ಮತ್ತೆ ಭಾರತದ ಮಾರುಕಟ್ಟೆಯನ್ನು ಪಡೆಯಲು ಯತ್ನಿಸುತ್ತಿರುವ ಟಿಕ್ ಟಾಕ್ ಆಫ್ : ಅಷ್ಟಕ್ಕೂ ಯಾವ ರೀತಿ ಗೊತ್ತಾ..?
ದೇಶದಾಧ್ಯತಂತ ಭಾರೀ ಜನಪ್ರಿಯವಾಗಿದ್ದ ಟಿಕ್ ಟಾಕ್ ಅನ್ನು ಅದೇಷ್ಟೋ ಜನ ಅಭಿಮಾನಿಗಳೂ ಪ್ರತಿನಿತ್ಯದ ಜೀವನದ ಒಂದು ಭಾಗವನ್ನಾಗಿ ಪರಿಗಣಿಸಿ ಇದರಲ್ಲೇ ಮುಳುಗಿಹೋಗಿದ್ದರು. ಆದರೆ ಭಾರತ ಮತ್ತು ಚೀನಾ ನಡುವೆ ನಡೆದ ಗಡಿವಿವಾದದಲ್ಲಿ ಭಾರತ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಿ ಆದೇಶವನ್ನು ಹೊರಡಿಸಿತ್ತು, ಇದರಿಂದಾಗಿ ಭಾರತದಲ್ಲೇ ತಯಾರಾದ ಅನೇಕ ಆಪ್ ಗಳು ಮುನ್ನಲೆಗೆ ಬಂದವು. ಈ ಸಮಯದಲ್ಲಿ ಟಿಕ್ ಟಾಕ್ ಭಾರತದ ಬಹುದೊಡ್ಡ ಮಾರುಕಟ್ಟೆಯನ್ನು ಕಳೆದುಕೊಂಡಂತಾಗಿದೆ. ಇದರಿಂದ ಕಂಪನಿ ಸಾಕಷ್ಟು ನಷ್ಟವನ್ನು ಅನುಭವಿಸಿದೆ, ಹಾಗಾಗಿ ಭಾರತದ ಮಾರುಕಟ್ಟೆಯನ್ನು ಮತ್ತೆ ಪಡೆಯುವ ಉದ್ದೇಶದಿಂದ ಟಿಕ್ ಟಾಕ್ ಭಾರತವನ್ನು ಪ್ರವೇಶಿಸಲು ತವಕಿಸುತ್ತಿದೆ. ಅಷ್ಟಕ್ಕೂ ಟಿಕ್ ಟಾಕ್ ಭಾರತಕ್ಕೆ ಬರಲು ಯಾವ ರೀತಿ ಪ್ರಯತ್ನಿಸುತ್ತಿದೆ ಗೊತ್ತಾ,,
ಚೀನಾ ಮೂಲದ್ದು ಎಂಬ ಕಾರಣಕ್ಕೆ ಭಾರತದಲ್ಲಿ ಬ್ಯಾನ್ ಆಗಿರುವ ಶಾರ್ಟ್ ವಿಡಿಯೋ ಆಯಪ್ ಟಿಕ್ಟಾಕ್ ಮತ್ತೆ ಭಾರತದಲ್ಲಿ ಸೇವೆ ಆರಂಭಿಸುವ ಉತ್ಸಾಹದಲ್ಲಿದೆ. ಹೌದು… ಜಾಗತಿಕವಾಗಿ ಉತ್ತಮ ವಹಿವಾಟು ಸಂಬಂಧ ಉಳಿಸಿಕೊಳ್ಳಲು ಚೀನಾದಿಂದ ಅಂತರ ಕಾಪಾಡಿಕೊಳ್ಳಲೇಬೇಕಿದೆ. ಹೀಗಾಗಿ ತನ್ನ ಕೇಂದ್ರ ಸ್ಥಾನವನ್ನು ಸ್ಥಳಾಂತರಿಸಲು ನಿರ್ಧರಿಸಿದ್ದು, ಚೀನಾವನ್ನೇ ಬಿಟ್ಟೋಡುತ್ತಿದೆ. ಇಂಗ್ಲೆಂಡ್ನಲ್ಲಿ ಮುಖ್ಯ ಕಚೇರಿ ಹೊಂದಲು ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ ಟಿಕ್ಟಾಕ್. ಕೇಂದ್ರ ಕಚೇರಿಗೆ ಲಂಡನ್ ಸೇರಿ ಹಲವು ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ, ಯಾವುದೂ ಅಂತಿಮವಾಗಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿವೆ.
ಭಾರತದ ಬಳಿಕ ಅಮೆರಿಕ ಕೂಡ ಚೀನಿ ಆಯಪ್ಗಳನ್ನು ನಿಷೇಧಿಸಿದೆ. ಹಲವು ಐರೋಪ್ಯ ದೇಶಗಳಲ್ಲೂ ಇದರ ಚೀನಾ ಮೂಲದ ಬಗ್ಗೆ ಅಸಮಾಧಾನವಿದೆ. ಈ ಕಾರಣಕ್ಕಾಗಿ ಚೀನಾದಿಂದ ಹೊರಗಿದ್ದುಕೊಂಡೇ ಕಾರ್ಯಾಚರಿಸಲು ಕಂಪನಿ ಯೋಜನೆ ರೂಪಿಸಿದೆ.
ಲಂಡನ್ ಹೊರತುಪಡಿಸಿ ಬೇರಾವ ಸ್ಥಳಗಳನ್ನು ಕಂಪನಿ ಗುರುತಿಸಿದೆ ಎನ್ನುವುದು ಖಚಿತವಾಗಿಲ್ಲ. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಿನ ಸಿಬ್ಬಂದಿ ಹೊಂದಿದೆ. ಅಲ್ಲದೇ, ಅಮೆರಿಕದ ಕೆವಿನ್ ಮೇಯರ್ ಇದರ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಹೀಗಾಗಿ ಅಮೆರಿಕದಲ್ಲೂ ನೆಲೆ ಕಂಡುಕೊಳ್ಳಬಹುದು ಎಂದು ಹೇಳಲಾಗಿದೆ.
ಟಿಕ್ಟಾಕ್ ಚೀನಾ ಮೂಲದ ಬೈಟ್ ಡಾನ್ಸ್ ಕಂಪನಿಯ ಒಡೆತನದಲ್ಲಿರುವ ಆಯಪ್ ಆಗಿದೆ. ಚೀನಾಗೆ ಮಾಹಿತಿ ರವಾನಿಸುತ್ತಿದೆ ಎಂಬ ಆರೋಪದಲ್ಲಿ ನಿಷೇಧಕ್ಕೆ ಒಳಗಾಗಿದೆ. ಒಂದು ಚೀನಾದಿಂದ ದೂರವುಳಿದಿದ್ದೇ ಆದಲ್ಲಿ ಮತ್ತೆ ಭಾರತದಲ್ಲಿ ಆಯಪ್ ಸೇವೆ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಿವೆ.