ವಿದ್ಯಾರ್ಥಿಗಳಿಗೆ ಶುಭ ಸುದ್ದಿ ನೀಡುತ್ತದೆಯಾ ಬಿಜೆಪಿ?

somashekhar
ರಾಜ್ಯವು ಒಂದು ಕಡೆಯಲ್ಲಿ ವ್ಯಾಪಕವಾಗಿ ನೆರೆ ಹಾವಳಿ ಆಗಿ ಜನರು ತಿನ್ನೋಕು ಕೂಳಿಲ್ಲದೇ ಮತ್ತೊಂದು ಕಡೆ ವಾಸ ಮಾಡೋಕೆ ಸೂರು ಇಲ್ಲದೇ ಕಷ್ಟ ಕಾಲದಲ್ಲಿ ಸಮಯ ಕಳೆಯುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಇನ್ನೂ ಅವರಿಗೆ ಯಾವುದೇ ರೀತಿಯಾದ ತುರ್ತು ಪರಿಹಾರವನ್ನು ನೀಡಿಲ್ಲ. ಆದರೆ ಇದೀಗ ವಿದ್ಯಾರ್ಥಿಗಳಿಗೆ ಅವರು ಶುಭ ಸುದ್ದಿ ನೀಡಲಿದ್ದಾರೆ. ಹಾಗಾದರೆ ಈ ಕುರಿತು ಮತ್ತಷ್ಟು ಡಿಟೇಲ್ಸ್ ಇಲ್ಲಿದೆ ನೋಡಿ.

ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸ್ತುತವಾಗಿ ನೀಡುತ್ತಿರುವ ವಾರ್ಷಿಕ ವೆಚ್ಚವನ್ನು ಹೆಚ್ಚಳ ಮಾಡಲು ಯಡಿಯೂರಪ್ಪ ತೀರ್ಮಾನ ಮಾಡಿದ್ದಾರೆ. ಪ್ರಸ್ತುತ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ 2438 ಹಾಸ್ಟೆಲ್‍ಗಳು ಇವೆ. ಈ ವಿದ್ಯಾರ್ಥಿ ನಿಲಯಗಳಲ್ಲಿ ಸುಮಾರು 1,88,500 ವಿದ್ಯಾರ್ಥಿಗಳು ಈಗಾಗಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ವಾರ್ಷಿಕ ವೆಚ್ಚವಾಗಿ ಪ್ರತಿ ವಿದ್ಯಾರ್ಥಿಗೆ 1600 ರೂ. ನೀಡಲಾಗುತ್ತಿದೆ.

ಇದೀಗ ಯಡಿಯೂರಪ್ಪ ಅವರ ರಾಜ್ಯ ಸರ್ಕಾರ 2200 ರಿಂದ 2500ರವರೆಗೆ ಹೆಚ್ಚಳ ಮಾಡೋಕೆ ರಾಜ್ಯ ಸರ್ಕಾರ, ಈ ಕುರಿತು ಈಗಾಗಲೇ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಯಡಿಯೂರಪ್ಪ ಅವರು ಚರ್ಚೆ ನಡೆಸಿದ್ದಾರೆ. ಅಲ್ಲದೇ ಹಾಸ್ಟೆಲ್ ವೆಚ್ಚವನ್ನು ಏರಿಕೆ ಂಆಡುವ ಕುರಿತು ಸಾಧಕ ಮತ್ತು ಭಾಧಕ ಕುರಿತು ವರದಿ ನಿಡುವಂತೆ ಹೇಳಲಾಗಿದೆ. 

ಹೌದು ರಾಜ್ಯದಲ್ಲಿ ಇರುವ ಅನೇಕ ಸರಕಾರಿ ಹಾಸ್ಟೆಲ್ ಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳ ಬಗ್ಗೆ ವರದಿ ಮಾಡಿದರೂ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಇದರಿಂದ ಬೇಸತ್ತು ಹೋಗಿದ್ದಾರೆ. ಅಲ್ಲದೇ ವಾರ್ಡನ್ ಅವರ ವರ್ತನೆಯಿಂದ ರೋಸಿ ಹೋಗಿದ್ದಾರೆ. ಹೀಗಾಗಿ ವಿದ್ಯಾರ್ಥಿ ಸ್ನೇಹಿ  ವಾರ್ಡನ್ ಹಾಗೂ ಉತ್ತಮ ಸೌಲಭ್ಯದ ಹಾಸ್ಟಲ್ ನಿರ್ಮಾಣ ಮಾಡಬೇಕೆಂದು ವಿದ್ಯಾರ್ಥಿಗಳ ಬೇಡಿಕೆ ಆಗಿದೆ ಅನ್ನೋದು ಮಾತ್ರ ಸತ್ಯ. 

ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ನಿಲಯಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ ಎಂದು ಈ ಹಿಂದೆ ಬಿಜೆಪಿಯೇ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಹೀಗಾಗಿ ಇದೀಗ ಅದನ್ನು ಸರಿ ಪಡಿಸೋಕೆ ಬಿಜೆಪಿಗೆ ಒಂದು ಉತ್ತಮ ಅವಕಾಶ ಒದಗಿ ಬಂದಿದೆ ಎಂದು ಹೇಳಬಹಹುದು,


Find Out More:

Related Articles: