ನಮ್ಮ ತಾಯಿಗೆ ಯಾರೂ ನೋವು ಮಾಡಬೇಡಿ ಎಂದಿದ್ದು ಯಾರು ಗೊತ್ತಾ!?

somashekhar
    
ವಿಜಯಪುರ: ಭಾರತೀಯ ಜನತಾ ಪಕ್ಷ ನಮ್ಮ ತಾಯಿಯಿದ್ದಂತೆ. ದಯವಿಟ್ಟು ಯಾರೂ ಕೂಡ ನಮ್ಮ ತಾಯಿಗೆ ನೋವು ಮಾಡಬಾರದೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಇದೀಗ ಈ ಸುದ್ದಿ ಭಾರೀ ವೈರಲ್ ಆಗಿದೆ. ಏಕೆಂದರೆ ಭಾರತೀಯ ಜನತಾ ಪಕ್ಷವೇ ಇವರಿಗೆ ಪಕ್ಷ ವಿರೋಧಿ ಹೇಳಿಕೆ ನೀಡಿರುವುದಾಗಿ ಈ ಹಿಂದೆ ನೋಟೀಸ್ ಜಾರಿ ಮಾಡಿ ಉತ್ತರ ನೀಡಬೇಕು ಎಂದು ಆಜ್ಞಾಪಿಸಿತ್ತು.ಇದೀಗ ಭಾರತೀಯ ಜನತಾ ಪಕ್ಷವನ್ನು ಹಾಡಿ ಹೊಗಳಿದ್ದಾರೆ ಯತ್ನಾಳ್. 

ಬಸವ ಹುಟ್ಟಿದ ನಾಡು ವಿಜಯಪುರದಲ್ಲಿ  ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎರಡೂ ರಾಜ್ಯಗಳ ಚುನಾವಣೆ ಬಿಜೆಪಿಗೆ ಪಾಠವಾಗಿದೆ. ಸ್ಥಳೀಯ ನಾಯಕರನ್ನು ಹೈಕಮಾಂಡ್ ಇನ್ನು ಮುಂದೆ ಆದ್ಯತೆ ನೀಡಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಅಲ್ಲದೇ ಆಯಾ ರಾಜ್ಯಗಳಲ್ಲಿ ಅಲ್ಲಿಯ ನಾಯಕರಿಗೆ ಗೌರವ ನೀಡಲೇಬೇಕು. 30 ಸಾವಿರ ಮತಗಳಿಂದ ಸೋತವರು ಮಹಾರಾಷ್ಟ್ರದ ಸ್ಟಾರ್ ಪ್ರಚಾರಕರಾಗಿದ್ದರು. ಅವರು ಹೋದಲ್ಲಿ ಬಿಜೆಪಿ ಸೋತು ಹೋಗಿದೆ. ಬಿಜೆಪಿಗೆ ನೋವಾದರೆ ನಮ್ಮ ತಾಯಿಗೆ ನೋವಾದಂತೆ. ಈ ಹಿನ್ನೆಲೆ ಪಕ್ಷಕ್ಕೆ ಅನ್ಯಾಯವಾದಾಗ ಮಾತ ನಾಡುತ್ತೇನೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ  ಸಿದ್ಧರಾಮಯ್ಯ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಅವರು ಪ್ರತಿಪಕ್ಷದ ನಾಯಕ. ಹೋರಾಟ ಮಾಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ. ಸಿದ್ಧರಾಮಯ್ಯ ಪಾದಯಾತ್ರೆ ಬಳಿಕ ನಮಗೆ ಅವಕಾಶ ನೀಡಿದರೆ ನಾನು ಹೋಗಿ ರಾಜ್ಯ ಸರಕಾರದ ಸಾಧನೆಗಳನ್ನು ಪ್ರಚಾರ ಮಾಡುತ್ತೇನೆ. ಇಲ್ಲದಿದ್ದರೆ ಮೂರು ಜನ ಡಿ ಸಿ ಎಂ ಹೋಗಿ ರಾಜ್ಯ ಸರಕಾರದ ಸಾಧನೆಗಳನ್ನು ಪ್ರಚಾರ ಮಾಡಲಿ. 17 ಜನ ಶಾಸಕರು ರಾಜೀನಾಮೆ ನೀಡಿದ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಅನರ್ಹ ಶಾಸಕರು ಬಿಜೆಪಿಗೆ ಬಂದರೆ ಅವರಿಗೆ ಟಿಕೇಟ್ ನೀಡಲೇಬೇಕು ಎಂದಿದ್ದಾರೆ. ಇದರ ಮೂಲಕ ಅನರ್ಹರ ಪರ ತಾನಿದ್ದೇನೆ ಎಂದು ಬ್ಯಾಟ್ ಬೀಸಿದ್ದಾರೆ.


Find Out More:

Related Articles: