ಚೀನಾದ ಆಡಳಿತವನ್ನು 'ಧೂರ್ತ ಆಡಳಿತ' ಎಂದು ಅಮೇರಿಕಾ ಕರೆದಿರುವುದಕ್ಕೆ ಕಾರಣ ಏನು..?

Soma shekhar

ಭಾರತ ಮತ್ತು ಚೀನಾ ನಡುವೆ ಲಡಾಕ್ ನ ಗಾಲ್ವಾನಾದ ಗಡಿವಿಚಾರವಾಗಿ ಸಂಕರ್ಷನಡೆಯುತ್ತಿದೆ. ಈ ಒಂದು ಸಂಘರ್ಷದಿಂದಾಗಿ 20 ಜ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಈ ಹೀನ ಕೃತ್ಯಕ್ಕೆ ಜಗತ್ತಿನಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಕುರಿತು ಅಮೇರಿಕಾವೂ ಕೂಡ ಚೀನಾವನ್ನು ಟೀಕಿಸಿದೆ.

 

ಹೌದು ಭಾರತದೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸಿರುವುದಕ್ಕಾಗಿ ಅಮೆರಿಕವು ಶುಕ್ರವಾರ ಚೀನಾ ಸೇನೆಯನ್ನು ಟೀಕಿಸಿದೆ ಹಾಗೂ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು 'ಧೂರ್ತ ಆಡಳಿತ'ವಾಗಿದೆ ಎಂದು ಬಣ್ಣಿಸಿದೆ.

 

ನ್ಯಾಟೋ ಮುಂತಾದ ಸಂಸ್ಥೆಗಳ ಮೂಲಕ ಮುಕ್ತ ಜಗತ್ತು ಮಾಡಿರುವ ಎಲ್ಲ ಬೆಳವಣಿಗೆಗಳನ್ನು ನಾಶಪಡಿಸಲು ಹಾಗೂ ಚೀನಾವನ್ನು ಒಳಗೊಳಿಸುವ ನೂತನ ನಿಯಮಗಳು ಮತ್ತು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಚೀನಾ ಬಯಸಿದೆ ಎಂದು ಚೀನಾ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದರು.

 

''ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಭಾರತದೊಂದಿಗಿನ ಗಡಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಅದು ದಕ್ಷಿಣ ಚೀನಾ ಸಮುದ್ರವನ್ನು ಸೇನಾ ಚಟುವಟಿಕೆಗಳ ಕೇಂದ್ರವಾಗಿಸಿದೆ ಹಾಗೂ ಅಲ್ಲಿನ ಹೆಚ್ಚಿನ ಜಲಪ್ರದೇಶ ತನ್ನದೆಂದು ಹೇಳಿಕೊಳ್ಳುತ್ತಿದೆ. ಆಮೂಲಕ ಪ್ರಮುಖ ಸಮುದ್ರ ಮಾರ್ಗಗಳಿಗೆ ಬೆದರಿಕೆಯೊಡ್ಡುತ್ತಿದೆ'' ಎಂದು ಅವರು ನುಡಿದರು.

 

ಈ ವಾರದ ಆರಂಭದಲ್ಲಿ ಲಡಾಖ್‌ನಲ್ಲಿನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಮೃತಪಟ್ಟ 20 ಭಾರತೀಯ ಸೈನಿಕರ ಸಾವಿಗೆ ಸಂತಾಪ ಸೂಚಿಸಿದ ಒಂದು ದಿನದ ಬಳಿಕ ಪಾಂಪಿಯೊ ಈ ಹೇಳಿಕೆ ನೀಡಿದ್ದಾರೆ.

 

ಶುಕ್ರವಾರ ನಡೆದ '2020 ಕೋಪನ್‌ಹೇಗನ್ ಡೆಮಾಕ್ರಸಿ ಶೃಂಗಸಮ್ಮೇಳನ'ದಲ್ಲಿ 'ಯುರೋಪ್ ಮತ್ತು ಚೀನಾ ಸವಾಲು' ಎಂಬ ವಿಷಯದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚೀನಾವನ್ನು ಬದಲಿಸಬಹುದು ಎಂಬ ವಿಶ್ವಾಸವನ್ನು ಪಾಶ್ಚಾತ್ಯ ದೇಶಗಳು ಹೊಂದಿದ್ದವು ''ಚೀನಾ ಕಮ್ಯುನಿಸ್ಟ್ ಪಕ್ಷವನ್ನು ಬದಲಿಸಬಲ್ಲೆವು ಹಾಗೂ ಆ ಮೂಲಕ ಚೀನಾದ ಜನರ ಜೀವನವನ್ನು ಸುಧಾರಿಸಬಹುದು ಎಂಬ ವಿಶ್ವಾಸವನ್ನು ಹಲವು ವರ್ಷಗಳ ಕಾಲ ಪಾಶ್ಚಾತ್ಯ ದೇಶಗಳು ಹೊಂದಿದ್ದವು'' ಎಂದು ಪಾಂಪಿಯೊ ನುಡಿದರು.

 

''ಈ ಹಂತದಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷವು ನಮ್ಮ ಸದ್ಭಾವನೆಯ ಪ್ರಯೋಜನವನ್ನು ಪಡೆದುಕೊಂಡಿತು ಹಾಗೂ ತನಗೆ ಸಹಕಾರಾತ್ಮಕ ಸಂಬಂಧ ಬೇಕು ಎಂಬ ಭರವಸೆಯನ್ನು ನೀಡಿತು. 'ನಿಮ್ಮ ಶಕ್ತಿಯನ್ನು ಮರೆಮಾಚಿ ಹಾಗೂ ಸರಿಯಾದ ಸಮಯಕ್ಕಾಗಿ ಕಾಯಿರಿ' ಎಂಬುದಾಗಿ ಚೀನಾದ ಮಾಜಿ ರಾಜಕಾರಣಿ ಡೆಂಗ್ ಕ್ಸಿಯಾವೊಪಿಂಗ್ ಹೇಳಿದ್ದರು. ಹೀಗೆ ಯಾಕೆ ಆಯಿತು ಎಂಬ ಬಗ್ಗೆ ನಾನು ಇತರ ವೇದಿಕೆಗಳಲ್ಲೂ ಮಾತನಾಡಿದ್ದೇನೆ. ಅದೊಂದು ಸಂಕೀರ್ಣ ಕತೆ'' ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಹೇಳಿದರು.

 

Find Out More:

Related Articles: