ಕುಷ್ಕ ಚಿತ್ರದ ಲಿರಿಕಲ್ ಹಾಡು ಬಿಡುಗಡೆ

somashekhar

ಸಿನಿಮಾ ಹೆಸರುಗಳನ್ನು ಡಿಫರೆಂಟ್ ಆಗಿ ಇಡೋದು ಈಗಿನ ಟ್ರೆಂಡ್. ಇದಕ್ಕೆ ಮತ್ತೊಂದು ಸೇರ್ಪಡೆ ಎಂದರೆ 'ಕುಷ್ಕ'. ಹೌದು, ಇದೀಗ ಕುಷ್ಕ ಅನ್ನೋ ಚಿತ್ರ ತೆರೆಗೆ ಬರುತ್ತಿದೆ. ಸದ್ಯಕ್ಕೆ ಇದರ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದೆ.  ಸಿಂಪಲ್ ಸಲುಗೆ ಅನ್ನೋ ಹಾಡಿನ‌ ಸಾಲಿನ ಲಿರಿಕಲ್ ವಿಡಿಯೋ ಸಾಂಗ್ ಇದು. 

 

 

ಈ ಚಿತ್ರದಲ್ಲಿ ನಟಿಸ್ತಾ ಇರೋರು ಕಿರುತೆರೆ ಹಿನ್ನೆಲೆ ಇರೋರು. ಹೌದು, ಈ ಹಿಂದೆ ಲಕ್ಷ್ಮೀ ಬಾರಮ್ಮ ಅನ್ನೋ ಧಾರಾವಾಹಿಯಲ್ಲಿ‌ ನಟಿಸಿ ಖ್ಯಾತಿ ಪಡೆದಿದ್ದ ಚಂದು ಗೌಡ ಮತ್ತು ಇತ್ತೀಚೆಗೆ ಬಿಡುಗಡೆ ಆಗಿ ಹೆಸರು ಮಾಡಿದ್ದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಸಂಜನಾ ಆನಂದ ಕುಷ್ಕ ಚಿತ್ರದಲ್ಲಿ ನಟಿಸುತ್ತಾ ಇದ್ದಾರೆ. 

 

 

ಸಿಂಪಲ್ ಸಲುಗೆ ಅನ್ನೋ ಹಾಡು ಹಿರೋ ಮತ್ತು ಹಿರೋಯಿನ್ ಮಧ್ಯ ಸಲುಗೆ ಮೂಡಿದಾಗ ಬರುವ ಡೂಯಟ್ ಸಾಂಗ್. ಈ ಹಾಡಿಗರ ವಿಜಯ್ ಪ್ರಕಾಶ್ ಹಾಗೂ ಸಾನ್ವಿ ಶೆಟ್ಟಿ ಧ್ವನಿ ಆಗಿದ್ದಾರೆ. ಅಭಿಲಾಷ್ ಗುಪ್ತ ಸಂಗೀತ ಸಂಯೋಜನೆ ಮಾಡಿದ್ದಾರೆ. 

 

Find Out More:

Related Articles: