ಕೊರೋನಾ ವೈರಸ್ ವಿರುದ್ಧ ಹೋರಾಡಲು ವೆಬ್ ಸೈಟ್ ನ್ನು ಉದ್ಘಾಟಿಸಿದ ಪ್ರಧಾನಿ ಮೋದಿ: ಅಷ್ಟಕ್ಕೂ ಆ ವೆಬ್ ಸೈಟ್ ಯಾವುದು ಗೊತ್ತಾ..?

Soma shekhar

ಕೊರೋನಾ ವೈರಸ್ ಇಂದಾಗಿ  ಇಡೀ ದೇಶವೇ ಲಾಕ್ ಡೌನ್ ಆಗಿರುವಾಗ ಜನ ಜೀವನ ಅಸ್ತ ವ್ಯಸ್ತವಾಗಿದೆ. ಇದಕ್ಕೆ ಸರ್ಕಾರಗಳಿಂದ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಕೂಡ ಯಾವುದೇ ಪ್ರಯೋಜನವಾಗದೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಪ್ರಧಾನಿ ಮೋದಿ ಕೊರೋನಾ ವಿರುದ‍್ಧ ಹೋರಾಡಲು ವೆಬ್ ಸೈಟ್ ಒಂದನ್ನು ಜಾರಿಗೊಳಿಸಿದ್ದಾರೆ. ಇದರ ಮೂಲಕ ಕೊರೋನಾ ವೈರಸ್ ವಿರುದ್ಧ ಹೋರಾಡ ಬಹುದಾಗಿದೆ ಅಷ್ಟಕ್ಕೂ ಆ ವೆಬ್ ಸೈಟ್ ಯಾವುದು ಗೊತ್ತಾ..?

 

ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೋರಾನ ವೈರಸ್‌ ವಿರುದ್ದ ಹೋರಾಡುವ ಸಲುವಾಗಿ https://covidwarriors.gov.in ಎನ್ನುವ ಹೆಸರಿನ ಡಿಜಿಟಲ್ ವೆಬ್‌ ಪೋರ್ಟಲ್ ಗೆ ಚಾಲನೆ ನೀಡಿದ್ದಾರೆ. ಅವರು ಇಂದು 'ಮನ್ ಕಿ ಬಾತ್' ಆರಂಭಕ್ಕೂ ಮುನ್ನ ಈ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಇದೇ ವೇಳೆ ಅವರು ಮಾತನಾಡುತ್ತ ಕೊರೊನಾವೈರಸ್ ವಿರುದ್ಧ ಭಾರತದ ಹೋರಾಟವು ಜನರನ್ನು ಪ್ರೇರೇಪಿಸುತ್ತದೆ. ಈ ಹೋರಾಟವನ್ನು ಜನರು ಮತ್ತು ಆಡಳಿತ ಒಟ್ಟಾಗಿ ನಡೆಸುವುದಕ್ಕೆ ಸಾಧ್ಯವಾಗುತ್ತದೆ ಅಂತ ಹೇಳಿದರು. ಇದೇ ವೇಳೆ ಅವರು ಮಾತನಾಡುತ್ತ ಸೈನಿಕನಾಗಿ ಪ್ರತಿಯೊಬ್ಬ ನಾಗರಿಕನು ಈ ಯುದ್ಧವನ್ನು ಎದುರಿಸುತ್ತಿದ್ದಾನೆ ಅಂತ ಹೇಳಿದರು. ಇದೇ ವೇಳೆ ಅವರು ಮಾತನಾಡುತ್ತ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಯುದ್ಧವನ್ನು ನಡೆಸುತ್ತಿದ್ದಾರೆ. ಕೆಲವರು ಮನೆ ಬಾಡಿಗೆಯನ್ನು ಮನ್ನಾ ಮಾಡುತ್ತಿದ್ದಾರೆ ಅಂತ ಹೊಗಳಿದರು.

 

ಪ್ಲಾಟ್‌ಫಾರ್ಮ್‌ನಲ್ಲಿ ಕೋವಿಡ್ವಾರಿಯರ್ಸ್ ಸೇರಲು ಮತ್ತು ಕೋವಿಡ್‌ವ 19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ವೇಗವನ್ನು ನೀಡುವಂತೆ ಪ್ರಧಾನಿ ಮೋದಿಯವರ ದೇಶದ ಎಲ್ಲಾ ನಾಗರಿಕರಿಗೆ ಸಲಹೆ ನೀಡುತ್ತಾರೆ. ಇದೇ ವೇಳೆ ಅವರು ಮಾತನಾಡಿ ಜನರು ಮತ್ತು ಆಡಳಿತವನ್ನು ಸಂಪರ್ಕಿಸಲು ಸರ್ಕಾರವು ಒಂದು ವೇದಿಕೆಯನ್ನು ರಚಿಸಿದೆ - covidwarriors.gov.in -. ವೈದ್ಯಕೀಯ ಕಾರ್ಯಕರ್ತರು ಸಹ ಭಾಗಿಯಾಗಿದ್ದಾರೆ. ನೀವು ಎಲ್ಲರೂ ಸೇರಲು ನಾನು ವಿನಂತಿಸುತ್ತೇನೆ ಅಂತ ಮನವಿ ಮಾಡಿಕೊಂಡರು. 130 ಕೋಟಿ ಜನರೂ ಕೊರೊನಾ ಸೇನಾನಿಯಾಗಿದ್ದಾರೆ. ದೇಶದ ಜನತೆ ಕೊರೊನಾ ವಿರುದ್ಧ ಯುದ್ಧ ಮಾಡುತ್ತಿದ್ದಾರೆ. ಇಡೀ ದೇಶದ ಚಿತ್ತ ಒಂದೇ ಕಡೆ ಇದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಇಡೀ ದೇಶವೇ ಒಂದಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ವಿಶ್ವಕ್ಕೆ ಭಾರತ ಮಾದರಿಯಾಗಿದೆ ಎಂದು ಹೇಳಿದರು.

 

ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಸೇವೆ ಮಾಡುತ್ತಿದ್ದಾರೆ. ಬಡವರಿಗೆ ಆಹಾರ ಕಿಟ್, ಮಾಸ್ಕ್ ತಯಾರಿಕೆಯಲ್ಲಿ ಪ್ರತಿಯಬ್ಬರೂ ಬಾಗಿಯಾಗಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕ ಕೂಡ ಒಬ್ಬ ಸೈನಿಕನಿದ್ದಂತೆ. ದೇಶ ವೈದ್ಯಕೀಯ ಸೇವೆಯಲ್ಲಿ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಇಡೀ ವೈದ್ಯ ಲೋಕ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ನರ್ಸ್ ವೈದ್ಯರ ಸೇವೆಯನ್ನು ನಾವೆಲ್ಲರೂ ಗೌರವಿಸಬೇಕು. ಕೊರೊನಾ ವಾರಿಯರ್ಸ್ ಮೇಲೆ ನಡೆಯುವ ಹಲ್ಲೆಯನ್ನು ಸಹಿಸಲು ಸಾಧ್ಯವಿಲ್ಲ, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದರೆ ಕಠಿಣ ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದರು.

 

ವೆಬ್ಸೈಟ್ ವಿಶೇಶತೆಗಳು ಏನು?

 

ದೇಶದಲ್ಲಿರುವ ವೈದ್ಯರ ಸಂಖ್ಯೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಸಂಖ್ಯೆ, ನರ್ಸ್‌ ಗಳ ಸಂಖ್ಯೆ ಸೇರಿದಂತೆ ದೇಶದಲ್ಲಿರುವ ಖಾಸಗಿ, ಸರ್ಕಾರಿ, ಸೇರಿದಂತೆ ಎಲ್ಲಾ ಬಗೆಯ ಆಸ್ಪತ್ರೆಗಳ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ರಾಜ್ಯದಲ್ಲಿ ಯಾವೆಲ್ಲ ಸೇವೆಯಲ್ಲಿ ಕೂಡ ಲಭ್ಯ ಇದೆ ಎನ್ನುವುದರ ಅಂಕಿ ಅಂಶಗಳನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.

 

Find Out More:

Related Articles: