ಲಾಕ್ ಡೌನ್ ಸಡಿಲಿಕೆಗೆ ಮುಂದಾದ ಕೇಂದ್ರ ಸರ್ಕಾರ : ಯಾರಿಗೆ ಈ ಸಡಿಲಿಕೆ ಅನ್ವಯವಾಗುತ್ತೆ ಗೊತ್ತಾ....?

Soma shekhar

ನವ ದೆಹಲಿ; ಕೊರೋನಾ ವೈರಸ್ ನಿಂದಾಗಿ ದೇಶವನ್ನು ರಕ್ಷಣೆಯನ್ನು ಮಾಡುವ ದೃಷ್ಟಿಯಿಂದ ದೇಶವನ್ನು ಎರಡು ಹಂತದಲ್ಲಿ ಲಾಕ್ ಡೌನ್ ಮಾಡಿ ಮನೆಯಿಂದಾ ಯಾರೂ ಕೂಡ ಹೊರಬರದಂತೆ ಆದೇಶವನ್ನೂ ಕೂಡ ಹೊರಡಿಸಿತ್ತು. ಲಾಕ್ ಡೌನ್ ಘೋಷಣೆಯಿಂದ ಅದೆಷ್ಟೋ ಉದ್ಯಮಗಳು ಹಾಗೂ ಕಾರ್ಖಾನೆಗಳು ಮುಚ್ಚಿ ಉದ್ಯೋಗಿಗಳನ್ನು  ಮನೆಯಿಂದಲೇ ಕೆಲಸವನ್ನು ಮಾಡುವಂತೆ ತಿಳಿಸಲಾಯಿತು. ಇನ್ನು ಕಟ್ಟಡ ಕಾರ್ಮಿಕರನ್ನು ಈ ಸಮಯದಲ್ಲಿ ಸಾಕಷ್ಟು ಹಿಂಸೆಯನ್ನು ಅನುಭವಿಸುವಂತೆ ಆಯಿತು.  ಆದರೆ ಮೇ 3ರಂದು ಮುಗಿಯುವ ಎರಡೇ ಹಂತದ ಲಾಕ್ ಡೌನ್ ಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೀಗಿನಿಂದಲೇ ಲಾಕ್ ಡೌನ್ ಸಡಿಲಗೊಳಿಸಲಾಗುತ್ತಿದೆ .

 ಹೌದು ಕೊರೋನಾ ಭೀತಿಯ ನಡುವೆ ಕೊನೆಗೂ ಕೇಂದ್ರ ಸರ್ಕಾರ ಒಂದು ತಿಂಗಳ ನಂತರ ಲಾಕ್‌ಡೌನ್ ನಿಯಮವನ್ನು ಸಡಿಲಿಕೆ ಮಾಡಿದ್ದು, ಪುರಸಭೆ ಮಟ್ಟದ ವಾಣಿಜ್ಯ-ವಸತಿ ಸಂಕೀರ್ಣ ಮತ್ತು ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅನುಮತಿ ನೀಡಿದೆ.

ನಿನ್ನೆ ತಡರಾತ್ರಿ ಆದೇಶವನ್ನು ಹೊರಡಿಸಿರುವ ಗೃಹ ಸಚಿವಾಲಯ ಗ್ರಾಮೀಣ ಮಟ್ಟದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅನಿವಾರ್ಯವಲ್ಲದ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿದೆ. ಅಲ್ಲದೆ, ಎಲ್ಲಾ ಅಂಗಡಿಗಳನ್ನೂ ತೆರೆಯಲು ಮತ್ತು ಎಲ್ಲಾ ರೀತಿಯ ಸರಕುಗಳ ಮಾರಾಟಕ್ಕೂ ಹಸಿರು ನಿಶಾನೆ ನೀಡಿದೆ. ಈ ಮೂಲಕ ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕರಲ್ಲಿ ಮೂಡಿದ್ದ ಆತಂಕವನ್ನು ದೂರ ಮಾಡಿದೆ.

ಕೇಂದ್ರ ಸರ್ಕಾರದ ಆದೇಶದ ಪ್ರತಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಸಹಿ ಮಾಡಿದ್ದಾರೆ. ಆದಾಗ್ಯೂ ಈ ಆದೇಶದಲ್ಲಿ ಪುರಸಭೆ ವ್ಯಾಪ್ತಿಯಲ್ಲಿರುವ ಮಾರುಕಟ್ಟೆ ಸ್ಥಳಗಳಲ್ಲಿನ ಮಲ್ಟಿ-ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್‌ಗಳು ಮೇ 3 ರವರೆಗೆ ಕಡ್ಡಾಯವಾಗಿ ಮುಚ್ಚಲ್ಪಟ್ಟಿರುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ದೊಡ್ಡ ಮಟ್ಟದ ಮಾಲ್ ಹೊರತಾಗಿ ಎಲ್ಲಾ ರೀತಿಯ ಅಂಗಡಿಗಳು ತೆರೆದಿರಲಿವೆ. ಆದರೆ, ಅಂಗಡಿಗಳನ್ನು ತೆರೆಯುವ ಮುನ್ನ ಎಲ್ಲರೂ ಸೂಕ್ತ ರೀತಿಯಲ್ಲಿ ಆರೋಗ್ಯದ ಕುರಿತು ಸರ್ಕಾರದ ಎಚ್ಚರಿಕೆ ಮತ್ತು ನಿಯಮವನ್ನು ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ಅಂಗಡಿಗಳಲ್ಲಿ ಶೇ.50 ರಷ್ಟು ಜನ ಮಾತ್ರ ಕೆಲಸ ಕೆಲಸ ಮಾಡಬೇಕು. ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ಪಾಲಿಸಬೇಕು. ಈ ಕುರಿತು ಪುರಸಭೆ ವ್ಯಾಪ್ತಿಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಸುಮಾರು 23452 ಜನರಿಗೆ ಕೊರೋನಾ ಸೋಂಕು ತಗುಲಿದ್ದು ಈವರೆಗೆ 723 ಜನ ಮೃತಪಟ್ಟಿದ್ದಾರೆ. ಕಳೆದ 24 ಗಂಟೆ ಅವಧಿಯಲ್ಲಿ 1752 ಜನರಿಗೆ ಈ ಸೋಂಕು ತಗುಲಿದೆ. ಹೀಗಾಗಿ ಕೊರೋನಾ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿರುವ ಪ್ರದೇಶಗಳಲ್ಲಿ ಈ ವಿನಾಯಿತಿ ಅನ್ವಯವಾಗುವುದಿಲ್ಲ ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ದೇಶದಲ್ಲಿ ಕೊರೋನಾ ಸೋಂಕು ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಮಾರ್ಚ್‌ 24 ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಘೋಷಣೆ ಮಾಡಿದ್ದರು. ಆದರೆ, ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಸಂಪೂರ್ಣ ಕುಸಿದಿದ್ದು, ಇದೀಗ ಹಂತ ಹಂತವಾಗಿ ಲಾಕ್‌ಡೌನ್ ಅನ್ನು ತೆರವು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Find Out More:

Related Articles: