ಅಮೇರಿಕಾದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕಾಗಿ 200 ಜನರ ಪರಿಣಿತರ ನೇಮಕ: ಇದರಲ್ಲಿ ಭಾರತೀಯರು ಎಷ್ಟು ಮಂದಿ ಇದ್ದಾರೆ ಗೊತ್ತಾ..?

Soma shekhar

ಕೊರೋನಾ ವೈರಸ್ ನಿಂದಾಗಿ ಇಡೀ ಪ್ರಪಂಚದಲೇ ಅಲ್ಲೋಲ ಕಲ್ಲೊಲ ಶುರುವಾಗಿದೆ. ಈ ಒಂದು ವೈರಸ್ ನಿಂದಾಗಿ ಜಗತ್ತಿನಲ್ಲಿ ಲಕ್ಷಾಂತರ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಜಗತ್ತಿನ ಹಲವು ದೇಶಗಳ ಆರ್ಥಿಕ ವ್ಯವಸ್ಥೆ ಮಕಾಡೆ ಮಲಗಿದೆ. ಕೊಓನಾ ವೈರಸ್ ಗೆ ಎದರಿ ಅನೇಕ ರಾಷ್ಟ್ರಗಳು ಲಾಕ್ ಡೌನ್ ಷೋಷಣೆಯನ್ನು ಮಾಡಿರುವುದರಿಂದ ಸರಕು ಸೇವೆಗಳು ಕಾರ್ಖಾನೆಗಳು ನಿಂತಿರುವುದರಿಂದ ಅನೇಕ ದೇಶಗಳು ಆರ್ಥೊಕ ಸಂಕಷ್ಟವನ್ನು ಎದುರಿಸುತ್ತಿದೆ  ಇದರಿಂದಾಗಿ ಸಾಮಾನ್ಯ ಜನರು ಹಲವಾರು  ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

 

ಇದೆಲ್ಲದಕ್ಕೆ ಹೊರತಾಗಿ ಅಮೇರಿಕಾ ಇಲ್ಲ. ವಿಶ್ವಕ್ಕೆ ದೊಡ್ಡಣ್ಣನಂತಿರುವ ಅಮೇರಿಕಾ ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು ಪ್ರತಿನಿತ್ಯ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ..ಇದರಿಂದ ಅಮೇರಿಕಾದ ಜನರಲ್ಲಿ ಆತಂಕ ಎದುರಾಗಿದೆ. ಇದರ ಜೊತೆಗೆ ಆರ್ಥಿಕ ಸ್ಥತಿ ಚಿಂಚಾತಜನಕವಾಗಿರುವಾಗ ಇದರ ಪುನಶ್ಚೇತನಕ್ಕಾಗಿ ಅಮೇರಿಕಾ ಸಲಹಾ 200 ಪರಿಣಿತರನ್ನೊಳಗೊಂಡ ಒಂದು ಸಲಹಾ ಸಮಿತಿಯನ್ನು ರಚನೆಯನ್ನು ಮಾಡಲಾಗಿದೆ.

 

ಹೌದು ಅಮೆರಿಕಾದ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಡೊನಾಲ್ಡ್ ಟ್ರಂಪ್ ಸರ್ಕಾರವು 200 ಪರಿಣತರನ್ನು ನೇಮಕ ಮಾಡಿಕೊಂಡಿದ್ದು, ಈ ಉದ್ಯಮ ದಿಗ್ಗಜರ ತಂಡದಲ್ಲಿ ಭಾರತ ಮೂಲದ ಆರು ಮಂದಿ ಪ್ರತಿಭಾನ್ವಿತರು ಸೇರ್ಪಡೆಯಾಗಿದ್ದಾರೆ.

 

ಕೊರೊನಾವೈರಸ್ನಿಂದಾಗಿ ಅಮೆರಿಕಾದ ಆರ್ಥಿಕ ವ್ಯವಸ್ಥೆಗೆ ಭಾರೀ ಹಾನಿ ಆಗಿದೆ. ಈ ಬಿಕ್ಕಟ್ಟಿನ ಬಲೆ ಒಳಗೆ ಸಿಲುಕಿರುವ ಅಮೆರಿಕಾದ ಅರ್ಥ ವ್ಯವಸ್ಥೆಯನ್ನು ಚೇತರಿಕೆಯ ಹಾದಿಗೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಅಮೆರಿಕಾ ಸರ್ಕಾರವು 200 ಪರಿಣತರನ್ನು ಒಳಗೊಂಡ 18 ಬಗೆಯ ತಂಡಗಳನ್ನು ರಚಿಸಿದೆ.

 

ಭಾರತ ಸಂಜಾತರಾದ ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ನ ಸಿಇಒ ಸತ್ಯ ನಾದೆಲ್ಲಾ, ಐಬಿಎಂನ ಅರವಿಂದ ಕೃಷ್ಣಾ, ಮೈಕ್ರೋನ್ಸ್ ಸಂಜಯ್ ಮೆಹ್ರೋತ್ರಾ ಈ ತಂಡದಲ್ಲಿದ್ದಾರೆ. ಜೊತೆಗೆ ಆಯಪಲ್ ಟಿಮ್ ಕುಕ್, ಒರ್ಯಾಕಲ್ನ ಲ್ಯಾರಿ ಎಲಿಸನ್ ಮತ್ತು ಫೇಸ್ಬುಕ್ನ ಮಾರ್ಕ್ ಜುಕರ್ಬರ್ಗ್ ಕೂಡ ಪರಿಣತರ ತಂಡದಲ್ಲಿದ್ದಾರೆ.

 

ಕೃಷಿ, ಬ್ಯಾಂಕಿಂಗ್, ನಿರ್ಮಾಣ, ಕಾರ್ಮಿಕರು, ರಕ್ಷಣೆ, ಇಂಧನ, ಹಣಕಾಸು ಸೇವೆ, ಆಹಾರ, ತಯಾರಿಕೆ, ರಿಯಲ್ ಎಸ್ಟೇಟ್, ರಿಟೇಲ್, ಸಾರಿಗೆ ಮತ್ತು ಕ್ರೀಡಾ ವಲಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ.

 

 

 

Find Out More:

Related Articles: