ಕಮಲನಾಥ್ ಸರ್ಕಾರ ಉಳಿಯುತ್ತಾ? ಉರುಳುತ್ತಾ?

Soma shekhar

ನವದೆಹಲಿ: ಜೋತಿರಾದಿತ್ಯ ಸಿಂದ್ಯ ಅವರ ನೇತೃತ್ವದ  22 ಶಾಸಕರು ಬಂಡಾಯ ಎದ್ದು ರಾಜೀನಾಮೆ ನೀಡಿದ ನಂತರ, ಮುಖ್ಯಮಂತ್ರಿ ಕಮಲನಾಥ್ ಅವರ ನೇತೃತ್ವದ ಸರ್ಕಾರ ಇದೀಗ ಅಲ್ಪಮತಕ್ಕೆ ಕುಸಿದಿದೆ. ಅಲ್ಲದೇ ಇದೀಗ ಸರ್ಕಾರ ಅನಿಶ್ಚಿತತೆ ಸುಳಿಯಲ್ಲಿ ಸಿಲುಕಿದೆ. ಮದ್ಯಪ್ರದೇಶದ ವಿಧಾನಸಭೆಯಲ್ಲಿ ತಕ್ಷಣ ವಿಶ್ವಾಸ ಮತ ಪರೀಕ್ಷೆಗೆ ಒಳಪಡಲು ತಕ್ಷಣ ಆದೇಶ ನೀಡಬೇಕೆಂದು ಬಿಜೆಪಿಯ ಶಿವರಾಜ್ ಸಿಂಗ್ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದಾರೆ. 

 


ಹೀಗಾಗಿ ಇದೀಗ ಮದ್ಯಪ್ರದೇಶದ ರಾಜಕೀಯ ಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ಸಮರದಲ್ಲಿ ಗೆಲ್ಲೋಕೆ ಕಾಂಗ್ರೆಸ್ ಮತ್ತು ಬಿಜೆಪಿ ಹಣಾಹಣಿ ನಡೆಸುತ್ತಿವೆ. ಅಲ್ಲದೇ ಕಾಂಗ್ರೆಸ್ ತನ್ನ ಬಂಡಾಯ ಶಾಸಕರ ರಾಜೀನಾಮೆಯನ್ನು ಬಿಜೆಪಿಯಯು ಬಲವಂತವಾಗಿ ಪಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಕಾಂಗ್ರೆಸ್. ಹೀಗಾಗಿ ನ್ಯಾಯಮೂರ್ತಿಇ ಚಂದ್ರಚುಡ್ ಮತ್ತು ಹೇಮಂತ್ ಗುಪ್ತ ಅವರನ್ನು ಒಳಗೊಂಡ ಪೀಠಕ್ಕೆ ಈ ಸಂಬಂಧ ಕಾಂಗ್ರೆಸ್ ಪರವಾಗಿ ಹಹಿರಿಯ ವಕೀಲ ದುಶ್ಯಂತ ದವೇ ಮನವಿ ಸಲ್ಲಿಸಿದರು.

 

ಕಾಂಗ್ರೆಸ್ ಶಾಸಕರು ನೀಡಿರುವ ರಾಜೀನಾಮೆ ಪತ್ರಗಳನ್ನು ಬಿಜೆಪಿ ಮುಖಂಡ ಹಾಗೂ ರಾಜ್ಯಪಾಲ ಆದಂತಹ ಲಾಲ್ ಜಿ ಟಂಡನ್ ಅವರಿಗೆ ಸಲ್ಲಿಸಿದ್ದಾರೆ. ಇದರ ಹಿಂದೆ ದೊಡ್ಡ ಹುನ್ನಾರವೇ ಇದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ಬಂಡಾಯ ಶಾಸಕರ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿಲ್ಲ. ಬಿಜೆಪಿ ಮುಖಂಡರು ಬಲವಂತವಾಗಿ ಮತ್ತು ಜುಲ್ಮೆಯಿಂದ ಅವರ ರಾಜೀನಾಮೆಗಳನ್ನು ಕೊಡಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುವ ಅಗತ್ಯ ಇದೆ ಎಂದು ತಿಳಿಸಿದರು. 

 

ಇನ್ನು ಮುಂದುವರೆದು ಹೇಳಿದ ಅವರು, ನಮ್ಮ ಶಾಸಕರನ್ನು ಬಿಜೆಪಿಯು ರಾತ್ರೋ ರಾತ್ರಿ ವಿಶೇಷ ವಿಮಾನಗಳಲ್ಲಿ ಕರೆ ತಂದು ಬೆಂಗಳುರಿನ ಹೊರ ವಲಯದಲ್ಲಿ ಅಕ್ರಮ ಬಂಧನದಲ್ಲಿ ಇಟ್ಟಿದ್ದಾರೆ. ಇನ್ನು ಯಾರ ಸಂಪರ್ಕಕ್ಕೂ ಬರದಂತೆ ದಿಗ್ಬಂಧನ ವಿಧಿಸಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ. ಸ್ಪೀಕರ್ ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಣೆ ಮಾಡೋಕೆ ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದರು. ಹೀಗಾಗಿ ಮದ್ಯಪ್ರದೇಶ ಸರ್ಕಾರದ ಕತೆ ಏನಾಗುತ್ತು ಎನ್ನುವುದನ್ನು ಕಾದು ನೋಡಬೇಕಿದೆ. 

 

Find Out More:

Related Articles: