಲ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಈ ನಡೆ ಪ್ರದರ್ಶಿಸಿದೆ. ಆರ್.ಸಿ.ಬಿ ತಂಡದ ಟ್ವಿಟ್ಟರ್ ಮತ್ತು ಇನ್ಸ್ಟಾ ಗ್ರಾಮ್ ಖಾತೆ ಹ್ಯಾಕ್ ಮಾಡಲಾಗದೆಯೇ ಎಂಬ ಅನುಮಾನವನ್ನು ಹಲವು ಅಭಿಮಾನಿಗಳು ತೋಡಿಕೊಂಡಿದ್ದಾರೆ. ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಟ್ವೀಟ್ ಮಾಡಿ ತಮ್ಮ ಕಳವಳ ತೋಡಿಕೊಂಡಿದ್ದಾರೆ. ಎಲ್ಲಾ ಪೋಸ್ಟ್ ಗಳು ಕಣ್ಮರೆಯಾಗಿದೆ. ಆದರೆ ತಂಡದ ನಾಯಕನಿಗೆ ಮಾಹಿತಿ ಇಲ್ಲ. ನಿಮಗೆ ಏನಾದರೂ ಸಹಾಯ ಬೇಕಾದರೆ ನಮಗೆ ತಿಳಿಸಿ ಎಂದು ಕ್ಯಾಪ್ಟನ್ ಕೊಹ್ಲಿ ಹೇಳಿದ್ದಾರೆ. 

 

ತಂಡದ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಟ್ವೀಟ್ ಮಾಡಿದ್ದು, ಅರೆ, ಇದು ಯಾವ ರೀತಿಯ ಗೂಗ್ಲಿ, ಪೋಸ್ಟ್ ಗಳು ಮತ್ತು ಪ್ರೊಫೈಲ್ ಫೋಟೊಗಳು ಎಲ್ಲಿಗೆ ನಾಪತ್ತೆಯಾಗಿವೆ ಎಂದಿದ್ದಾರೆ.  ಸ್ಪೋಟಕ ಆಟಗಾರ 360° ಬ್ಯಾಟ್ಮ್ಯಾನ್  ಎಬಿ ಡಿವಿಲಿಯರ್ಸ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ನಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಗೆ ಏನಾಗಿದೆ? ಇದು ಸಣ್ಣ ಬ್ರೇಕ್ ಎಂದು ನಂಬಿದ್ದೇನೆ ಎಂದು ತಮ್ಮ ಕಾಳಜಿ ಪ್ರದರ್ಶಿಸಿದ್ದಾರೆ. ದೇವದತ್ ಪಡಿಕ್ಕಲ್, ಮೈಕ್ ಹೆಸನ್, ದ್ಯಾನೀಶ್ ಸೇಠ್ ಸೇರಿದಂತೆ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಟ್ವಿಟ್ಟರ್ ನಲ್ಲಿ ಆರ್.ಸಿ.ಬಿ ನಡೆಯನ್ನು ಪ್ರಶ್ನಿಸಿದರು. ಒಟ್ಟಾರೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಈರೀತಿ ನಡೆದಿದ್ದು ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ.

Find Out More:

rcb

Related Articles: