ವಾಹನ ಸವಾರರೇ ಇಂದಿನ ಎಚ್ಚರ..!

somashekhar
ವಾಹನ ಚಾಲಕರೇ ಎಚ್ಚರ.. ಇಂದಿನಿಂದ ಟ್ರಾಫಿಕ್ ಫೈನ್ ಮತ್ತಷ್ಟು ಹೆಚ್ಚಳವಾಗಿದೆ ಅನ್ನೋದು ನಿಮಗೆಲ್ಲ ಬಹುಶಃ ಗೊತ್ತಿರಬಹುದು. ರೂಲ್ಸ್ ಇರೋದೇ ಬ್ರೇಕ್ ಮಾಡಡೋಕೆ ಅಂತೆಲ್ಲ ಉಡಾಫೆಯಿಂದ ವರ್ತನೆ ಮಾಡಬೇಡಿ. ಹೌದು ಇನ್ಮೇಲೆ ನೀವೇನಾದರೂ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಇದ್ದರೆ ಭಾರೀ ದಂಡವನ್ನೇ ತೆರಬೇಕಾದೀತು ಜೋಕೆ. ಇಂದಿನಿಂದ ದೇಶಾದ್ಯಂತ ಹೊಸ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಷ್ಟಕ್ಕೂ ವಾಹನ ಸಂಚಾರಕರ ಸುರಕ್ಷತಾ ದೃಷ್ಟಿಯಿಂದ ಈ ನಿಯಮ ಜಾರಿಗೆ ಬಂದಿದೆ ಎನ್ನಲಾಗುತ್ತಿದೆ.


ಈ ಮೊದಲು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರಿಗೂ ಹೆಲ್ಮಟ್ ಕಡ್ಡಾಯ ಮಾಡಲಾಗಿತ್ತು. ಆದರೂ ಹೆಚ್ಚಿನವರು ಅದನನ್ನು ಪಾಲನೆ ಮಾಡುತ್ತಿರಲೇ ಇಲ್ಲ. ಅಲ್ಲದೇ ಒಂದು ವೇಳೆ ಪೊಲೀಸರು ಹಿಡಿದರೆ ನೂರು ರೂಪಾಯಿ ಫೈನ್ ಕಟ್ಟುತ್ತಿದ್ದರು. ಇಲ್ಲದೇ ಇದ್ದರೆ, 50 ರೂ. ಪೊಲೀಸರ ಜೇಬಿಗೆ ಹಾಕಿ ಐವತ್ತು ರೂಪಾಯಿ ಉಳಿಸಿಕೊಂಡು ಹೋಗುತ್ತಿದ್ದರು. 


ಆದರೆ ಈಗ ಹೊಸ ಟ್ರಾಫಿಕ್ ನಿಯಮಗಳನ್ನು ತುಂಬ ಶಿಸ್ತಿನಿಂದಲೇ ಜಾರಿಗೆ ತರಲಾಗಿದೆ. ಮತ್ತೆ ಇನ್ಮೇಲೆ ಪ್ರತಿಯೊಂದು ನಿಯಮ ಉಲ್ಲಂಘನೆಗೂ ದೊಡ್ಡ ಮಟ್ಟದ ದಂಡ ನಿಗದಿ ಮಾಡಲಾಗಿದೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಪ್ರಕಾರ ಇರೋ ನಿಯಮಗಳು ಇಲ್ಲಿವೆ ನೋಡಿ.


1. ಕುಡಿದು ವಾಹನ ಚಲಾಯಿಸುವವರಿಗೆ ಇಂದಿನಿಂದ ಬರೋಬ್ಬರಿ 10 ಸಾವಿರ ರೂ. ದಂಡ 
2. ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸಿದರೆ 5 ಸಾವಿರ ರೂ ದಂಡ
3.  ಲೈಸೆನ್ಸ್ ಇಲ್ಲದೆ ಗಾಡಿ ಓಡಿಸಿದರೆ 5 ಸಾವಿರ ರೂ ದಂಡ
4. ಕಾರಿನಲ್ಲಿ ಸೀಟ್ ಬೆಲ್ಟ್, ಬೈಕ್ನಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದರೆ 1 ಸಾವಿರ ರೂ. ದಂಡ  


ಇವು ಪ್ರಮುಖ ತಿದ್ದುಪಡಿಗಳಾಗಿದ್ದು,  ನಿನ್ನೆ ರಾತ್ರಿಯಿಂದಲೇ ಟ್ರಾಫಿಕ್ ಪೊಲೀಸರು ದಂಡ ಹಾಕುವ ಬಗ್ಗೆ ಚುರುಕಾಗಿದ್ದಾರೆ. ಅಲ್ಲದೇ ನಿನ್ನೆ ರಾತ್ರಿಯಿಂದಲೇ ಕುಡಿದು ವಾಹನ ಚಲಾಯಿಸುವವರಿಗೆ ದಂಡ ಹಾಕಿದ್ದಾರೆ.  ಯಾವುದೇ ಕಾರಣಕ್ಕೆ ಇನ್ಮೇಲೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಬೇಡಿ. ಹೊಸ ತಿದ್ದುಪಡಿಯು ನಿಮ್ಮ ಹಣವನ್ನೆಲ್ಲ ತಿಂದು ಹಾಕಬಹುದು. ಎಚ್ಚರ ಸವಾರರೇ ಎಚ್ಚರ...!



Find Out More:

Related Articles: