ಮತ್ತೇ ಡಿಕೆ ಶಿವಕುಮಾರ್ ಗೆ ಎಷ್ಟು ದಿನ ಕಸ್ಟಡಿ ವಾಸ !?

somashekhar
ನವದೆಹಲಿ: ಕಳೆದ ಇಪ್ಪತ್ತು ದಿನಗಳಿಂದ ತಿಹಾರಿನ ಜೈಲು ವಾಸ ಅನುಭವಿಸುತ್ತಿರುವ ಮಾಜಿ ಸಚಿವ ಡಿ. ಕೆ ಶಿವಕುಮಾರ್ ವಿಚಾರಣೆ ಇಂದು ನಡೆಯಿತು. ಇಡಿ ವಿಶೇಷ ನ್ಯಾಯಾಲಯ ಇನ್ನೂ 10 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಅ. 25 ರವರೆಗೆ ಡಿಕೆಶಿ ಇಡಿ ಅಧಿಕಾರಿಗಳ ವಶದಲ್ಲಿರಬೇಕಾಗುತ್ತದೆ. 

ಕನಕಪುರ ಬಂಡೆ ಡಿ. ಕೆ ಶಿವಕುಮಾರ್ ಪರವಾಗಿ ದೆಹಲಿ ಹೈಕೋರ್ಟ್​ನಲ್ಲಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಾಡಲಿದ್ದಾರೆ. ನಿನ್ನೆ ಕಾಂಗ್ರೆಸ್​ ಟ್ರಬಲ್​​ ಶೂಟರ್​​ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆದಿತ್ತು. ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕಸದಸ್ಯ ಪೀಠ ತೀರ್ಪು ನೀಡಿ ಇಂದಿಗೆ ಮುಂದೂಡಿತ್ತು. ಇಂದೇ ಇಡಿ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಮುಂದೂಡುವ ಬಗ್ಗೆ ನ್ಯಾಯಮೂರ್ತಿ ಸುರೇಶ್ ಕುಮಾರ್ ವಕೀಲರ ಅಭಿಪ್ರಾಯ ಕೇಳಿದ್ದರು. ಇಡಿ ಪರ ವಕೀಲರು ನ್ಯಾಯಾಲಯಕ್ಕೆ ತಮ್ಮ ತನಿಖೆಯ ಬಗ್ಗೆ ವರದಿ ಸಲ್ಲಿಸಿದ್ದರು. ಹಾಗಾಗಿ ಡಿಕೆಶಿ ವಿಚಾರಣೆಯನ್ನು ಹೈಕೋರ್ಟ್​ ಮುಂದೂಡಿತ್ತು.

ನನಗೆ ಆರೋಗ್ಯದಲ್ಲಿ ಸಮಸ್ಯೆಯಿದೆ. ಹೀಗಾಗಿ, ನಿಂತುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕುರ್ಚಿ ಕೊಟ್ಟರೆ ಕುಳಿತುಕೊಳ್ಳುತ್ತೇನೆ. ನಾನು ಕೂಡ ಜೈಲು ಮಂತ್ರಿ ಆಗಿದ್ದವನು. ನಾನು ಬೇರೆ ಏನೂ ವಿಶೇಷ ಸೌಲಭ್ಯ ಕೇಳುತ್ತಿಲ್ಲ. ಬೆನ್ನು ನೋವಿನ ಕಾರಣ ಚೇರ್ ಕೇಳುತ್ತಿದ್ದೇನೆ ಎಂದು ಡಿ.ಕೆ.ಶಿ ಕೇಳಿದಾಗ ನ್ಯಾಯಾಧೀಶರು ಚೇರ್ ಕೊಡಲು ಸೂಚಿಸಿದರು.  

ನಿನ್ನೆ ಮನು ಸಿಂಗ್ವಿ ಬಾರದ ಕಾರಣಕ್ಕೆ ಕೋರ್ಟ್ ಇಂದಿಗೆ ಮೂದೂಡಲಾಗಿತ್ತು. ಈ ಮಧ್ಯೆ ಡಿ.ಕೆ ಶಿವಕುಮಾರ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆರು ವರ್ಷದ ಹಿಂದೆ ಸಲ್ಲಿಸಲಾಗಿದ್ದ ಪಿಎಎಲ್ ಕೋರ್ಟ್​ನಲ್ಲಿ ವಿಚಾರಣೆಗೆ ಬಂದಿತ್ತು. ಈಸಂಬಂಧ ವಿಚಾರಣೆ ನಡೆಸಿದ ರಾಮನಗರ ಕೋರ್ಟ್​​, ಈ ಕೇಸ್ ಕುರಿತಂತೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.  ತಾಯಿ, ಪತ್ನಿ ಸೇರಿ ಇತರರ ಹೆಸರಲ್ಲಿ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದ್ದರಿಂದ ಇಡಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ. ಇಡಿ ತನಿಖೆ ಮುಗಿದ ಬಳಿಕ ಸರ್ಕಾರ ಅಧಿಕೃತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.


Find Out More:

Related Articles: