ಕೊರೋನಾ ವೈರಸ್ ನಿವಾರಣೆಗೆ ಹೈಡ್ರೋಕ್ಲೋರೋಕ್ವೀನ್ ಔಷಧಿ ರಾಮಬಾಣವಾ..? ಇಲ್ಲಿದೆ ಉತ್ತರ

Soma shekhar

 ಕೊರೋನಾ ವೈರಸ್ ಇಡೀ ವಿಶ್ವವನ್ನೇ ವ್ಯಾಪಿಸಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡು ಅನೇಕ ಜನರರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ಇಡೀ ವಿಶ್ವದಾಧ್ಯಂತ ಕೊರೋನಾ ವೈರಸ್ ಗೆ ಸಾಕಷ್ಟು ಔಷಧಿಯನ್ನು ಸಂಶೋಧಿಸಲಾಗುತ್ತಿದೆ, ಸಂಶೋಧಕರ ಸಂಸ್ಥೆಯೊಂದು ಭಾರತದಲ್ಲಿ ಮಲೇರಿಯಾಗೆ ನೀಡಲಾಗುತ್ತಿದ್ದ ಹೈಡ್ರೋಕ್ಲೋರಿಕ್ವೀನ್ ಔಷಧಿ ಕೊರೋನಾ ವೈರಸ್ ಗೆ ನೀಡಬಹುದು ಎಂದು ನೀಡಲಾಗುವುದು. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಹೈಡ್ರೋ ಕ್ಲೋರಿಕ್ವೀನ್ ಮಾತ್ರೆಯನ್ನು ಕುರಿತು ಸಂಶೋಧನೆಯನ್ನು ಶುರು ಮಾಡಿದೆ..

 

ಹೌದು ವಿಶ್ವ ಆರೋಗ್ಯ ಸಂಸ್ಥೆ ಕರೊನಾ ಸೋಂಕಿತರ ಮೇಲೆ ಮಲೇರಿಯಾ ನಿವಾರಕ ಔಷಧ ಭಾರತದ ಹೈಡ್ರೊಕ್ಸಿಕ್ಲೋರೊಕ್ವಿನ್​ (ಎಚ್​ಸಿಕ್ಯು) ಮಾತ್ರೆಗಳ ಕ್ಲಿನಿಕಲ್​ ಟ್ರಯಲ್​ ಆರಂಭಿಸಿದೆ. ಕರೊನಾ ತಡೆಗಟ್ಟುವಲ್ಲಿ ಈ ಮಾತ್ರೆ ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದನ್ನು ಅಧಿಕೃತವಾಗಿ ಸಂಶೋಧನೆ ನಡೆಸಲಿದೆ.

 

ಕೋವಿಡ್​ ಆರಂಭವಾದ ದಿನದಿಂದಲೂ ಮಲೇರಿಯಾ ಮಾತ್ರಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಇದು ವೈರಸ್​ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದ್ದರಿಂದ ವಿಶ್ವದ ಹಲವು ದೇಶಗಳು ಇದನ್ನು ಬಳಸಲು ಆರಂಭಿಸಿದ್ದವು. ಕೋವಿಡ್​ನಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಈ ಮಾತ್ರೆ ನೀಡಲಾಗುತ್ತಿತ್ತು. ಸ್ವತಃ ಭಾರತವೇ 120ಕ್ಕೂ ಅಧಿಕ ದೇಶಗಳಿಗೆ ನೆರವಿನ ರೂಪದಲ್ಲಿ ಈ ಮಾತ್ರಗಳನ್ನು ರವಾನಿಸಿತ್ತು.

 

ವೈದ್ಯರ ಸಲಹೆ ಇಲ್ಲದಿದ್ದರೂ ಸೋಂಕು ತಡೆಗಾಗಿ ಈ ಮಾತ್ರೆ ಸೇವಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ಈ ಮಾತ್ರೆಯ ವ್ಯಾಪಕ ಬಳಕೆಗೆ ನಿದರ್ಶನವಾಗಿತ್ತು.

 

ಆದರೆ, ಈ ಮಾತ್ರೆಯಿಂದ ಅಡ್ಡಪರಿಣಾಮಗಳು ಹೆಚ್ಚಾಗುತ್ತಿವೆ. ಅಲ್ಲದೇ, ಮಾರಣಾಂತಿಕವಾಗಿಯೂ ಪರಿಣಮಿಸುತ್ತಿದೆ ಎಂದು ಲ್ಯಾನ್ಸೆಟ್​ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿತ್ತು, ಇದರಿಂದಾಗಿ ಎಚ್​ಸಿಕ್ಯೂ ಬಳಕೆ ಬಗ್ಗೆ ಪ್ರಶ್ನೆಗಳೆದಿದ್ದವು. ಜತೆಗೆ, ಈ ಕುರಿತು ನಡೆಸಲಾಗುತ್ತಿದ್ದ ಕ್ಲಿನಿಕಲ್​ ಟ್ರಯಲ್​ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ಥಗಿತಗೊಳಿಸಿತ್ತು.

 

ಆದರೆ, ಎಚ್​ಸಿಕ್ಯು ಅಡ್ಡ ಪರಿಣಾಮದ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಪಾರದರ್ಶಕತೆ ಹಾಗೂ ಮಾಹಿತಿ ವಿಶ್ಲೇಷಣೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಔಷಧದ ಮೇಲಿನ ಸಂಶೋಧನೆಯನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಟೆಡ್ರೋಸ್​ ಅಡಾನಾಮ್​ ತಿಳಿಸಿದ್ದಾರೆ.

 

ಜಗತ್ತಿನಾದ್ಯಂತ 35ಕ್ಕೂ ಅಧಿಕ ದೇಶಗಳ 400ಕ್ಕೂ ಆಸ್ಪತ್ರೆಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಲಿಡಾರಿಟಿ ಟ್ರಯಲ್​ ನೆಡೆಸಲಾಗುತ್ತಿದೆ. ಸದ್ಯ ಕರೊನಾಗೆ ಲಸಿಕೆ ಇಲ್ಲದಿರುವುದರಿಂದ ಎಚ್​ಸಿಕ್ಯೂ ಸೇರಿ ಲಭ್ಯವಿರುವ ಹಲವು ಔಷಧಗಳು ಕೋವಿಡ್​ ತಡೆಗಟ್ಟುವಲ್ಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ಈ ಸಾಲಿಡಾರಿಟಿ ಟ್ರಯಲ್​ ಮೂಲಕ ಕಂಡುಕೊಳ್ಳಲಾಗುತ್ತಿದೆ.

 

Find Out More:

Related Articles: