ಸಿದ್ದರಾಮಯ್ಯಗೆ ಮೈತುಂಬಾ ಕೊಬ್ಬು ಎಂದಿದ್ದು ಯಾರು?

frame ಸಿದ್ದರಾಮಯ್ಯಗೆ ಮೈತುಂಬಾ ಕೊಬ್ಬು ಎಂದಿದ್ದು ಯಾರು?

Soma shekhar

ಗೋಕಾಕ್: ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯಗೆ ಮೈತುಂಬಾ ಕೊಬ್ಬಿದೆ ಎಂದು ಅನರ್ಹ ಶಾಸಕರೊಬ್ಬರು ತಿಳಿಸಿದ್ದು, ಸಿದ್ದು ವಿರುದ್ಧವೇ ಭರ್ಜರಿಯಾಗಿ ಗುಡುಗಿದ್ದಾರೆ. ಸಿದ್ದರಾಮಯ್ಯಗೆ ಮೈತುಂಬಾ ಕೊಬ್ಬಿದೆ, ಅದರ ಜೊತೆಗೆ ಡಿಕೆ ಶಿವಕುಮಾರ್ ಭ್ರಷ್ಠಾಚಾರಿ ಎಂದು ಕಿಡಿಕಾರಿದ್ದಾರೆ. ಈಗೆ ಅಂದಿದ್ದು ಯಾರು, ಏನಾಯ್ತು ಅಂತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. 

ಸಿದ್ದರಾಮಯ್ಯರನ್ನು ನಂಬಿ ರಾಜಕೀಯ ಮಾಡಿದ್ದೇವು. ಹಾಗೇಂದ ಮಾತ್ರಕ್ಕೆ ಯಾರ ಬಳಿಯೂ ಚಮಚಗಿರಿ ಮಾಡಿಲ್ಲ. ಸತೀಶ್ ಜಗಳದಲ್ಲಿ ಸಿದ್ದರಾಮಯ್ಯ ಅನಿವಾರ್ಯವಾಗಿ ನನ್ನ ಮಂತ್ರಿ ಮಾಡಿದರು. ಸಚಿವನಾದ ಕೂಡಲೇ ಸರ್ಕಾರ ಬೀಳಿಸಬೇಕೆಂದು ನಿರ್ಧರಿಸಿದೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ. ಭಾರತೀಯ ಜನತಾ ಪಕ್ಷ ಸೇರಿದ ಬಳಿಕ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಮಾತನಾಡಿದ ಅವರು, ಕಾಂಗ್ರೆಸ್ ತೊರೆಯಲು ಕಾರಣವನ್ನು ಬಿಚ್ಚಿಟ್ಟರು. ಕಾಂಗ್ರೆಸ್ ನಾಯಕರ ದುರಂಹಕಾರದಿAದ ನನ್ನ ವಿರುದ್ಧ ಕುತಂತ್ರ ನಡೆದಿತ್ತು, ನನ್ನ ವಿರುದ್ಧ ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್ ಕುಂತತ್ರ ನಡೆಸಿದರು ಎಂದು ಹರಿಹಾಯ್ದರು. ಸಿದ್ದರಾಮಯ್ಯರನ್ನು ನಂಬಿ ರಾಜಕೀಯ ಮಾಡಿದ್ದೇವು. ಹಾಗೇಂದ ಮಾತ್ರಕ್ಕೆ ಯಾರ ಬಳಿಯೂ ಚಮಚಗಿರಿ ಮಾಡಿಲ್ಲ. ಸತೀಶ್ ಜಗಳದಲ್ಲಿ ಸಿದ್ದರಾಮಯ್ಯ ಅನಿವಾರ್ಯವಾಗಿ ನನ್ನ ಮಂತ್ರಿ ಮಾಡಿದರು. ಸಚಿವನಾದ ಕೂಡಲೇ ಸರ್ಕಾರ ಬೀಳಿಸಬೇಕು ಎಂದು ನಿರ್ಧರಿಸಿದೆ ಎಂದು ಅಬ್ಬರಿಸಿದರು.

ಹಿಂದುಳಿದ ವರ್ಗದ ನಾಯಕರು ಬೆಳೆಯಬಾರದು ಎಂಬುದು ಸಿದ್ದರಾಮಯ್ಯ ಅವರ ಉದ್ದೇಶ. ಆತಂಕರಿಕ ಸಮಸ್ಯೆ ಅಂತ ಹೇಳಿದರೆ ಭಿನ್ನಮತ ಅಂತಾರೆ. ಮೂರು ತಿಂಗಳ ನಂತರ ನನ್ನನ್ನು ಕೆಳಗಿಸಿ ಇಳಿಸಿ ನನ್ನ ರಾಜಕೀಯ ಮುಗಿಸಬೇಕು ಎನ್ನುವ ದುರುದ್ದೇಶ ಇತ್ತು.  ಜಿಲ್ಲೆಯಲ್ಲಿ ಸಂಘಟನೆ ಮಾಡಿದ ತಕ್ಷಣ ಹೈಕಮಾಂಡ್ ನಲ್ಲಿ ಬೇರೆ ಚರ್ಚೆ ಆಯಿತು.
‘ತೇಲಲಿ, ಮುಳುಗಲಿ ನಿಮ್ಮ ಬೆನ್ನು ಬಿಡಲ್ಲ’  ಎಂದು  ಸಿಎಂ ಯಡಿಯೂರಪ್ಪಗೆ ಮಾತು ಕೊಟ್ಟಿದ್ದೆ. ಅದರಂತೆ ನಡೆದು ಕೊಂಡೆವು. ೮ ಬಾರಿ ಆಪರೇಷನ್ ಕಮಲ ವಿಫಲಗೊಂಡಿತ್ತು. ಯಡಿಯೂರಪ್ಪ, ಶೆಟ್ಟರ್ ವಾಪಸ್ ಕಾಂಗ್ರೆಸ್ ಹೋಗಿ ಎಂದ್ದರು. ಆದರೆ ಹಠ ಬಿಡದೇ ಬಿಜೆಪಿ ಸೇರಿದ್ದೇನೆ. ಬಿಜೆಪಿ ಯಿಂದಲೇ ಚುನಾವಣೆಲೀ ಸ್ಪರ್ಧಿಸಿ, ಗೆದ್ದು ಕ್ಷೇತ್ರದ ಅಭಿವೃದ್ಧಿ ಮಾಡುವೆ ಎಂದಿದ್ದಾರೆ.


Find Out More:

Related Articles:

Unable to Load More