ಜೆಡಿಎಸ್ ನಲ್ಲಿ ಮತ್ತೇ ಭುಗಿಲೆದ್ದ ಅಸಮಾಧಾನ

somashekhar
    
ಮಣ್ಣಿನ ಮಗ ಅಂತಲೇ ಕರೆಯಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮತ್ತಷ್ಟು ಶಾಸಕರು ಸಿಡಿದೆದ್ದಿದ್ದಾರೆ.ಈಮೂಲಕಜೆಡಿಎಸ್ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನ ಹೊಗೆ ಇದೀಗ ಬಯಲಾಗುತ್ತಿದೆ. ಇದರಿಂದ ಮತ್ತಷ್ಟು ಶಾಸಕರು ರಾಜೀನಾಮೆ ಕೊಡುವ ಮುನ್ಸೂಚನೆಗಳು ದಟ್ಟವಾಗಿವೆ. ಕೆಲವು ಶಾಸಕರು ಮತ್ತು ಎಲ್‌ಎಲ್‌ಸಿಗಳು ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಸಿಎಂ ಆಗಿದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಅಂತ ಸಮ್ಮಿಶ್ರ ಸರ್ಕಾರ ಬಿದ್ದ ಸುಮಾರು 3 ತಿಂಗಳ ನಂತರ ಅತೃಪ್ತಿ ಹೊರಹಾಕಿದ್ದಾರೆ. ಇದೀಗ ಇವರು ಕೂಡ ಅತೃಪ್ತರ ಪಟ್ಟಿಗೆ ಸೇರುವ ಸಾಧ್ಯತೆಗಳಿವೆ. 

ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಎಂಎಲ್‌ಸಿಗಳು, ಗುಬ್ಬಿ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಎಂಎಲ್‌ಎಗಳು ಮತ್ತು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಬಾಬು ನೇತೃತ್ವದಲ್ಲಿ ಮಾಜಿ ಶಾಸಕರು ವರಿಷ್ಠರ ವಿರುದ್ಧ ತೊಡೆ ತಟ್ಟಿದ್ದಾರೆ. ಈ ಭಿನ್ನಮತ ಈಗ ಜೆಡಿಎಸ್ ವರಿಷ್ಠರ ತಲೆನೋವಿಗೆ ಕಾರಣವಾಗಿದೆ. ಈಗೆ ಇದ್ದಕ್ಕಿದ್ದಹಾಗೆ ಆಗಿ ತಲೆದೋರಿರುವ ಬಂಡಾಯ ಶಮನ ಮಾಡೋಕೆ ಗೌಡರ ಕುಟುಂಬ ದೈವದ ಮೊರೆ ಹೋಗಿದೆ. ಸೋಮವಾರ  ರಾತ್ರಿಯಿಂದ ಬೆಳಿಗ್ಗೆಯವರೆಗೆ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಿತು.

ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಭಾಗವಹಿಸಿದ್ದು ಬಿಟ್ಟರೆ, ಪಕ್ಷದ ಹೆಚ್ಚಿನ ಮುಖಂಡರು ಅತ್ತ ತಲೆ ಹಾಕಲಿಲ್ಲ. ಈನಡುವೆ ಭಿನ್ನಮತ ಶಮನಕ್ಕೆ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿರುವ ಕುಮಾರಸ್ವಾಮಿ, ತಮ್ಮ ಶಾಸಕರನ್ನ ಮಲೇಷಿಯಾಗೆ ಒಯ್ಯಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ,ಇದಕ್ಕೂ ಸಹ ಜೆಡಿಎಸ್ ಹಲವು ಶಾಸಕರುನಿರಾಸಕ್ತಿ ವಹಿಸಿರೋದು ವರಿಷ್ಠರ ನಿದ್ದೆಗೆಡಿಸಿದೆ.

ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ನಮ್ಮಲ್ಲಿ ಯಾರಿಗೂ ಅಸಮಾಧಾನ ಇಲ್ಲ. ವರಿಷ್ಠ ವಿರುದ್ಧ ಯಾರೂ ಅಮಸಾಧಾನಹೊಂದಿಲ್ಲ.ಯಾರೂ ಪಕ್ಷ ಬಿಡಲ್ಲ ಅಂತ ಹೇಳಿದರು. ಬೆಳಿಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷರು ಹೀಗಂತ ಹೇಳಿದ್ರೆ ಸಂಜೆ ವಿಧಾನಸೌಧದಲ್ಲಿ ಜೆಡಿಎಸ್‌ ಎಎಲ್‌ಸಿ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಮೇಲ್ಮನೆ ಸದಸ್ಯರು ಸಭೆ ನಡೆಸಿದರು. ಈ ಬಾರಿ ಏನೇ ಆದ್ರೂ ಮೂಗಿಗೆ ತುಪ್ಪ ಸವರುವ ವರಿಷ್ಠರ ಕೆಲಸಕ್ಕೆ ಈ ಬಾರಿ ಮಣಿಯಬಾರದು ಅಂತ ನಿರ್ಣಯಿಸಿದರು.


Find Out More:

Related Articles: