ಕೊರೋನಾ ಬಗ್ಗೆ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಏನು ಹೇಳಿದ್ದಾರೆ ಗೊತ್ತಾ..?
ಸುಮಾರು ಎರಡು ತಿಂಗಳಿಂದ ಲಾಕ್ ಆಗಿದ್ದ ಭಾರತ ನಿಧಾನವಾಗಿ ತೆರೆದುಕೊಳ್ಳುತ್ತಿದೆ, ದೈನಂದಿನ ವ್ಯವಹಾರಗಳು ಆರಂಭವಾಗುತ್ತಿದೆ. ಲಾಕ್ ಡೌನ್ ನಲ್ಲಿ ಬಂದ್ ಆಗಿದ್ದ ಎಲ್ಲಾ ಕಾರ್ಖಾನೆಗಳು, ಉದ್ದಿಮೆಗಳು ಪುಟಿದೆದ್ದು ನನ್ನ ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗವನ್ನು ನೀಡಉತ್ತಿದೆ. ಆದರೆ ಕೊರೋನಾ ವೈರಸ್ ಮಾತ್ರ ಒಂದಿನಿತು ಕಡಿಮೆಯಾದ ಲಕ್ಷಣಗಳನ್ನು ಕಾಣಲಿಲ್ಲ. ಇದರ ನಡುವೆಯೂ ಲಾಕ್ ಡೌನ್ ಅನ್ನು ಸಡಿಲಗೊಳಿಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ದೇಶದ ಜನತೆಗೆ ಕುರಿತು ಮಾತನಾಡಿದ್ದಾರೆ..
ದೇಶದಲ್ಲಿ ಕಳೆದ 2 ತಿಂಗಳಿಂದ ಬಂದ್ ಆಗಿದ್ದ ಬಸ್, ಸ್ಪೆಷಲ್ ರೈಲು, ವಿಮಾನ ಸಂಚಾರ ಆರಂಭವಾಗಿದೆ. ದೇಶದಲ್ಲಿ ನಿಧಾನವಾಗಿ ಕೆಲಸಗಳು ಆರಂಭವಾಗ್ತಿದೆ. ಅರ್ಥ ವ್ಯವಸ್ಥೆಯ ಒಂದು ದೊಡ್ಡ ಭಾಗ ಈಗ ಶುರುವಾಗಿದೆ. ಇಂತಹ ಸಮಯದಲ್ಲಿ ನಾವು ಇನ್ನಷ್ಟು ಹೆಚ್ಚು ಜಾಗರೂಕರಾಗಿರಬೇಕು. ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳೋದನ್ನ ಮುಂದುವರೆಸಬೇಕಿದೆ ಎಂದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಯೋಗಾಭ್ಯಾಸ ಪ್ರಮುಖ ಸ್ಥಾನ ಪಡೆದಿದೆ. ಹರಿದ್ವಾರದಿಂದ ಹಾಲಿವುಡ್ವರೆಗೂ ಎಲ್ಲರು ಯೋಗವನ್ನು ಮಾಡ್ತಿದ್ದಾರೆ. ಹೀಗಾಗಿ ಎಲ್ಲರೂ ಯೋಗ ಮಾಡಿ ಕೊರೊನಾ ಓಡಿಸಿ ಎಂದು ಪ್ರಧಾನಿ ಕರೆ ನೀಡಿದರು.
ಉಸಿರಾಟದ ಸಮಸ್ಯೆಗೆ ಯೋಗದಿಂದ ಪರಿಹಾರವಿದೆ. ಕಮ್ಯೂನಿಟಿ, ಯೂನಿಟಿ, ಇಮ್ಯೂನಿಟಿಗೆ ಸಹಕಾರಿಯಾಗಲಿದೆ. ಮೈ ಲೈಫ್ ಮೈ ಯೋಗ್ ಅಂತಾರಾಷ್ಟ್ರೀಯ ವಿಡಿಯೋ ಬ್ಲಾಗ್ ಆರಂಭಿಸಿದ್ದು, ಸ್ಪರ್ಧೆಯಲ್ಲಿ ಎಲ್ಲರೂ ಭಾಗಿಯಾಗಬಹುದು. 3 ನಿಮಿಷದ ಯೋಗದ ವಿಡಿಯೋವನ್ನು ಅಪ್ಲೋಡ್ ಮಾಡಬೇಕು ಎಂದರು.
ಎಲ್ಲರ ಸಾಮೂಹಿಕ ಪ್ರಯತ್ನದಿಂದ ನಾವು ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಡ್ತಿದ್ದೀವಿ. ವಿಶ್ವದ ಬೇರೆ ದೇಶಗಳನ್ನ ಹೋಲಿಸಿಕೊಂಡರೆ ನಮ್ಮ ದೇಶದಲ್ಲಿ ಕೊರೊನಾ ಅಷ್ಟರಮಟ್ಟಿಗೆ ಹರಡಿಲ್ಲ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯೂ ನಮ್ಮಲ್ಲಿ ಜಾಸ್ತಿಯಾಗಿಲ್ಲ. ಆದ್ರೆ ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ನಾವು ತುಂಬಾ ದೂರದ ಹಾದಿಯನ್ನ ಸವಿಸಬೇಕಿದೆ ಎಂದು ಹೇಳಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ನಮ್ಮ ಅತಿದೊಡ್ಡ ಶಕ್ತಿ ಅಂದ್ರೆ ದೇಶದ ಜನರ ಸೇವಾ ಶಕ್ತಿ ಎಂದಿದ್ದಾರೆ. ವೈದ್ಯರು, ನರ್ಸ್, ಮಾಧ್ಯಮ, ಪೊಲೀಸರು ಸೇವೆ ಪ್ರಶಂಸನೀಯ ಎಂದು ಶ್ಲಾಘಿಸಿದರು.
ಇದೇ ವೇಳೆ ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಮಾತನಾಡಿದ ಮೋದಿ, ಕೋಟಿ ಕೋಟಿ ಬಡವರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಉಚಿತವಾಗಿ ಚಿಕಿತ್ಸೆ ನೀಡಲಾಗ್ತಿದೆ. ಇದುವರೆಗೂ 1 ಕೋಟಿಗಿಂತ ಹೆಚ್ಚು ಜನರು ಇದರ ಲಾಭ ಪಡೆದುಕೊಂಡಿದ್ದಾರೆ ಎಂದರು. ಶೇಕಡ 80% ಹಳ್ಳಿಗಳ ಜನರು ಉಚಿತ ಚಿಕಿತ್ಸೆ ಪಡೆದುಕೊಂಡಿದ್ದಾರೆ.