ಕೊರೋನಾವನ್ನು ಈ ಒಂದು ಅಭ್ಯಾಸದಿಂದ ದೂರ ಮಾಡಬಹುದು ಎಂದು ಮೋದಿ ಹೇಳಿದ್ದಾರೆ.!! ಅಷ್ಟಕ್ಕೂ ಜನರು ಮಾಡಬೇಕಾದ ಆ ಅಭ್ಯಾಸ ಯಾವುದು..?
ಕೊರೋನಾ ವೈರಸ್ ಸೋಂಕು ಇಡೀ ವಿಶ್ವ ದಲ್ಲಿ ಹೆಚ್ಚಾಗುತ್ತಿದೆ ಅದೇ ರೀತಿ ಭಾರತದಲ್ಲೂ ಕೂಡ ಸಾಕಷ್ಟು ಕೊರೋನಾ ಪ್ರಕರಣಗಳು ದಿನವೊಂದಕ್ಕೆ ಕಾಣಿಸಿಕೊಳ್ಳುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಲಾಕ್ ಡೌನ್ ಅನ್ನು ತೆರವುಗೊಳಿಸಲಾಗುತ್ತಿದೆ. ಹೀಗಾಗಿ ಕೊರೋನಾ ಸೋಂಕು ಇನ್ನು ಹೆಚ್ಚಾಗುವ ಲಕ್ಷಣಗಳು ಹೆಚ್ಚಾಗಿದೆ. ಆದರೆ ಇದಕ್ಕೆ ಪ್ರಧಾನಿ ಮೋದಿಯವರು ಪರಿವೊಂದನ್ನು ಸೂಚಿಸಿದ್ದಾರೆ. ಪ್ರಧಾನಿ ಮೋದಿ ಹೇಳಿರುವ ಪರಿಹಾರವನ್ನು ಅಭ್ಯಾಸ ಮಾಡುವುದರಿಂದ ಕೊರೋನಾ ಇಂದ ಮುಕ್ತಿಯನ್ನು ಪಡೆಯಬಹುದು. ಅಷ್ಟಕ್ಕೂ ಪ್ರಧಾನಿ ಮೋದಿಯವರು ಸೂಚಿಸಿರುವ ಆ ಪರಿಹಾರ ಯಾವುದು..?
ಕೋವಿಡ್-19 ನಮ್ಮ ಉಸಿರಾಟ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ. ಯೋಗಾಭ್ಯಾಸದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಸಮುದಾಯ, ರೋಗ ನಿರೋಧಕತೆ ಮತ್ತು ಏಕತೆಗೆ ಸಹಕಾರಿ. ಹಾಗಾಗಿ ಯೋಗ, ಆಯುರ್ವೇದಗಳಿಂದ ನಾವು ಕೋವಿಡ್-19 ವನ್ನು ಸೋಲಿಸಬಹುದು.
– ಇವು ಪ್ರಧಾನಿ ಮೋದಿ ಯೋಗ, ಆಯುರ್ವೇದದ ಬಗೆಗೆ ಆಡಿರುವ ಮಾತುಗಳು. ರವಿವಾರ ಆಕಾಶವಾಣಿಯಲ್ಲಿ ತಾವು ನಡೆಸಿಕೊಡುವ “ಮನ್ ಕೀ ಬಾತ್’ನ 65ನೇ ಸಂಚಿಕೆಯಲ್ಲಿ ಮಾತನಾಡಿ ಯೋಗ, ಆಯುರ್ವೇದವನ್ನು ಅಳವಡಿಸಿಕೊಳ್ಳಲು ದೇಶವಾಸಿಗಳಿಗೆ ಪರೋಕ್ಷವಾಗಿ ಕರೆ ನೀಡಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವಕ್ಕೆ ಯೋಗದ ಮಹತ್ವವನ್ನು ಸಾರಿದೆ. ಆರೋಗ್ಯದಿಂದಿರಲು ಮತ್ತು ಸುಖೀ ಜೀವನ ನಡೆಸಲು ಯೋಗ ಅತ್ಯುಪಯುಕ್ತ ಸಾಧನ ಎಂಬುದನ್ನು ಜನ ಅರಿತುಕೊಂಡಿದ್ದಾರೆ. ಈ ಭಾರತೀಯ ವಿದ್ಯೆಯನ್ನು ಕಲಿಯಲು ಹಾಲಿವುಡ್‌ನಿಂದ ಹರಿದ್ವಾರದ ವರೆಗೆ ಜನರು ಉತ್ಸುಕರಾಗಿದ್ದಾರೆ ಎಂದರು.
ಪ್ರಾಣಾಯಾಮದಿಂದ ಉಸಿರಾಟ ವ್ಯವಸ್ಥೆಯನ್ನು ಸದೃಢಗೊಳಿಸಬಹುದು. ಯಾರಿಗೂ ಗೊತ್ತಿರದ ವಿಚಾರವೊಂದನ್ನು ನಾನು ತಿಳಿಸುತ್ತೇನೆ. ಅನೇಕ ವಿಶ್ವ ನಾಯಕರ ಜತೆಗೆ ಮಾತುಕತೆ ನಡೆಸುವಾಗ ಅನೇಕರು ಯೋಗ ಮತ್ತು ಆಯುರ್ವೇದಗಳ ಬಗ್ಗೆ ಹೆಚ್ಚು ಆಸಕ್ತಿಯಿಂದ ನನ್ನ ಬಳಿ ಮಾಹಿತಿ ಪಡೆಯುತ್ತಿದ್ದರು. ಈಗ ಅನೇಕ ನಾಯಕರು ಕೋವಿಡ್-19 ವನ್ನು ನಿಗ್ರಹಿಸಲು ಯೋಗ ಮತ್ತು ಆಯುರ್ವೇದ ಸಹಕಾರಿಯಲ್ಲವೆ ಎಂದು ಪ್ರಶ್ನಿಸುತ್ತಿದ್ದಾರೆ. ಈಗೀಗಂತೂ ಎಲ್ಲರೂ ಯೋಗ, ಆಯುರ್ವೇದಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದಿದ್ದಾರೆ.
ಮುಂಜಾಗ್ರತೆ ಪಾಲಿಸೋಣ
ಕೋವಿಡ್-19 ವೈರಾಣು ನಮ್ಮೊಂದಿಗೇ ಜೀವಿಸುತ್ತಿರುತ್ತದೆ. ನಾವೂ ಅದರೊಂದಿಗೆ ಬದುಕುವುದನ್ನು ಕಲಿಯಬೇಕಷ್ಟೆ. ಎಚ್ಚರಿಕೆಯಿಂದ ಇರುವುದು ಮುಖ್ಯ. ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ಆರು ಅಡಿ ಅಂತರ ಕಾಯ್ದುಕೊಳ್ಳುವುದು ಕಷ್ಟವೇನೂ ಅಲ್ಲ. ಅವನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕರಾಗಿರೋಣ ಎಂದು ಮೋದಿ ಕರೆ ನೀಡಿದರು.
ಕೋವಿಡ್-19 ಎದುರಿಸಿದ ರೀತಿ ವಿಭಿನ್ನ
ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಕೋವಿಡ್-19 ಎದುರಿಸಿದ ರೀತಿ ತೀರಾ ವಿಭಿನ್ನ. ಏಕೆಂದರೆ ನಮ್ಮದು ಅತೀ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ. ಆದರೂ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ನಾವು ಸಫಲರಾಗಿದ್ದೇವೆ. ನಮ್ಮಲ್ಲಿ ಮರಣ ಪ್ರಮಾಣವೂ ತೀರಾ ಕಡಿಮೆಯಿದೆ ಎಂದಿದ್ದಾರೆ.
ಸೇವಾಶಕ್ತಿಯ ಅನಾವರಣ
ಕೋವಿಡ್-19 ಕಾಲದಲ್ಲಿ ನಾವು ಕಂಡ ಮತ್ತೂಂದು ಆಸಕ್ತಿದಾಯಕ ವಿಚಾರವೇನೆಂದರೆ ನಮ್ಮಲ್ಲಿರುವ ಸೇವಾಶಕ್ತಿ. ಲಾಕ್‌ಡೌನ್‌ನ ಅವಧಿಯಲ್ಲಿ ಭಾರತೀಯ ಸೇವಾಶಕ್ತಿ ಏನೆಂಬುದು ಇಡೀ ವಿಶ್ವಕ್ಕೆ ತಿಳಿಯಿತು. ಮಹಿಳಾ ಸ್ವ-ಸಹಾಯ ಗುಂಪುಗಳ ಪರಿಶ್ರಮ, ತ್ಯಾಗ, ಸೇವೆ ಅತ್ಯಂತ ಶ್ಲಾಘನೀಯ ಎಂದು ಪ್ರಧಾನಿ ತಿಳಿಸಿದರು.