ವಿಶ್ವಾಸಮತ ಚರ್ಚೆಗೆ ಇನ್ನೂ ಕಾಲಾವಕಾಶ ಬೇಕಂತೆ!

somashekhar
ಕರ್ನಾಟಕದಲ್ಲಿ ನಡೆಯುವ ರಾಜಕೀಯ ನಾಟಕ ಇನ್ನೂ ಮುಗಿಯುವಂತೆ ಕಾಣುತ್ತಿಲ್ಲ ಎನಿಸುತ್ತದೆ. ಹೀಗಾಗಿ ವಿಶ್ವಾಸಮತ ಯಾಚನೆ ಚರ್ಚೆಗೆ ಅವಕಾಶ ಬೇಕಿದೆ ಎಂದು ಆಡಳಿತ ಪಕ್ಷವು ಒತ್ತಾಯ ಮಾಡಿದೆ. ಜೊತೆಗೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ. 


ಇಂತಹ ಸಂದರ್ಭದಲ್ಲಿ ಸ್ಪೀಕರ್ ಅವರು ಎಲ್ಲರೂ ಒಂದು ಗಂಟೆ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ, ಅಲ್ಲದೇ ಎಲ್ಲರಿಗೂ ಅವಕಾಶ ನೀಡಿದರೆ, ಸಮಯ ಸಾಲುವುದಿಲ್ಲ. ಸೀನಿಯರ್ಸ ಉದ್ದುದ್ದ ಭಾಷಣ ಮಾಡಬೇಡಿ. ಯಂಗ್ ಸ್ಟರ್ಸ್ ಅವರಿಗೆ ಅವಕಾಶ ನೀಡಿ. ನಾನು ಎಷ್ಟು ಹೊತ್ತಾದರೂ ಕೂರುತ್ತೇನೆ ಎಂದು ತಿಳಿಸಿದ್ದಾರೆ. 


ಹೀಗಾಗಿ ಬಿಜೆಪಿ ಶಾಸಕರು ವಿಶ್ವಾಸಮತ ಯಾಚನೆಗಾಗಿ ಕಾದು ಕುಳಿತಿದ್ದರು. ಆದರೆ ಆಡಳಿತ ಪಕ್ಷದವರಂತೂ ಮ್ಯಾರಾಥಾನ್ ನಂತೆ ಚರ್ಚೆಯನ್ನು ಎಳೆದುಕೊಂಡೇ ಹೋಗುತ್ತದ್ದಾರೆ. ಆದರೆ ಸ್ಪೀಕರ್ ಮಾತ್ರ ವಿಶ್ವಾಸಮತ ಯಾಚನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 



Find Out More:

Related Articles: