ಪಂಚಭೂತಗಳಲ್ಲಿ ಲೀನವಾದ ರಮೇಶ್

somashekhar
ರಾಮನಗರ: ಆದಾಯ ತೆರಿಗೆ ಇಲಾಖೆ ವಿಚಾರಣೆ ಅನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದ ಮಾಜಿ ಡಿ ಸಿ ಎಂ ಜಿ. ಪರಮೇಶ್ವರ್ ಅವರ ಪಿಎ ರಮೇಶ್ ಇಂದು ಪಂಚಭೂತಗಳಲ್ಲಿ ಲೀನರಾದರು. ರಮೇಶ್ ಮೃತದೇಹಕ್ಕೆ​ ಪುತ್ರ ಮೋಹಿತ್ ​ಅಗ್ನಿ ಸ್ಪರ್ಶ ಮಾಡಿದರು. ಒಕ್ಕಲಿಗ ಸಂಪ್ರದಾಯದಂತೆ ರಾಮನಗರ ತಾಲೂಕಿನ ಮೆಳ್ಳಳ್ಳಿ ಜಮೀನಿನಲ್ಲಿ ರಮೇಶ್​ ಅಂತ್ಯಸಂಸ್ಕಾರ ನಡೆಯಿತು. ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಸ್ನೇಹಿತರು, ಮೆಳ್ಳಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗಿಯಾಗಿದ್ದರು.

ರಮೇಶ್ ಮಗ ಮೋಹಿತ್, ಪುತ್ರಿ ಶ್ರೇಯ, ಪತ್ನಿ ಸೌಮ್ಯ ಅವರನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಜಿ ಡಿಸಿಎಂ ಪರಮೇಶ್ವರ್ ತಮ್ಮ ಆಪ್ತ ಸಹಾಯಕನ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ನಿನ್ನೆ ಜ್ಞಾನಭಾರತಿ ವಿವಿ ಕ್ಯಾಂಪಸ್​ನಲ್ಲಿ ಪರಮೇಶ್ವರ್ ಪಿಎ ರಮೇಶ್​ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಐಟಿ ವಿಚಾರಣೆಗೆ ಹೆದರಿ ಸಾಯುವ ನಿರ್ಧಾರ ಮಾಡಿದ್ಧಾರೆ ಎಂದು ತಿಳಿದು ಬಂದಿತ್ತು. ರಮೇಶ್​ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಕಾಂಗ್ರೆಸ್​ ಮುಖಂಡರು ಆರೋಪಿಸಿದ್ದರು. ಪ್ರಕರಣ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು.

ರಮೇಶ್​ ಕುಟುಂಬಸ್ಥರೂ ಸಹ ಐಟಿ ಅಧಿಕಾರಿಗಳ ಕಿರುಕುಳವೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೇಲೆ ದೂರನ್ನು ನೀಡಿದ್ದಾರೆ.  ರಮೇಶ್ ಯಾರ ಆಸ್ತಿಯನ್ನೂ ಕಬಳಿಸಿಲ್ಲ. ರಮೇಶ್​ಗೆ ತಾತನ ಕಾಲದ ಆಸ್ತಿ ಸಾಕಷ್ಟಿದೆ. ಆದರೆ ಆತ್ಮಹತ್ಯೆ ಮಾಡಿದ್ದು ನೋವಿನ ವಿಚಾರ ಎಂದು ಆತನ ಕುಟುಂಬಸ್ಥರು ಹೇಳಿದ್ದರು. ಕಳೆದ ಮೂರು ದಿನಗಳ ಹಿಂದೆ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ನಿವಾಸ ಮತ್ತು ಅವರ ಒಡೆತನದ ಶ್ರೀ ಸಿದ್ಧಾರ್ಥ ಶಿಕ್ಷಣ  ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಖ್ಯವಾಗಿ ಮೆಡಿಕಲ್ ಕಾಲೇಜಿನ ಮೇಲೆ ದಾರಿ ನಡೆಸಿದ್ದರು. ರಮೇಶ್ ಅನ್ನು ಸಹ ವಿಚಾರಣೆ ಹಾಗೂ ಪರಮೇಶ್ವರ್ ಅನ್ನು ಸಹ ವಿಚಾರಣೆ ನಡೆಸಿದ್ದರು.


Find Out More:

Related Articles: