ಚಪ್ಪಲಿಯಿಂದ ಹೊಡೆದವರೇ  ಸನ್ಮಾನ ಮಾಡುತ್ತಾರೆ, ಭವಿಷ್ಯ ನುಡಿದ ಸಂಸದ

Soma shekhar
ಮಂಡ್ಯ: ದಿನ ಕಳೆದಂತೆ ಚುನಾವಣೆ ಕಣ ರಂಗೇರುತ್ತಿದ್ದು ಅರ್ಹರು, ಅನರ್ಹರು ಎಲ್ಲರೂ ಪಕ್ಷದ ಚುನಾವಣಾ ಪ್ರಚಾರದಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಇಂದು ಚಪ್ಪಲಿಯಿಂದ ಹೊಡೆದವರೇ ನಾಳೆ ಸನ್ಮಾನ ಮಾಡುತ್ತಾರೆ ಇದು ಸತ್ಯ ಎಂದು ಬಿಜೆಪಿ ಸಂಸದ, ಕ್ಷೇತ್ರದ ಬಿಜೆಪಿ ಉಸ್ತುವಾರಿ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಜಿಲ್ಲೆಯ ಕೆ.ಆರ್​ಪೇಟೆ ಕ್ಷೇತ್ರದಲ್ಲಿಂದು ಪ್ರಚಾರದ ವೇಳೆ ಮಾತನಾಡಿದ ಅವರು, ತಂದೆಯವರ ಕನಸು ಇಲ್ಲಿ ಕಮಲ ಅರಳಿಸುವ ಮಹದಾಸೆ.
 
ಉಸ್ತುವಾರಿ ವಹಿಸಿ ಜನರ ಸಂಪರ್ಕ ಮಾಡಿದಾಗ ಜಾತಿ ಮೀರಿ ಬೆಂಬಲಕ್ಕೆ ನಿರ್ಧಾರ ಮಾಡಿದ್ದಾರೆ ಎಂದರು. ಈ ಬೆಂಬಲದಿಂದ ಬಿಜೆಪಿಗೆ ಆನೆ ಬಲ ಬಂದಿದೆ ಎಂದರು. ಇನ್ನು ಬಿಎಸ್​ ಯಡಿಯೂರಪ್ಪ 2008-09ರಲ್ಲಿ ಈ ಕ್ಷೇತ್ರದಲ್ಲಿನ ನೀರಾವರಿಗೆ ಹೆಚ್ಚು ಒತ್ತು ನೀಡಿದ್ದರು. ದಲಿತ ಕೇರಿಯಲ್ಲಿ ಅಭಿವೃದ್ಧಿ ಆಗಬೇಕಾಗಿದೆ. ಇನ್ನೂ ಗೂಳೆ ನಿಂತಿಲ್ಲ. ನಾರಾಯಣಗೌಡರ ಆಗಮನದಿಂದ ಪಕ್ಷಕ್ಕೆ ಶಕ್ತಿ ಬಂದಿದೆ. ನಮ್ಮನ್ನು ಸ್ವೀಕಾರ ಮಾಡುವುದನ್ನು ನೋಡಿದರೆ ನಮಗೆ ವಿಶ್ವಾಸ ಇದೆ ಎಂದು ಹೇಳಿದರು.
 
ಅಲ್ಲದೆ, ಸುವರ್ಣಾಕ್ಷರದಲ್ಲಿ ಬರೆಯಬಹುದಾದ ತೀರ್ಪನ್ನು ಕ್ಷೇತ್ರದ ಜನ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಅತಂತ್ರ ಸರ್ಕಾರ ಇತ್ತು. ಯಾವುದೇ ಅಭಿವೃದ್ಧಿ ಆಗಿರಲಿಲ್ಲ. ಹೀಗಾಗಿ ರಾಜೀನಾಮೆ ನೀಡಿ ನಮ್ಮ ಕಡೆ ಬಂದಿದ್ದಾರೆ ಅವರನ್ನು ಗೆಲ್ಲಿಸುತ್ತೀರ ಎಂಬ ವಿಶ್ವಾಸವಿದೆ ಎಂದರು. ಅಂತೆಯೇ ಸ್ಥಿರ ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಯಾರು ಯಾರನ್ನು ಇಳಿಸಿದರು ಎಂಬುದು ಜನರಿಗೆ ಗೊತ್ತಿದೆ. ಒಕ್ಕಲಿಗರ ಮುಖಂಡರನ್ನು ಸಿಎಂ, ಡಿಸಿಎಂ ಮಾಡಿದ್ದು ಯಡಿಯೂರಪ್ಪ. ಜಾತಿಗೆ ಮೀರಿ ಬಿಜೆಪಿ ಬೆಂಬಲಿಸುತ್ತಾರೆ ಎಂದು ಹೇಳಿದರು.
 
ಸದ್ಯ ನಾಮಪತ್ರ ವೇಳೆಯ ನಡೆದ ಘಟನೆ ನೋವಾಗಿದೆ. ನಾರಾಯಣಗೌಡ ಮಂತ್ರಿಯಾಗಿ ಬಂದಾಗ ಚಪ್ಪಲಿ ಹೊಡೆದವರೇ ಸನ್ಮಾನ ಮಾಡುತ್ತಾರೆ. ನೈತಿಕತೆ ಪಾಠ ಕಲಿಯುವ ಅವಶ್ಯಕತೆ ಯಡಿಯೂರಪ್ಪಗೆ ಇಲ್ಲ. ಹೆಚ್ಡಿಕೆ ಕಾಲದಲ್ಲಿ ಅನುದಾನವನ್ನು ಕೇವಲ ಎರಡು ಮೂರು ಜಿಲ್ಲೆಗೆ ಮೀಸಲಾಗಿತ್ತು. ಯಡಿಯೂರಪ್ಪ ರಾಜ್ಯಕ್ಕೆ ಸಮವಾಗಿ ಅನುದಾನ ನೀಡಿದ್ದಾರೆ ಎಂದಿದ್ದು, ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.

Find Out More:

Related Articles: