2019ರಲ್ಲಿ ವಿಶ್ವ ಕ್ರಿಕೆಟ್​​ನಲ್ಲಿ ಭಾರತದ ಜೋಡೆತ್ತಿನ ಹವಾ ಬಲು ಜೋರು

frame 2019ರಲ್ಲಿ ವಿಶ್ವ ಕ್ರಿಕೆಟ್​​ನಲ್ಲಿ ಭಾರತದ ಜೋಡೆತ್ತಿನ ಹವಾ ಬಲು ಜೋರು

Soma shekhar
ಒಂದೊಮ್ಮೆ ವಿಶ್ವ ಕ್ರಿಕೆಟ್ ಎಂದರೆ ಅದು ಆಸ್ಟ್ರೇಲಿಯಾ, ಇಂಗ್ಲೆಂಡ್ ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವಿಶ್ವ ಕ್ರಿಕೆಟ್ ಎಂದರೆ ಅದು ಒನ್ಲಿ  ಟೀಂ ಇಂಡಿಯಾ ಎನ್ನುವಂತಾಗಿದೆ. ಅದಕ್ಕೆ ಕಾರಣ ಟೀಂ ಇಂಡಿಯಾದ ಜೋಡೆತ್ತು. ಹೌದು, ಟೀಂ ಇಂಡಿಯಾ ಸರ್ವಾಂಗೀಣ ಆಟದ ಜೊತೆಗೆ ಜೋಡೆತ್ತಿನ ಹವಾ ಬಲು ಜೋರಾಗಿದೆ. ಯಾರು ಗೊತ್ತಾ ಆ ಜೋಡೆತ್ತು. 
  
ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ, ವೈಸ್​ ಕ್ಯಾಪ್ಟನ್​ ಹಿಟ್​ಮ್ಯಾನ್ ರೋಹಿತ್​ ಶರ್ಮಾ ಟೀಮ್ ಇಂಡಿಯಾದ ಜೋಡೆತ್ತುಗಳು. ಎದುರಾಳಿ ಯಾರೇ ಆಗಲಿ, ಪಿಚ್​ ಯಾವುದೇ ಆಗಲಿ. ರನ್ ಗಳಿಸೋದು. ತಂಡವನ್ನ ಗೆಲುವಿನ ದಡ ಸೇರಿಸೋದೆ ಈ ಇಬ್ಬರ ಮೂಲ ಮಂತ್ರ.. ಬ್ಯಾಟಿಂಗ್​ ಶೈಲಿ, ವ್ಯಕ್ತಿತ್ವ ವಿಭಿನ್ನವಾಗಿದ್ರು. ಅಂಗಳದಲ್ಲಿ ತಂಡದ ಗೆಲುವಿಗಾಗಿ ವೀರ ಸೈನಿಕರಂತೆ ಹೋರಾಟ ನಡೆಸ್ತಾರೆ. ಈಗಾಗಿಯೇ ಈ ಇಬ್ಬರು ಟೀಮ್ ಇಂಡಿಯಾದ ಜೋಡೆತ್ತುಗಳು. ಮ್ಯಾಚ್​ ವಿನ್ನರ್​ಗಳು. ಬ್ಯಾಟಿಂಗ್ ಮೂಲಕವೇ ಸದ್ದು ಮಾಡಿದ ಕಿಂಗ್, ವಿರಾಟ್​ ಕೊಹ್ಲಿ ಹಾಗೂ ಹಿಟ್​ಮ್ಯಾನ್ ರೋಹಿತ್​. 2019ರಲ್ಲಿ ನಡೆಸಿದ ದರ್ಬಾರ್​ ಮಾತ್ರ ಅಷ್ಟಿಷ್ಟು ಅಲ್ಲ.
 
ಕ್ರೀಸ್​​ನಲ್ಲಿ ನೆಲಕಚ್ಚಿ ನಿಂತ್ರೆ ಸಿಕ್ಸರ್​​, ಬೌಂಡರಿಗಳ ಮಳೆ ಸುರಿಸೋ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ. ಟೀಮ್ ಇಂಡಿಯಾದ ಆಧಾರಸ್ಥಂಭಗಳು. ಹೀಗಾಗಿಯೇ ಈ ಇಬ್ಬರು ಆಟಗಾರರು ಏಕದಿನ ಫಾರ್ಮೆಟ್​​ನಲ್ಲಿ ನಂ.1 ಹಾಗೂ ನಂ.2 ಬ್ಯಾಟ್ಸ್​ಮನ್ಸ್​ಗಳಾಗಿ ಗುರುತಿಸಿಕೊಂಡಿದ್ದಾರೆ. ವಿರಾಟ್​ ಕೊಹ್ಲಿ ವಿಶ್ವ ಕ್ರಿಕೆಟ್​ಗೆ ನಾನೇ ಕಿಂಗ್ ಅಂದ್ರೆ.. ರೋಹಿತ್​​ ಮಾತ್ರ 2019ರ ಏಕದಿನ ಕ್ರಿಕೆಟ್​​ನಲ್ಲಿ ನಾನೇ ಬಾಸ್​ ಅಂತೀದ್ದಾರೆ.2019ರಲ್ಲಿ ಕೊಹ್ಲಿಯು 44 ಪಂದ್ಯದಲ್ಲಿ ಒಟ್ಟಾರೆ 2455 ರನ್ ಸಿಡಿಸಿದ್ದಾರೆ. 
 
ಟೀಮ್ ಇಂಡಿಯಾದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಪಾಲಿಗೆ 2019ನೇ ವರ್ಷ ಅತ್ಯಂತ ಸ್ಮರಣೀಯವೆನಿಸಿದೆ. ಓರ್ವ ಪರಿಪೂರ್ಣ ಬ್ಯಾಟ್ಸ್‌ಮನ್ ಆಗಿ ರೋಹಿತ್ ಶರ್ಮಾ 2019ನೇ ವರ್ಷ ನಿಜಕ್ಕೂ ಮರೆಯಲಾಗದ ವರ್ಷ.. ಏಕದಿನ, ಟಿ20 ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲೂ ರೋಹಿತ್ ಶರ್ಮಾ ದಾಖಲೆಗಳನ್ನ ಧೂಳೀಪಟಗೈದಿದ್ದಾರೆ. ಹಲವು ದಾಖಲೆಗಳನ್ನ ಬರೆದಿದ್ದಾರೆ.. ಇದರಿಂದಾಗೇ 2019ನೇ ವರ್ಷ ರೋಹಿತ್​ ನಾಮ ಸಂವತ್ಸರವಾಗಿ ಮಾರ್ಪಟ್ಟಿದೆ.
 
 
 

Find Out More:

Related Articles:

Unable to Load More