ಅಂಡಮಾನ್, ನಿಕೋಬಾರ್ ನಲ್ಲಿನ ಇಂಟರ್ನೆಟ್ ಸೇವೆಗೆ ಪ್ರಧಾನಿ ಮೋದಿ ಚಾಲನೆ!!

Soma shekhar
ಇಂಟರ್ನೆಟ್ ಎಂಬುದವುದು ಇಂದು ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ದೊರೆಯುವಂತಹ ಒಂದು ಸೌಲಭ್ಯವಾಗಿದೆ ಹಾಗಾಗಿ ಪ್ರಪಂಚದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ತಲುಪ ಬಹುದಾದಂತಹ ಒಂದು ಸಾಧನ ಇದನ್ನು ಎಲ್ಲರಿಗೂ ತಲುಪಿಸುವಂತಹ ಕರ್ತವ್ಯ ಆಯಾ ದೇಶಗಳ ಕರ್ತವ್ಯವೂ ಸಹ ಆಗಿರುತ್ತದೆ. ಅದರಂತೆ ಆಯಾ ದೇಶಗಳ ಸರ್ಕಾರಗಳು ಎಲ್ಲರಿಗೂ ಇಂಟರ್ನೆಟ್ ಸೌಲಭ್ಯವನ್ನು ನೀಡುತ್ತಿದೆ. ಅದರಂತೆ ಭಾರತ ಇಂದು ಆಂಡಮಾನ್ ನಿಕೋಬಾರ್  ಆಪ್ಟಿಕಲ್ ಫೈಬರ್ ಕೇಬಲ್ಗೆ ಮೂಲಕ ಇಟರ್ನೆಟ್ ಗೆ ಪ್ರಧಾನಿ ಚಾಲನೆಯನ್ನು ನೀಡಿದರು.


ಅಂಡಮಾನ್ ಮತ್ತು ನಿಕೋಬಾರ್ ಅನ್ನು ದೇಶದ ಉಳಿದ ಭಾಗಗಳಿಗೆ ಸಂಪರ್ಕಿಸುವ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ನು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.



"ಇದು ಕೇವಲ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವಾಸಿಸುವ ಲಕ್ಷಾಂತರ ಸ್ನೇಹಿತರಿಗೆ ಮುಖ್ಯವಲ್ಲ, ಇದು ಇಡೀ ದೇಶಕ್ಕೂ ಮುಖ್ಯವಾಗಿದೆ" "ಯೋಜನೆಯು ದೊಡ್ಡದಾಗಿದೆ, ಹೆಚ್ಚಿನ ಸವಾಲುಗಳು ಇದ್ದವು. ಆದರೆ ಎಲ್ಲಾ ಅಡೆತಡೆಗಳನ್ನು ದಾಟಿ ಈ ಕೆಲಸ ಪೂರ್ಣಗೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ,.  ಜೊತೆಗೆ ಒಎಫ್‌ಸಿ "ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ ಮತ್ತು ಸ್ಥಳೀಯ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ" ಎಂದರು. ಇದರಿಂದ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಸಂಪರ್ಕ, ವೇಗದ ಮತ್ತು ವಿಶ್ವಾಸಾರ್ಹ ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಟೆಲಿಕಾಂ ಸೇವೆಗಳು, ಸ್ಥಳೀಯ ಆರ್ಥಿಕತೆಗೆ ದೊಡ್ಡ ಉತ್ತೇಜನ, ಇ-ಆಡಳಿತ, ಟೆಲಿಮೆಡಿಸಿನ್ ಮತ್ತು ಟೆಲಿ-ಶಿಕ್ಷಣ, ನೀಡಲು ಸಾಧ್ಯವಾಗುವುದು ಎಂದು ಪ್ರಧಾನಿ ಹೇಳಿದರು.


ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅತ್ಯಂತ ಮಹತ್ವದ ಆಯಕಟ್ಟಿನ ಪ್ರದೇಶಗಳಾಗಿದ್ದು, ಅಲ್ಲಿಗೆ ಸಂಪರ್ಕ ಕಲ್ಪಿಸುವುದು ದೇಶದ ಪ್ರಮುಖ ಕರ್ತವ್ಯವಾಗಿದೆ. ನಿಗದಿತ ಅವಧಿಯಲ್ಲಿ 2,300 ಕಿ.ಮೀ. ಉದ್ದದ ಕೇಬಲ್ ಅನ್ನು ಸಮುದ್ರದಡಿಯಲ್ಲಿ ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಆಳ ಸಮುದ್ರ ಸಮೀಕ್ಷೆ, ಕೇಬಲ್ ಗುಣಮಟ್ಟ ಮತ್ತು ವಿಶೇಷ ನೌಕೆಗಳನ್ನು ಉಪಯೋಗಿ ಕೇಬಲ್ ಅಳವಡಿಸುವ ಕಷ್ಟಕರ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.


 
 ಪ್ರಬಲ ಪರಿಣಾಮಕಾರಿ ಯೋಜನೆಗಳು ಅಂಡಮಾನ್ ಮತ್ತು ನಿಕೋಬಾರ್ನ 12 ದ್ವೀಪಗಳಿಗೆ ವಿಸ್ತರಣೆಯಾಗಲಿದ್ದು, ಅಲ್ಲಿ ಬಹುದೊಡ್ಡ ಸಮಸ್ಯೆಯಾಗಿದ್ದ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ ಸಮಸ್ಯೆಯನ್ನು ಇಂದು ನಿವಾರಣೆಗೊಂಡಿದೆ. ಇದರ ಹೊರತಾಗಿ ರಸ್ತೆ, ವಾಯು ಮತ್ತು ಜಲ ಸಾರಿಗೆ ಮೂಲಕ ಆ ದ್ವೀಪಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯವೂ ಶೀಘ್ರವೇ ಆರಂಭಗೊಳ್ಳಳಿದೆ.


 
 ಈ ಆಪ್ಟಿಕಲ್ ಫೈಬರ್ ಕೇಬಲ್ ಪ್ರಾಜೆಕ್ಟ್ ಯೋಜನೆಯು ಬದುಕನ್ನು ಸರಳಗೊಳಿಸುವ ದೇಶದ ಬದ್ಧತೆಯ ಭಾಗವಾಗಿದೆ. ಅದು ಆನ್ಲೈನ್ ಕ್ಲಾಸ್ಗಳಿರಬಹುದು, ಟೂರಿಸಂ, ಬ್ಯಾಂಕಿಂಗ್, ಶಾಪಿಂಗ್ ಅಥವಾ ಟೆಲಿಮೆಡಿಸಿನ್ ಇರಬಹುದು ಇವೆಲ್ಲವೂ ಇನ್ನು ಅಂಡಮಾನ್ - ನಿಕೋಬಾರ್ನಲ್ಲಿರುವ ಸಾವಿರಾರು ಕುಟುಂಬಗಳಿಗೆ ಸುಲಭವಾಗಿ ಸಿಗಲಿದೆ.


 
 ಅಂಡಮಾನ್ಗೆ ಹೋಗುವ ಪ್ರವಾಸಿಗಳಿಗೂ ಈ ಸೌಲಭ್ಯ ಸಿಗಲಿದೆ. ಅಂತರ್ ಜಾಲ ಸಂಪರ್ಕ ಸಿಗುವ ಕಾರಣ ಇನ್ನು ಅಂಡಮಾನ್ ನಿಕೋಬಾರ್ ದ್ವೀಪಗಳು ಪ್ರವಾಸಿಗರ ನಂಬರ್ ಒನ್ ಪ್ರವಾಸಿ ಸ್ಥಳವಾಗಲಿದೆ ಎಂದು ಹೇಳಿದ್ದಾರೆ.

Find Out More:

Related Articles: