ಯಡಿಯೂರಪ್ಪ ಸಿಎಂ; ಮೈತ್ರಿ ಸರ್ಕಾರದ ವಿಕೆಟ್ ಪತನ!

frame ಯಡಿಯೂರಪ್ಪ ಸಿಎಂ; ಮೈತ್ರಿ ಸರ್ಕಾರದ ವಿಕೆಟ್ ಪತನ!

somashekhar
ಇಂದು ಸಂಜೆ ರಾಜ್ಯದ 19ನೇ ಮುಖ್ಯಮಂತ್ರಿ ಆಗಿ ಬಿಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದ ಬಾರಿ ಕೇವಲ ಮೂರು ದಿನಗಳ ಕಾಲ ಸಿಎಂ ಆಗಿ ಅಧಿಕಾರ ಮಾಡಿದ್ದರು. ನಂತರ ವಿಶ್ವಾಸಮತ ಸಾಭಿತುಪಡಿಸೋಕೆ ಆಗದೇ ರಾಜೀನಾಮೆ ನೀಡಿದ್ದರು. ಇದೀಗ ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.


ಇದೇ ಸಂದರ್ಭದಲ್ಲಿ ಮೈತ್ರಿ ಸರ್ಕಾರದ ಅವಧಿಯಲ್ಲಿ ನೇಮಕ ಆಗಿದ್ದವರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನಗೊಂಡಿದ್ದಾರೆ. ಹೌದು ಅವರೇ ಅಡ್ವೋಕೆಟ್ ಜನರಲ್ ಉದಯ್ ಹೊಳ್ಳ.


ಇವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇವರು ನೇಮಕ ಆಗಿದ್ದರು.. ಇದಷ್ಟೇ ಅಲ್ಲದೇ  ಶೀಘ್ರದಲ್ಲೇ ಮತ್ತೊಬ್ಬರು ಅಡ್ವೋಕೇಟ್ ಜನರಲ್ ಆಗಿ ನೇಮಕಗೊಳ್ಳಲಿದ್ದಾರೆಂದು ಹೇಳಲಾಗಿದೆ.


Find Out More:

Related Articles:

Unable to Load More