ಕೊರೋನಾ ಸಮಯದಲ್ಲಿ ಕರ್ನಾಟಕದ ಸಾಲದ ಪ್ರಮಾಣ ಎಷ್ಟಾಗಿದೆ ಗೊತ್ತಾ..? ಇಲ್ಲಿದೆ ಮಾಹಿತಿ

Soma shekhar
ಈ ವರ್ಷ ಆರಂಭದಲ್ಲೇ ದೇಶವನ್ನು ಹೊಕ್ಕರಸಿದ ಕೊರೋನಾ ವೈರಸ್  ಇಡೀ ದೇಶವನ್ನು ವ್ಯಾಪಸಿ ಇಡೀ ದೇಶವನ್ನು ಸ್ಥಬ್ಸ ಗೊಳಿಸುವಂತೆ ಮಾಡಿತ್ತು ಇದರಿಂದಾಗಿ ದೇಶದಲ್ಲಿ  ಕೈಗಾಗಿಕೆಗಳು ಹಾಗೂ ವಾಣಿಜ್ಯ ಕಂಪನಿಗಳು ಬಾಗಲೆಳೆದುಕೊಂಡವು ಇದರಿಂದಾಗಿ ಸರ್ಕಾರಕ್ಕೆ ಬರುತ್ತಿದ್ದ ವರಮಾನಕ್ಕೆ ಕತ್ತರಿ ಬಿದ್ದಿತು. ಇದರ ಜೊತೆಗೆ  ದೇಶದಲ್ಲಿ ಒಕ್ಕರಿಸಿದ ಕೊರೋನಾವನ್ನು ಹಿಮ್ಮೆಟ್ಟಿಸುವ ಸಲುವಾಗಿ ಸಾಕಷ್ಟು ಹಣವನ್ನು ಸಹ ಸರ್ಕಾರದ ಖಜಾನೆಯಿಂದ ತೆಗೆಯಲಾಯಿತು. ಇದರಿಂದ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಇದನ್ನು ಸರಿದೂಗಿಸುವ ಸಲುವಾಗಿ ಹಲವು ರಾಜ್ಯ ಸರ್ಕಾರಗಳು ಸಾಲವನ್ನು ಮಾಡಬೇಕಾಯುತು. ಇದರಿಂದ  ಈಗ ಈ ಸಾಲದ ಹೊರೆ ಹೆಚ್ಚಾಗಿದೆ.


ಕೊರೊನಾದಿಂದ ಉದ್ಭವಿಸಿರುವ ಗಂಭೀರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರತದ ಐದು ರಾಜ್ಯಗಳ ಸಾಲ ಪ್ರಮಾಣ ಈ ವರ್ಷ ದುಪ್ಪಟ್ಟಾಗಿದೆ. ಕರ್ನಾಟಕ, ಮಹಾರಾಷ್ಟ್ರ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ತಮಿಳುನಾಡು ಭಾರೀ ಪ್ರಮಾಣದಲ್ಲಿ ಸಾಲ ಮಾಡಿವೆ. ಏಪ್ರಿಲ್ 7ರಿಂದ ಆಗಸ್ಟ್ 11ರ ಮಧ್ಯೆ ಕರ್ನಾಟಕವು ಐದು ಪಟ್ಟು ಹೆಚ್ಚು ಸಾಲ ಮಾಡಿದೆ.


ಮಹಾರಾಷ್ಟ್ರವು ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚು ಸಾಲ ಮಾಡಿದೆ ಎಂದು Care ರೇಟಿಂಗ್ಸ್ ವರದಿ ಮಾಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೆ ತಂದ ಲಾಕ್ ಡೌನ್ ಕಾರಣಕ್ಕೆ ರಾಜ್ಯಗಳ ಆದಾಯಕ್ಕೆ ಕತ್ತರಿ ಬಿದ್ದಿದೆ. ಎಸ್ ಡಿಎಲ್ (ಸ್ಟೇಟ್ ಡೆವಲಪ್ ಮೆಂಟ್ ಲೋನ್) ವಿತರಿಸಿ, ಮಾರುಕಟ್ಟೆಯಿಂದ ಹಣ ಸಂಗ್ರಹಿಸುತ್ತಿರುವ ರಾಜ್ಯಗಳು ಹಣದ ಅಗತ್ಯವನ್ನು ಪೂರೈಸಿಕೊಳ್ಳುತ್ತಿವೆ.



26 ರಾಜ್ಯಗಳ ಪೈಕಿ 13 ರಾಜ್ಯಗಳು ಎಸ್ ಡಿಎಲ್ ವಿತರಿಸಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ಪಡೆದಿವೆ. ಅವುಗಳ ಸಾಲದ ಪ್ರಮಾಣವನ್ನು 2019ಕ್ಕೆ ಹೋಲಿಸಿದಲ್ಲಿ ಶೇಕಡಾ 50ರಷ್ಟು ಹೆಚ್ಚಾಗಿದೆ. ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂಬುದನ್ನು ಅರಿತುಕೊಂಡೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಗಳ ಜಿಡಿಪಿಯ (GSDP) 5% ತನಕ ಸಾಲ ಮಾಡಲು ಅನುಮತಿ ನೀಡಿದರು. ಆ ಪ್ರಮಾಣ ಅದಕ್ಕೂ ಮುನ್ನ 3%ಗೆ ನಿಗದಿ ಆಗಿತ್ತು.



ಕೇಂದ್ರ ಸರ್ಕಾರಕ್ಕೆ ಏನೇ ಆರ್ಥಿಕ ಒತ್ತಡ ಇದ್ದರೂ ಆದಾಯ ಖೋತಾ ಅನುದಾನದ ಮೊತ್ತ 12,390 ಕೋಟಿ ರುಪಾಯಿಯನ್ನು ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಮಯಕ್ಕೆ ಸರಿಯಾಗಿ ರಾಜ್ಯಗಳಿಗೆ ಪಾವತಿಸಿದೆ. ಅದೇ ರೀತಿ ಏಪ್ರಿಲ್ ಮೊದಲ ವಾರದಲ್ಲೇ ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ಮೊತ್ತ 11,092 ಕೋಟಿ ರುಪಾಯಿಯನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯದಿಂದ 4113 ಕೋಟಿ ಬಿಡುಗಡೆ ಆಗಿದೆ. ಈ ಮಧ್ಯೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರಾಜ್ಯಗಳಿಗೆ ನೀಡುವ ಓವರ್ ಡ್ರಾಫ್ಟ್ ಅವಧಿ ಹಾಗೂ ಮೊತ್ತದ ಪ್ರಮಾಣವನ್ನು ಹೆಚ್ಚಿಸಲಾಗಿದೆ.

Find Out More:

Related Articles: