ಭಾರತ ಮತ್ತು ಜಪಾನ್ ನಡುವೆ ಆದ ಒಪ್ಪಂದ ಏನು ಗೊತ್ತಾ.?

Soma shekhar
ಕೊರೋನಾ ಸಂಕಷ್ಟ ಕಾಲದಲ್ಲೂ ಕೂಡ ಅಕ್ಕಪಕ್ಕದ ರಾಷ್ಟ್ರಗಳಿಂದ ಉಪಟಳ ಹೆಚ್ಚಾಗುತ್ತಿರುವುದರಿಂದ ಇದನ್ನು ತಡೆಯುವ ಸಲುವಾಗಿ ಕೆಲವು ವ್ಯವಸ್ಥೆಗಳನ್ನು ಸರ್ಕಾರ ಮಾಡಿಕೊಳ್ಳುತ್ತಿದೆ.. ಅದರಂತೆ ಕೇಂದ್ರ ಸರ್ಕಾರ ಈ ರಕ್ಷಣೆಯ ವಿಚಾರದಲ್ಲಿ ಕೆಲ ಒಪ್ಪಂದವನ್ನು  ಮಾಡಿಕೊಂಡಿದೆ.  


 ಭಾರತ ಮತ್ತು ಜಪಾನ್ ಗುರುವಾರ (ಸೆ.10, 2020) ಪ್ರಮುಖ ರಕ್ಷಣಾ ಸಂಬಂಧಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಿಂದಾಗಿ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಕೊಡುಗೆ ನೀಡಿದಂತಾಗಿದೆ ಎಂದು ಹೇಳಿದೆ.



ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಪರಸ್ಪರ ವಿಶ್ವಾಸ ಮತ್ತು ಸ್ನೇಹವನ್ನು ವ್ಯಕ್ತಪಡಿಸಿ ಉಭಯ ದೇಶಗಳ ನಡುವಿನ ಬಾಂಧವ್ಯ ಇನ್ನಷ್ಟು ವೃದ್ದಿಯಾಗಲು ಸಹಾಯಕವಾಗಿದೆ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ. ಈ ರಕ್ಷಣಾ ಒಪ್ಪಂದದ ಮೂಲಕ ಚೀನಾದ ವಿಸ್ತರಣಾವಾದಕ್ಕೆ ಕಡಿವಾಣ ಹಾಕಲು ಭಾರತ ಹೊರಟಿರುವುದಾಗಿ ವಿಶ್ಲೇಷಿಸಲಾಗುತ್ತಿದೆ.



ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದವನ್ನು ಪ್ರಧಾನಿ ಮೋದಿ ಮತ್ತು ಶಿಂಜೋ ಅಬೆ ಸ್ವಾಗತಿಸಿರುವುದಾಗಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ಒಪ್ಪಂದದಿಂದಾಗಿ ಎರಡು ದೇಶಗಳ ನಡುವಿನ ರಕ್ಷಣಾ ಸಹಕಾರ ಇನ್ನಷ್ಟು ಗಟ್ಟಿಗೊಂಡಿದ್ದು, ಇಂಡೋ-ಫಿಸಿಫಿಕ್ ಪ್ರದೇಶದ ಶಾಂತಿ ಮತ್ತು ರಕ್ಷಣೆಗೆ ಕೊಡುಗೆಯನ್ನು ನೀಡಿದಂತಾಗಿದೆ ಎಂದು ಪ್ರಕಟಣೆ ತಿಳಿಸಿದೆ.



ಭಾರತ ಮತ್ತು ಜಪಾನ್ ನಡುವಿನ ಸ್ನೇಹ ವೃದ್ದಿ ಹಾಗೂ ವೈಯಕ್ತಿಕ ಬದ್ಧತೆಗೆ ಶಿಂಜೋ ಅಬೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲ್ವೆ ಯೋಜನೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮೋದಿ ಮತ್ತು ಅಬೆ ಪುನರ್ ವಿಮರ್ಶೆ ನಡೆಸಿರುವುದಾಗಿ ವರದಿ ಹೇಳಿದೆ.




ಕೋವಿಡ್ 19 ನಂತರ ಜಾಗತಿಕ ಸಮುದಾಯ ಆರ್ಥಿಕ ಹೊಡೆತ ಅನುಭವಿಸುತ್ತಿದ್ದು, ಎರಡೂ ದೇಶಗಳು ಸಂದಿಗ್ದ ಸ್ಥಿತಿಯಲ್ಲಿರುವಾಗ ಪ್ರಮುಖ ಪಾತ್ರ ವಹಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.


 

ಅಂಬಾಲಾದಲ್ಲಿ ಭಾರತೀಯ ವಾಯುಪಡೆಗೆ 5 ರಫೇಲ್ ಜೆಟ್ ಯುದ್ಧ ವಿಮಾನ ಸೇರ್ಪಡೆಯಾದ ದಿನದಂದೇ ಭಾರತ ಮತ್ತು ಜಪಾನ್ ನಡುವೆ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತ ಚೀನಾವನ್ನು ತಂತ್ರಗಾರಿಕೆಯಿಂದ ಕಟ್ಟಿಹಾಕುವತ್ತ ಹೆಜ್ಜೆ ಇಡತೊಡಗಿದೆ ಎಂದು ವರದಿ ತಿಳಿಸಿದೆ.

Find Out More:

Related Articles: