ಕೊರೋನ ಯುದ್ದದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಯೋಧನಾಗಿದ್ದಾನೆ : ಪ್ರಧಾನಿ ಮೋದಿ ಅಭಿಪ್ರಾಯ
ನವದೆಹಲಿ : ಕೊರೋನಾ ವೈರಸ್ನ ವಿರುದ್ಧ ಹೋರಾಡಲು ಇಡೀ ದೇಶವನ್ನು ಲಾಕ್ ಡೌನ್ ಮಾಡಿಕೊಂಡು ದೇಶದ ಜನರನ್ನು ಅವರವರ ಗೃಹಗಳಲ್ಲಿಯೇ ಬಂದಿಸಿದ್ದಾರೆ. ಎಷ್ಟೋ ಕಂಪನಿಗಳು, ಕಾರ್ಖಾನೆಳನ್ನು ಮುಚ್ಚಲಾಗಿದೆ. ಹಾಗೂ ಯಾರೂ ಕೂಡ ಮನೆಯಿಂದ ಹೊರಬಾರದಂತೆ ನಿರ್ಭಂದವನ್ನು ಹೇರಲಾಗಿದೆ. ಇಷ್ಟಾದರೂ ಕೂಡ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಪ್ರಧಾನಿ ಮೋದಿಯವರು ಮನ್ ಕಿ ಬಾತ್ ನಲ್ಲಿ ದೇಶದ ಜನತೆಯ ಕುರಿತಾಗಿ ಮಾತನಾಡಿದ್ದಾರೆ. ಅಷ್ಟಕ್ಕೂ ಪ್ರಧಾನಿ ಮೋದಿ ಏನು ಮಾತನಾಡಿದ್ದಾರೆ ಗೊತ್ತಾ..?
ಮಹಾಮಾರಿ ಕೋವಿಡ್-19 ವಿರುದ್ಧ ಆಡಳಿತ ಮತ್ತು ಜನರು ಒಟ್ಟಾಗಿ ಸೇರಿ ಹೋರಾಡುತ್ತಿದ್ದಾರೆ. ಈ ಯುದ್ಧದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಯೋಧನಾಗಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಮನ್ ಕಿ ಬಾತ್‌ನ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕೇಂದ್ರ, ರಾಜ್ಯ ಸರ್ಕಾರ ಮತ್ತು ಎಲ್ಲಾ ವಿಭಾಗಗಳು, ಸಂಸ್ಥೆಗಳು ಒಟ್ಟಾಗಿ ಸೇರಿ ಪರಿಹಾರ ಕಾರ್ಯಗಳನ್ನು ಅತ್ಯಂತ ವೇಗವಾಗಿ ಮಾಡುತ್ತಿವೆ. ಮಹಾಮಾರಿ ವಿರುದ್ಧ ರಾಜ್ಯ ಸರ್ಕಾರಗಳು ಪೂರ್ವಭಾವಿಯಾಗಿ ಕೈಗೊಂಡಿರುವ ಕ್ರಮಗಳನ್ನು ನಾನು ಪ್ರಶಂಸುತ್ತೇನೆ ಎಂದು ಹೇಳಿದ್ದಾರೆ.
ಕೋವಿಡ್19 ನಿಂದಾಗಿ ಇದೀಗ ಮಾಸ್ಕ್ ನಮ್ಮ ಜೀವನದ ಒಂದು ಭಾಗವಾಗಿದೆ. ಆದ್ರೆ ಇತರೆ ಆರೋಗ್ಯ ಸಮಸ್ಯೆ ಇದ್ದಾಗಲೂ ಇದರ ಬಳಕೆಯ ಅವಶ್ಯಕತೆ ಇಲ್ಲ. ಮಾಸ್ಕ್ ನಾಗರಿಕ ಸಮಾಜದ ಸಂಕೇತವಾಗಿದೆ. ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬೇಕಾದರೆ, ಬೇರೆಯವರಿಂದ ರೋಗ ಹರಡುವುದನ್ನ ತಡೆಯಲು ಮಾಸ್ಕ್ ಬಳಕೆ ಅತಿ ಮುಖ್ಯವಾಗಿದೆ ಎಂದಿದ್ದಾರೆ.
ಸಾಮಾಜಿಕ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತಗಳೊಂದಿಗೆ ಸಂಪರ್ಕ ಸಾಧಿಸಲು 'covidwarriors.gov.in' ಎಂಬ ಡಿಜಿಟಲ್ ಪ್ಲಾಟ್‌ಫಾರಂ ನಿರ್ಮಿಸಲಾಗಿದೆ. ವೈದ್ಯರು, ನರ್ಸ್‌ಗಳು, ಎನ್‌ಸಿಸಿ ಕೆಡೆಟ್ ಸೇರಿದಂತೆ 1.25 ಕೋಟಿ ಜನರು ಈ ಪ್ಲಾಟ್‌ಫಾರಂಗೆ ಸೇರಿದ್ದಾರೆ.
ಸಾಂಕ್ರಾಮಿಕ ರೋಗ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲಾಗಿದೆ. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ನಿರ್ಧಾರಕ್ಕೆ ಇದು ಬಲ ತುಂಬಿದೆ. ಈ ಮೊದಲು ವೈದ್ಯರು, ನರ್ಸ್‌ಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ರಕ್ಷಣೆ ಕಷ್ಟಕರವಾಗಿತ್ತು. ಇದೀಗ ಹೊಸ ಕಾನೂನಿಂದ ಇವರೆಲ್ಲಾ ಸಂತೃಪ್ತಿಗೊಂಡಿದ್ದಾರೆ ಎಂದು ಪ್ರಧಾನಿ ಮನ್ ಕಿ ಬಾತ್ ಕಾರ್ಯಕ್ರದಲ್ಲಿ ಹೇಳಿದ್ದಾರೆ.
ಕೋವಿಡ್‌ನಿಂದಾಗಿ ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಮಲಗಬಾರದು ಎಂಬ ಭರವಸೆಯನ್ನು ರೈತರು ನೀಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡ್ತಿದ್ದಾರೆ. ಕೆಲವರು ಮನೆ ಬಾಡಿಗೆ ಹಣ ಪಡೆಯುತ್ತಿಲ್ಲ. ಶಾಲೆಗಳಲ್ಲಿ ಕ್ವಾರೆಂಟೈನ್ ಆಗಿರುವ ಕಾರ್ಮಿಕರು ಶಾಲೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿದ್ದಾರೆ.
ಇದು ರಂಜಾನ್ ಮಾಸ. ಹೀಗಾಗಿ ಕೋವಿಡ್19 ವಿರುದ್ಧ ಹೋರಾಡಲು ಹಿಂದೆಂದಿಗಿಂತಲೂ ಹೆಚ್ಚಾಗಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಮಾಡ