ಕೋಗಿಲೆಯ ಕಂಠ, ಸ್ವರಗಳ ಅಧಿಪತಿ ಸಂಗೀತದ ಮಹಾನ್ ಸಾಧಕ ಎಸ್.ಪಿ ಬಾಲಸುಬ್ರಹ್ಮಣ್ಯಂ ತನ್ನ ಸ್ವಂತ ಮನೆಯನ್ನು ಕಂಚಿ ಪೀಠಕ್ಕೆ ದಾನವಾಗಿ ನೀಡಿದ್ದಾರೆ. ಹೌದು, ಶಾಕ್ ಆದರೂ ನಂಬಲೇ ಬೇಕಾದ ವಿಷಯವಿದು. ಯಾಕೆ ಗೊತ್ತಾ! ಮುಂದೆ ಓದಿ....
ಎಸ್.ಪಿ.ಬಿ ತನ್ನ ಮನೆಯನ್ನು ದಾನ ಮಾಡುತ್ತಿರುವುದು ಅಲ್ಲಿ ವೇದ ಪಾಠಶಾಲೆ ನಿರ್ವಹಿಸಲು ನೀಡಿದ್ದಾರೆ. ಹೌದು, ಖ್ಯಾತ ಹಿನ್ನೆಲೆ ಗಾಯಕ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ತನ್ನ ಸ್ವಂತ ಮನೆಯನ್ನು ದಾನ ಮಾಡಿದ್ದಾರೆ. ತನ್ನ ಹುಟ್ಟೂರಾದ ಆಂಧ್ರ ಪ್ರದೇಶದ ನೆಲ್ಲೂರಿನ ತಿಪ್ಪರಾಜುವಾರಿ ಬೀದಿಯಲ್ಲಿರುವ ತಮ್ಮ ಮನೆಯನ್ನು ಕಂಚಿ ಪೀಠಕ್ಕೆ ವೇದ ಪಾಠಗಳನ್ನು ನಿರ್ವಹಿಸಲು ದಾನವಾಗಿ ನೀಡಿದ್ದಾರೆ.
ಮಂಗಳವಾರ ರಾತ್ರಿ ಆ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ ಅವರು ಸ್ವತಃ ಕಂಚಿ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮಿಗೆ ತಮ್ಮ ಗೃಹವನ್ನು ವಿಧಿವತ್ತಾಗಿ ಹಸ್ತಾಂತರಿಸಿದರು. ಎಸ್.ಪಿ.ಬಿ ತಂದೆ ಎಸ್.ಪಿ ಸಾಂಬಮೂರ್ತಿ ಹೆಸರಿನಲ್ಲಿ ಈ ಪಾಠಶಾಲೆಯನ್ನು ನಿರ್ವಹಿಸಲಾಗುತ್ತದೆ ಎಂಬುದು ತಿಳಿದು ಬಂದಿದೆ.
ಎಸ್.ಪಿ ಬಾಲಸುಬ್ರಹ್ಮಣ್ಯಂ ಮಾತನಾಡಿ, "ನಮ್ಮ ತಂದೆಯವರು ಶೈವ ಭಕ್ತರು. ಅವರಲ್ಲಿ ಅಪಾರ ಗುರುಭಕ್ತಿ ಇತ್ತು. ಅವರು ನಮ್ಮೊಂದಿಗೆ ಇಂದು ಇಲ್ಲ ಎಂಬ ಅಸಂತೃಪ್ತಿ ಹೊರತುಪಡಿಸಿದರೆ ವೇದ ಪಾಠಶಾಲೆ ನಿರ್ವಹಿಸುವ ಮೂಲಕ ಅವರು ಇಲ್ಲೇ ಇದ್ದಾರೆ ಎಂದು ಭಾವಿಸುತ್ತೇವೆ. ಕಂಚಿ ಪೀಠಕ್ಕೆ ನಾನು ಮನೆಯನ್ನು ನೀಡುತ್ತಿಲ್ಲ. ಭಗವಂತನ ಸೇವೆಗೆ ಆ ಭಗವಂತನೇ ಸ್ವೀಕರಿಸಿದ್ದಾನೆ ಎಂಬುದೇ ಸೂಕ್ತ" ಎಂಬುದಾಗಿ ತಿಳಿಸಿದ್ದಾರೆ.
ಕಂಚಿ ಪೀಠಾಧ್ಯಕ್ಷ ಶ್ರೀ ಜನದ್ಗುರು ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಮಾತನಾಡಿ, "ಭಿಕ್ಷಾಟನೆ ಭಾಗವಾಗಿ ತ್ಯಾಗರಾಜರ ಸ್ಮರಣೋತ್ಸವ ಮುನ್ನಡೆಸಿದ ಘನತೆ ಎಸ್.ಪಿ ಸಾಂಬಮೂರ್ತಿಗೆ ಸಲ್ಲುತ್ತದೆ. ನೆಲ್ಲೂರಿನ ಬೀದಿಗಳಲ್ಲಿ ಭಗವಂತಹ ಸಂಕೀರ್ತನೆಗಳನ್ನು ಮಾರ್ದನಿಸಿದ ಪ್ರತಿಭಾವಂತರು ಸಾಂಬಮೂರ್ತಿ. ದೇಶದಲ್ಲಿ ವೇದಗಳು, ಶಾಸ್ತ್ರ, ಪುರಾಣಗಳನ್ನು, ಸಂಗೀತ, ಸಾಹಿತ್ಯ ಸಂರಕ್ಷಿಸುವ ಪ್ರಚಾರ ಕಾರ್ಯಕ್ರಮಗಳನ್ನು ನಿರ್ವಹಿಸಬೇಕಾದ ಅಗತ್ಯವಿದೆ. ಸಂಗೀತ, ಭಕ್ತಿ ಪ್ರಚಾರ ಮಾಡಿದಂತಹ ಮಹನೀಯರು ಸಾಂಬಮೂರ್ತಿ. ಅವರ ಆಶಯಕ್ಕೆ ಅನುಗುಣವಾಗಿ ಈ ಸ್ಥಳದಲ್ಲಿ ವೇದನಾದ ಪ್ರಚಾರವನ್ನು ಮುಂದುವರೆಸುತ್ತೇ