ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಲಿದೆ..!! ಅದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ

Soma shekhar

ಚೀನಾದಲ್ಲಿ ಹುಟ್ಟಿಕೊಂಡ ಕೊರೋನಾ ವೈರಸ್ ಇಡೀ ಜಗತ್ತನ್ನ ಹೆಮ್ಮಾರಿಯಂತೆ ಕಾಡಿ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಳ್ಳುತ್ತಿರುವುದರಿಂದ. ಜಗತ್ತಿನ ಎಲ್ಲಾ ರಾಷ್ಟ್ರಗಳು ಲಾಕ್ ಡೌನ್  ಒಳಗೆ ಬಂದಿಯಾಗಿದೆ. ಇದರಿಂದಾಗಿ ಸಾಕಷ್ಟು ದೇಶಗಳ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ.  ಹಾಗಾಗಿ ಇಡೀ ವಿಶ್ವವೇ ಚೀನಾದ ಆವಲಂಬನೆಯ್ನು ಕಡಿಮೆ ಮಾಡಲು ನಿರ್ಧರಿಸಿದೆ. ಇದರಿಂದಾಗಿ ಭಾರದಲ್ಲಿ ಹೂಡಿಕೆಯ ಸಂಖ್ಯೆ ಹೆಚ್ಚಾಗಲಿರುವ ಸಂಭವವಿದೆ ಎನ್ನಲಾಗುತ್ತಿದೆ ಅಷ್ಟಕ್ಕೂ ಭಾರತದಲ್ಲಿ ವಿದೇಶಿ ಬಂಡವಾಳ  ಹೇಗೆ ಹೆಚ್ಚಾಗುತ್ತದೆ ಗೊತ್ತಾ..? 

 

ಚೀನಾ ಕಾಲಿಡದ ಜಾಗವೇ ಉಳಿದಿಲ್ಲ. ಯಾವುದೇ ಉತ್ಪನ್ನವಿರಲಿ ಅಲ್ಲಿ ಮೇಡ್ ಇನ್ ಚೀನಾ ಇದ್ದೇ ಇರುತ್ತೆ. ನಾನಾ ರಾಷ್ಟ್ರಗಳು ಅಗ್ಗದ ಸರಕುಗಳಿಂದ, ಉತ್ತಮ ದರ್ಜೆಯ ಪ್ರಾಡಕ್ಟ್ಗಳ ತನಕ ಎಲ್ಲವನ್ನೂ ಚೀನಾದಿಂದಲೇ ಸ್ವೀಕರಿಸುತ್ತವೆ. ತನ್ನ ಟ್ರಿಲಿಯನ್ ಡಾಲರ್ಗಟ್ಟಲೆ ವ್ಯಾಪಾರದಿಂದ ಶರವೇಗದಲ್ಲಿ ಬೆಳೆಯುತ್ತಿರುವ ಚೀನಾ, ಜಗತ್ತಿನ 2ನೇ ಬಹುದೊಡ್ಡ ಆರ್ಥಿಕತೆಯಾಗಿದೆ.

 

ಆದರೆ ಈಗ ಕೊರೊನಾದಿಂದ ಇಡೀ ವಿಶ್ವವೇ ಪಾಠ ಕಲಿತಿದೆ. ಚೀನಾದ ಅವಲಂಬನೆಯನ್ನು ತಗ್ಗಿಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜೊತೆಗೆ ಭಾರತವೂ ಕೂಡ ಯೋಜನೆ ಸಿದ್ಧಗೊಳಿಸುತ್ತಿದೆ.

 

ಚೀನಾದ ದುರಾಸೆಯ ಬುದ್ದಿ ಅರಿತ ಹಲವು ಬಹುರಾಷ್ಟ್ರೀಯ ಕಂಪನಿಗಳು ಇದೀಗ ಭಾರತದತ್ತ ಮುಖಮಾಡುವ ಯೋಚನೆ ಮಾಡುತ್ತಿವೆ. ಹೀಗಾಗಿಯೇ ಭಾರತದಲ್ಲಿ ಈಗಾಗಲೇ ಉನ್ನತ ಮಟ್ಟದ ಸಭೆ ನಡೆದಿದ್ದು, ಚೀನಾದಿಂದ ಸ್ಥಳಾಂತರವಾಗಲು ನಿರ್ಧರಿಸಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.

 

ಔಷಧ, ಆಟೊಮೊಬೈಲ್, ಮೊಬೈಲ್ ಉತ್ಪಾದನೆ ಸೇರಿಂದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆಗೆ ಆಹ್ವಾನಿಸಲಾಗುವುದು ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಜಪಾನ್, ಅಮೆರಿಕ ಮೂಲದ ಕಂಪನಿಗಳನ್ನು ಆಕರ್ಷಿಸಲು ಯತ್ನಿಸಲಾಗುತ್ತಿದೆ. ಆಯಪಲ್, ಸ್ಯಾಮ್ಸಂಗ್, ಒಪ್ಪೊ, ವಿವೊ ಮುಂತಾದ ದಿಗ್ಗಜ ಕಂಪನಿಗಳಿಗೆ ಭಾರತದಲ್ಲಿ ಅವುಗಳ ಪೂರ್ಣಪ್ರಮಾಣದ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ. ಭಾರತವನ್ನು ಸ್ಮಾರ್ಟ್ಫೋನ್ಗಳ ಉತ್ಪಾದನೆ ಮತ್ತು ರಫ್ತಿನ ಪ್ರಮುಖ ತಾಣವಾಗಿಸಲು ಚಿಂತನೆ ನಡೆದಿದೆ.

 

ಸಾಮಾನ್ಯ ಪರಿಸ್ಥಿತಿಯಲ್ಲಿ ಚೀನಾ-ಜಪಾನ್ ನಡುವೆ ಆಮದು-ರಫ್ತು ವಹಿವಾಟು ದೊಡ್ಡ ಪ್ರಮಾಣದಲ್ಲಿರುತ್ತಿತ್ತು. ಆದರೆ ಕಳೆದ ವರ್ಷದಿಂದೀಚೆಗೆ ಚೀನಾವು ಜಪಾನ್ನಿಂದ ಆಮದನ್ನು ಕಡಿತಗೊಳಿಸಿತ್ತು. ಜತೆಗೆ ಅಮೆರಿಕವು ಚೀನಾ ವಿರುದ್ಧ ಹೇರಿದ ನಿರ್ಬಂಧಗಳಿಂದ ಚೀನಾದಲ್ಲಿರುವ ಜಪಾನಿ ಕಂಪನಿಗಳಿಗೆ ಅಡ್ಡಿಯಾಗಿದೆ. ಜಪಾನ್ ವಾಣಿಜ್ಯ ಮಂಡಳಿಗಳು ಈಗಾಗಲೇ ಭಾರತದ ಅಧಿಕಾರಿಗಳು ಹಾಗೂ ವಾಣಿಜ್ಯ ಮಂಡಳಿಗಳ ಜತೆಗೆ ಚರ್ಚಿಸಿವೆ. ಕೇಂದ್ರ ಸರಕಾರ ಕೂಡ ಜಪಾನ್ ಮೂಲದ ಹೂಡಿಕೆಯನ್ನು ಆಕರ್ಷಿಸಲು ಪೂರ್ವ ಸಿದ್ಧತೆಗೆ ಮುಂದಾಗಿದೆ.

 

ಇನ್ನು ಅಮೆರಿಕಾ ಕೂಡ ಚೀನಾದ ದುರಾಸೆಯನ್ನರಿತು ಎಚ್ಚರಿಕೆಯಿಂದ ಇರಲು ನಿರ್ಧರಿಸಿದೆ. ಈಗಾಗಲೇ ಕಳೆದ ವರ್ಷವೇ ವಾಣಿಜ್ಯ ಸಮರದಿಂದ ಉಭಯ ದೇಶಗಳ ನಡುವೆ ಭಾರೀ ಸಂಘರ್ಷವೇ ನಡೆದು ಹೋಗಿದೆ. ಇದರ ಜೊತೆಗೆ ಚೀನಾ ಸೈಲೆಂಟಾಗಿ ಅಮೆರಿಕಾದ ಬಾಂಡ್ಗಳ ಮೇಲಿನ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿದ್ದು, ಇದು ಮುಂದಿನ ದಿನಗಳಲ್ಲಿ ಸಂಘರ್ಷಕ್ಕೂ ಎಡೆ ಮಾಡಿಕೊಡಬಹುದು.

 

2019ರಲ್ಲಿ ಅಮೆರಿಕ ಮೂಲದ ೫೦ಕ್ಕೂ ಹೆಚ್ಚು ಕಂಪನಿಗಳು ಚೀನಾದಿಂದ ಈಗಾಗಲೇ ಸ್ಥಳಾಂತರವಾಗಿವೆ. ಕೊರೊನಾ ಅವಾಂತರ ಆದ ಬಳಿಕ ಸುಮಾರು 200 ಅಮೆರಿಕನ್ ಕಂಪನಿಗಳು ತಮ್ಮ ಉತ್ಪಾದನಾ ನೆಲೆಯನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಗೊಳಿಸಲು ಉತ್ಸುಕವಾಗಿವೆ.

 

ಮೊದಲನೆಯದಾಗಿ ನೋಡುವುದಾದರೆ ಚೀನಾ ಕಂಡರೆ ಭಯಕ್ಕೆ ಕಾರಣವಾಗಿರುವುದು ಕೊರೊನಾವೈರಸ್ ಸೋಂಕು. ಈ ಮಹಾಮಾರಿಯು ಲಕ್ಷಾಂತರ ಜನರ ಜೀವಗಳನ್ನಷ್ಟೇ ಬಲಿ ತೆಗೆದುಕೊಳ್ಳದೆ ಜಾಗತಿಕ ಆರ್ಥಿಕತೆಯನ್ನು ನುಂಗಿಹಾಕುತ್ತಿದೆ. ನೂರಕ್ಕೂ ಹೆಚ್ಚು ರಾಷ್ಟ್ರಗಳು ಲಾಕ್ಡೌನ್ ಪರಿಸ್ಥಿತಿಯಲ್ಲಿದ್ದು ಪೂರೈಕೆ ಸರಪಳಿಯೇ ತುಂಡಾಗಿದೆ.

 

ಕೊರೊನಾ ಒಂದೇ ಅಲ್ಲದೆ ಈ ಹಿಂದೆ ಸಾರ್ಸ್, ಮಾರ್ಸ್ ನಂತಹ ಸಾಂಕ್ರಾಮಿಕ ರೋಗಗಳು ಚೀನಾದಿಂದಲೇ ಹಬ್ಬಿರುವುದು ಇತರೇ ರಾಷ್ಟ್ರಗಳ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಡ್ರ್ಯಾಗನ್ ರಾಷ್ಟ್ರದಿಂದ ಅಂತರ ಕಾಯ್ದುಕೊಳ್ಳುವ ಯೋಚನೆಯು ಇದೆ.

ಇನ್ನು ಚೀನಾದ ಮೇಲಿನ ಅತಿಯಾದ ಅವಲಂಬನೆಯು ಇದೀಗ ಕೊರೊನಾವೈರಸ್ನಿಂದಾಗಿ ಬಹಿರಂಗವಾಗಿದೆ. ಅವಲಂಬನೆ ಹೆಚ್ಚಾಗಿದ್ದರಿಂದ ಆಯಾ ರಾಷ್ಟ್ರದಲ್ಲಿ ನಿರುದ್ಯೋಗ ಕೂಡ ಹೆಚ್ಚಾಗುತ್ತಿದೆ. ಇದರ ಜೊತೆಗೆ ಬೃಹತ್ ವಿದೇಶಿ ಕಂಪನಿಗಳಲ್ಲಿ ಚೀನಾ ಹೂಡಿಕೆಯು ಹೆಚ್ಚುತ್ತಿದ್ದು ನಿಯಂತ್ರಣಕ್ಕೆ ಕೆಂಪು ರಾಷ್ಟ್ರ ಹೊಂಚು ಹಾಕಿದೆ.

Find Out More:

Related Articles: