
ಕೋವಿಡ್ ಚಿಕಿತ್ಸೆಗೆ ಬೆಡ್ ಗಳ ಕೊರತೆಯನ್ನು ನೀಗಿಸಲು ಬಿಬಿಎಂಪಿ ಕೈಗೊಂಡ ಕ್ರಮ ಏನು ಗೊತ್ತಾ..?
ಬೆಂಗಳೂರು ನಗರದಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಿತ್ಯ ಸುಮಾರು 8,00 ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಸರ್ಕಾರದ ನಿದ್ದೆಗೆಡಿಸಿದೆ. ಇನ್ನು, ಬಹುತೇಕ ಆಸ್ಪತ್ರೆಗಳು ಫುಲ್ ಆಗಿದ್ದು, ಚಿಕಿತ್ಸೆ ನೀಡುವುದು ಕಷ್ಟ ಎಂಬಂತಾಗಿದೆ. ಆದರೆ ಬಿಬಿಎಂಪಿ ಇದಕ್ಕೊಂದು ಸೂಕ್ತ ಪರಿಹಾರವನ್ನು ಹುಡುಕಿಕೊಂಡಿದೆ ಅಷ್ಟಕ್ಕೂ ಆ ಪರಿಹಾರ ಏನು ಗೊತ್ತಾ..?
ಹೌದು, ಕೊರೋನಾ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ಎಲ್ಲಾ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಉಂಟಾಗಿದೆ ಇದರಿಂದ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲು ಬೆಡ್ ಗಳ ಕೊರತೆಯಾಗಿರುವುದರಿಂದ ಬೆಂಗೂರಿನ ಒಳಾಂಗಣ ಕ್ರೀಡಾಂಗಣಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲು ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ
.
ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಇಂಥ ಮಹತ್ವ ಕ್ರಮವೊಂದನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ ಆರು ಕಡೆ ಕೊವಿಡ್ ಕೇರ್ ಸೆಂಟರ್ ತೆರೆಯಲು ಬಿಬಿಎಂಪಿ ನಿರ್ಧರಿಸಿದೆ. ಈ ಮೂಲಕ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಎನ್ನುವ ಕೊರಗು ಕೊಂಚ ಮಟ್ಟಿಗೆ ಕಡಿಮೆ ಆಗಲಿದೆ. ಬೆಂಗಳೂರಿನ ಆರು ಕಡೆ ಕೊವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, 1150 ಬೆಡ್ ಗಳ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಮುನ್ನೂರು ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಕೊಠಡಿಯಲ್ಲಿ ಹತ್ತು ಬೆಡ್ಗಳನ್ನು ಇರಿಸಲಾಗಿದೆ. ಈ ರೀತಿ 30 ಕೊಠಡಿಗಳನ್ನು ಮಾಡಲಾಗಿದೆ. ಪ್ರತಿ ಬೆಡ್ಗೆ ಪ್ರತ್ಯೇಕ ಟೇಬಲ್ ಫ್ಯಾನ್, ಕೊಠಡಿಗೆ ಒಂದು ಟಿವಿ ವ್ಯವಸ್ಥೆ ಮಾಡಿರುವುದು ವಿಶೇಷ. ಇನ್ನೆರಡು ದಿನದಲ್ಲಿ ಕೋರಮಂಗಲ ಒಳಾಂಗಣ ಕ್ರೀಡಾಂಗಣ ಸೇವೆಗೆ ಸಿಗಲಿದೆ.
ಇನ್ನುಳಿದ ಐದು ಕೊವಿಡ್ ಕೇರ್ ಸೆಂಟರ್ಗಳನ್ನು ಇನ್ನೊಂದು ವಾರದಲ್ಲಿ ತೆರೆಯುವ ಸಾಧ್ಯತೆ ಇದೆ. ಕೊರೋನಾ ಗುಣಲಕ್ಷಣಗಳಿಲ್ಲದ ರೋಗಿಗಳಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಭಾನುವಾರ ರಾಜ್ಯದಲ್ಲಿ 1,105 ಕೇಸ್ಗಳು ದೃಢಪಟ್ಟಿವೆ. ಕಳೆದ 3 ದಿನದಲ್ಲಿ ದಾಖಲಾದ ಪ್ರಕರಣಗಳು 3 ಸಾವಿರಕ್ಕೂ ಹೆಚ್ಚಿವೆ. ಕಳೆದ 24 ಗಂಟೆ ಅವಧಿಯಲ್ಲಿ 19 ಮಂದಿ ಮೃತಪಟ್ಟಿದ್ಧಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 226 ಮುಟ್ಟಿದೆ.
ರಾಜ್ಯದ ಕೊರೋನಾ ಪ್ರಕರಣಗಳಲ್ಲಿ ಬೆಂಗಳೂರು ಸಿಂಹಪಾಲು ಪಡೆಯುವುದನ್ನು ಮುಂದುವರಿಸಿದೆ. ಸೋಮವಾರ 738 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜಧಾನಿ ನಗರದಲ್ಲಿ ದಾಖಲಾದ ಪ್ರಕರಣಗಳು 4 ಸಾವಿರ ಗಡಿಯ ಮೈಲಿಗಲ್ಲು ದಾಟಿವೆ. ಇಲ್ಲಿ ಈವರೆಗೆ ದಾಖಲಾಗಿರುವುದು 4052 ಪ್ರಕರಣಗಳು. ಬೆಂಗಳೂರಿನಲ್ಲಿ ಆಯಕ್ಟಿವ್ ಕೇಸ್ಗಳೇ 3,427 ಇವೆ.