'ಜೈಲಿನಿಂದ ಇಲಿ ಬಂದ್ರೆ, ಹುಲಿ ಬಂದಿದೆ ಎನ್ನುತ್ತಿದ್ದಾರೆ’

somashekhar
    
ಉಡುಪಿ: ಜೈಲಿನಿಂದ ಇಲಿ ಬಂದಿದೆ, ಆದ್ರೆ ಹುಲಿ ಬಂದಿದೆ ಎನ್ನುವವರನ್ನು ಏನನ್ನಬೇಕೆಂದು ಈ ಪ್ರಭಾವಿ ಸಚಿವ ನಾಯಕರು ಡಿ ಕೆ ಶಿವಕುಮಾರ್ ಕುರಿತು ಹೇಳಿದ್ದಾರೆ. ಅಷ್ಟಕ್ಕೂ ಮಾಜಿ ಸಚಿವ ಕಾಂಗ್ರೆಸ್ ನ ಪ್ರಭಾವಿ ನಾಯಕನ ಕುರಿತು ಹೇಳುವ ಧೈರ್ಯವಾದರೂ  ಯಾರಿಗೆ ಇದೆ. ಯಾರು ಈ ಮಾತು ಹೇಳಿದ್ದು ಅಂತ ನಾವ್ ಹೇಳ್ತೀವಿ ನೋಡಿ. 

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪೂರ್ಣ ಅಸ್ಥಿತ್ವ ಕಳೆದುಕೊಂಡಿದ್ದು, ಅವರ ಒಳಜಗಳ, ಸಮಾಜ ಒಡೆಯುವ ಕಾರ್ಯಕ್ಕೆ ಜನರು ಬೇಸತ್ತಿದ್ದಾರೆ. ಹೀಗಾಗಿ ಉಪಚುನಾವಣೆಯ 15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ನಮಗೆ ಇದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ, ಕಾಂಗ್ರೆಸ್ ಬಲಿಷ್ಠ ವಿಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ಸುಧಾರಣೆಗೆ ಒಂದೆರಡು ವರ್ಷ ಬೇಕಾಗುತ್ತದೆ ಎಂದು ಅವರು ನುಡಿದಿದ್ದಾರೆ. ಅಲ್ಲದೇ ಮಾಜಿ ಸಚಿವ ಡಿಕೆ ಶಿವಕುಮಾರ್ ಬಿಡುಗಡೆ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯಿಸಿ, ಅವರು ಇರೋ ಸರ್ಕಾರವನ್ನೇ ಉಳಿಸಿಕೊಳ್ಳಲಿಲ್ಲ. ಇಲಿ ಬಂದರೆ ಹುಲಿ ಬಂತು ಎನ್ನಲಾಗುತ್ತಿದೆ. ಅವರ ಬಿಡುಗಡೆಗೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ ಎಂದಿದ್ದಾರೆ. 

ಸಮಾಜಕ್ಕೆ ಭ್ರಷ್ಟಾಚಾರ ರಹಿತ ಆಡಳಿತಬೇಕು. ಭ್ರಷ್ಟಾಚಾರ ಪೂರಕ ಸಮಾಜ ಕಟ್ಟುವುದಕ್ಕೆ ಅಸಾಧ್ಯ. ಜಾತಿಯಹಿನ್ನೆಲೆಯಲ್ಲಿ ರಕ್ಷಣೆ ಪಡೆಯುವುದು ಸರಿಯಲ್ಲ ಎಂದು ಅಶ್ವತ್ ನಾರಾಯಣ್ ಅವರು ಡಿಕೆ ಶಿವಕುಮಾರ್​ಗೆ ಟಾಂಗ್ ನೀಡಿದರು. ಅಲ್ಲದೇ ಕೆಟ್ಟ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದು ಅನರ್ಹ ಶಾಸಕರು. ಆ ಶಾಸಕರು ಸಮಾಜದ ರಕ್ಷಣೆಗೆ ಬಂದವರು. ಅವರು ಸತ್ಕಾರ್ಯ ಮಾಡಿದವರು. ಅವರಿಗೆ ಮಾನ್ಯತೆ ಸಿಗದೆ ಮತ್ತೆ ಯಾರಿಗೆಸಿಗಬೇಕು? ಅವರು ಈವರೆಗೆ ಬಿಜೆಪಿ ಪಕ್ಷಕ್ಕೆ ಸೇರಿಲ್ಲ. ಸೇರ್ಪಡೆ ನಂತರ ಯಾರಿಗೆ ಟಿಕೆಟ್ ಕೊಡಬೇಕು ಅಂತ ಪಕ್ಷ ನಿರ್ಧರಿಸುತ್ತದೆಎಂದು ಡಿಸಿಎಂತಿಳಿಸಿದರು.

ಇನ್ನು ಟಿಪ್ಪು ಜಯಂತಿ ಆಚರಿಸುವುದಾಗಿ ಹೇಳಿರುವ ಶರತ್ ಬಚ್ಚೇಗೌಡ ಹೇಳಿಕೆ ಬಗ್ಗೆ ಮಾತನಾಡಿ, ನಮ್ಮ ಪಕ್ಷದ ನಾಯಕರು, ಕಾರ್ಯಕರು ಟಿಪ್ಪು ಜಯಂತಿ ಆಚರಿಸಲ್ಲ. ನಮ್ಮ ಪಕ್ಷದಲ್ಲಿ ಇಲ್ಲದವರು ಟಿಪ್ಪು ಜಯಂತಿ ಆಚರಿಸುತ್ತಾರೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ. 


Find Out More:

Related Articles: