ನಾ ಕಾಲಿಟ್ಟ ಕಡೆ ಬಿಜೆಪಿ ಗೆಲ್ಲೋದು ಶತಸಿದ್ದ!

frame ನಾ ಕಾಲಿಟ್ಟ ಕಡೆ ಬಿಜೆಪಿ ಗೆಲ್ಲೋದು ಶತಸಿದ್ದ!

Soma shekhar
 
ಧಾರವಾಡ: ನಾನು ಕಾಲಿಟ್ಟ ಕಡೆ ಭಾರತೀಯ ಜನತಾ ಪಕ್ಷ ಗೆಲ್ಲೋದು ಶತಸಿದ್ದ, ಜನರಿಗೆ ನನ್ನ ಮೇಲೆ ವಿಶ್ವಾಸವಿದೆ. ನನ್ನನ್ನು ಗೆಲ್ಲಿಸಿದ್ದಾರೆ, ಇದೀಗ ನಾನು ಕಾಲಿಟ್ಟ ಕಡೆಗಳೆಲ್ಲೆಲ್ಲಾ ಬಿಜೆಪಿ ಗೆಲ್ಲುತ್ತದೆ ಎಂದು ಬಿಜೆಪಿ ಸಚಿವರೊಬ್ಬರು ಗುಡುಗಿದ್ದಾರೆ. ಹೌದು, ಅದು ಯಾರು, ಕಾಲಿಟ್ಟ ಕಡೆಯೆಲ್ಲಾ ಬಿಜೆಪಿ ಗೆಲ್ಲೋದು ಹೇಗೆ ಏನು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ. 
 
 ಪ್ರಸ್ತುತ ಮೂರು ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡು ಚುನಾವಣೆ ನಡೆಸುತ್ತಿದ್ದೇವೆ. ನನ್ನ ಜೊತೆಗೆ ಹಿರಿಯ ನಾಯಕರಿದ್ದಾರೆ. ನೂರಕ್ಕೆ ನೂರರಷ್ಟು ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ, ಗೆದ್ದೇ ಗೆಲ್ಲುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿಂದು ಮಾತನಾಡಿದ ಅವರು, 15 ಕ್ಷೇತ್ರಗಳಲ್ಲಿ ಅಚ್ಚರಿಯ ಗೆಲುವು ಸಾಧಿಸುತ್ತೇವೆ. ಶಿವಾಜಿನಗರದಲ್ಲೂ ಗೆಲುವು ಸಾಧಿಸುತ್ತೇವೆ ಎಂದು ವಿಶೇಷವಾಗಿ ತಿಳಿಸಿದರು. 
 
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರೇನು ಜೋತಿಷ್ಯಿಗಳಾ!? ಹೇಳಿ.  ಚುನಾವಣಾ ಫಲಿತಾಂಶದ ಬಳಿಕ ಕಾದು ನೋಡಿ. ಫಲಿತಾಂಶ ಬರುವ ವರೆಗೂ ಅವರವರು ಅಭಿಪ್ರಾಯ ನೀಡಲು ಸ್ವತಂತ್ರರು. ಮುಖ್ಯಮಂತ್ರಿ ಯಡಿಯೂರಪ್ಪ ನವರ ಸರ್ಕಾರ ಇನ್ನಷ್ಟು ಭದ್ರವಾಗಿರುತ್ತದೆ. ಕುಮಾರಸ್ವಾಮಿ ಸರ್ಕಾರ ಬೀಳಲು ಸಿದ್ದರಾಮಯ್ಯ ನವರೇ ಕಾರಣ. ಅವರೇ ಸರ್ಕಾರ ಬೀಳಿಸಿದ್ದು ಅಂತಾ ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿ ಗುಡುಗಿದ್ದಾರೆ. 
 
ಸಿ.ಎಸ್ ಪುಟ್ಟರಾಜು ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಸಿ ಪಾಟೀಲ್, ಚುನಾವಣೆ ಸಂದರ್ಭದಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡೋದು ಸಹಜ. ಎಲ್ಲಿ, ಯಾವಾಗ, ಯಾವ ರೀತಿ ಏಜೆಂಟ್ ​ರಂತೆ ಕೆಲಸ ಮಾಡುತ್ತಿದ್ದಾರೆ. ಹಿಂದೆ ಅವರ ಅಧಿಕಾರದಲ್ಲಿದ್ದಾಗ ಚುನಾವಣೆ ಆಗಿವೆ. ಅಧಿಕಾರಿಗಳು ಆವಾಗ ಏಜೆಂಟ್​ರಾಗಿದ್ದರಾ!? ಅಧಿಕಾರಿಗಳ ಬಗ್ಗೆ ಹಾಗೇ ಮಾತನಾಡುವುದು ಸೂಕ್ತವಲ್ಲ ಎಂದು ತಿರುಗೇಟು ನೀಡಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದಿದ್ದು, ಮತದಾರ ಪ್ರಭು ಯಾರಿಗೆ ಮತ ಹಾಕುತ್ತಾರೆ ಎಂಬುದು ಕಾದು ನೀಡಬೇಕಾಗಿದೆ.

Find Out More:

Related Articles:

Unable to Load More