ಮುಂಬೈ: ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಸಿಎಂ ಸ್ಥಾನಕ್ಕಾಗಿ ಹಗ್ಗಜಗ್ಗಾಟ ಮುಂದುವರೆದಿದ್ದು,ಶಿವಸೇನೆ ಸಿಎಂ ಪಟ್ಟಕ್ಕಾಗಿ ಬಿಜೆಪಿ ಬಿಟ್ಟು ಇತರೆ ಪಕ್ಷಗಳ ಜೊತೆ ಕೈಜೋಡಿಸುತ್ತಾ ಎನ್ನುವ ಬಿಸಿ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಓಮ್ಮೆ ಏನಾದರೂ ಸಿಎಂ ಸ್ಥಾನವನ್ನು ಬಿಟ್ಟು ಕೊಟ್ಟರೆ ಮತ್ತೇ ಅದು ನಮಗೆ ಮುಳುವಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರವಾದರೇ, ಈ ಬಾರೀಸಿಎಂ ಪಟ್ಟ ಅಲಂಕರಿಸಲೇ ಬೇಕೆಂಬುದು ಶಿವಸೇನೆ ಪಟ್ಟಾಗಿದೆ.
ವಿಶೇಷ ಸುದ್ದಿ ಏನಪ್ಪಾ ಅಂದ್ರೆ ಇದೀಗ ಮಾಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸಲು ಶಿವಸೇನೆ ಮುಂದಾಗುತ್ತಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಪೂರಕ ಎಂಬಂತೆ ಶಿವಸೇನೆ ನಾಯಕರು ಎನ್‍ಸಿಪಿ ಮತ್ತು ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿದ್ದಾರೆ. ಬುಧವಾರಆದಿತ್ಯ ಠಾಕ್ರೆ ಸಹ ಮಹಾರಾಷ್ಟ್ರದ ರಾಜ್ಯಪಾಲರನ್ನು ಭೇಟಿಯಾಗಿದ್ದರು. ವಿಧಾನಸಭಾ ಚುನಾವಣೆ ಫಲಿತಾಂಶ ಬಂದು 10ದಿನಗಳಾದ್ರೂ ಬಹುಮತ ಪಡೆದಿರುವ ಬಿಜೆಪಿ-ಶಿವಸೇನೆ ಸರ್ಕಾರ ರಚನೆಗೆ ಮುಂದಾಗುತ್ತಿಲ್ಲ. ಶಿವಸೇನೆ 50:50ಸೂತ್ರಕ್ಕೆ ದೃಢವಾಗಿದ್ದರೆ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಮಾತ್ರ ನಾನೇ ಮುಂದಿನ ಐದು ವರ್ಷದ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ.
ಈ ಬೆಳವಣಿಗೆ ನಡುವೆ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಶಿವಸೇನೆ ನಾಯಕ ಸಂಜಯ್ ರಾವತ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶರದ್ ಪವಾರ್ ಭೇಟಿ ಬಳಿಕ ಮಾತನಾಡಿರುವ ಸಂಜಯ್ ರಾವತ್, ಒಂದುವೇಳೆ ಶಿವಸೇನೆ ನಿರ್ಧರಿಸಿದ್ರೆ ತನ್ನ ಸ್ವಂತ ಸಾಮರ್ಥ್ಯದಿಂದ ಸರ್ಕಾರ ರಚಿಸಬಹುದು.ರಾಜ್ಯದ ಜನತೆ ಶಿವಸೇನೆಯ ನಾಯಕ ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ. ಶಿವಸೇನೆಗೆ ಸಿಎಂ ಸ್ಥಾನ ಸಿಗಲಿದೆ ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.
ಶರದ್ ಪವಾರ್ ಭೇಟಿಯಾಗಿರುವ ಸಂಜಯ್ ರಾವತ್ ಸರ್ಕಾರ ರಚನೆಸಮೀಕರಣ(ಶಿವಸೇನೆ+ಎನ್‍ಸಿಪಿ+ಕಾಂಗ್ರೆಸ್=ಸರ್ಕಾರ)ವನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿ 50:50 ಫಾರ್ಮುಲಾ ಒಪ್ಪದಿದ್ದಲ್ಲಿ ಶಿವಸೇನೆ ಹೊಸ ಮೈತ್ರಿಗೆ ಮುಂದಾಗುವ ಸಾಧ್ಯತೆಗಳಿವೆ. ಟ್ವಿಟ್ಟರ್ ನಲ್ಲಿ ಪರೋಕ್ಷವಾಗಿ ಕಿಡಿಕಾರಿರುವ ಸಂಜಯ್ ರಾವತ್, ಸಾಹೇಬರೇ ಅಹಂಕಾರವನ್ನು ಬೆಳೆಸಿಕೊಳ್ಳಬೇಡಿ, ಸಮಯದ ಸಾಗರದಲ್ಲಿ ಸಿಕಂದರ್ ಸಹ ಮುಳುಗಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಸರ್ಕಾರ ರಚಿಸಲು ಮಾಸ್ಟರ್ ಪ್ಲಾನ್ ಗಳನ್ನೇ ಹಾಕುತ್ತಿರುವ ಎಲ್ಲರು, ಯಾರು ಸಿಎಂ ಆಗುತ್ತಾರೆ ಎನ್ನುವುದು ಕುತೂಹಲ ಹುಟ್ಟಿಸಿದೆ.