ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಯುವಕರಿಗೇ ತಗುಲುತ್ತಿರುವುದೇಕೆ..? ಇಲ್ಲಿದೆ ಮಾಹಿತಿ

Soma shekhar

ಕೊರೋನಾ ವೈರಸ್ ಇಂದು ರಾಜ್ಯದಲ್ಲಿ  30 ಸಾವಿರವನ್ನು ದಾಟಿ ಮುಂದಕ್ಕೆ ಹೋಗುತ್ತಿದೆ. ಇದುವರೆಗೂ ದಾಖಲಾಗಿರುವ ಪ್ರಕರಣಗಳಲ್ಲಿ ಅತೀ ಹೆಚ್ಚಾಗಿ ಕೊರೋನಾ ಸೋಂಕನ್ನು ಹೊಂದಿರುವವರು 20 ರಿಂದ 39 ವರ್ಷದೊಳಗಿನ ಯುವಕರೇ  ಎಂದು ವರದಿಗಳು ಹೇಳುತ್ತಿವೆ ಅಷ್ಟಕ್ಕೂ ಯುವಕರಿಗೇ ಏಕೆ ಹೆಚ್ಚು ಕೊರೋನಾ ಸೋಂಕು ತಗುಲುತ್ತಿದೆ  ಇದಕ್ಕೆ ಉತ್ತರ ಇಲ್ಲಿದೆ

 

ಮಹಾಮಾರಿ ಕೊರೊನಾ ರಾಜ್ಯದಲ್ಲಿ ಯುವ ಜನಾಂಗವನ್ನೇ ಹೆಚ್ಚಾಗಿ ಬಾಧಿಸುತ್ತಿದ್ದು, ಬಿಸಿ ರಕ್ತ ಏನು ಆಗುವುದಿಲ್ಲ ಎಂದು ಮನಸೋ ಇಚ್ಚೆ ಮೆರೆಯುವುದಕ್ಕೆ ಕಡಿವಾಣ ಹಾಕದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಸಾವಿನ ಸಂಖ್ಯೆಯಲ್ಲಿ 55 ದಾಟಿದವರ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಸೋಂಕಿತರಿಗಿಂತಲೂ ಗುಣಮುಖರಾದವರ ಸಂಖ್ಯೆ ಹೆಚ್ಚಾಗಲು ವಯೋಮಿತಿಯೂ ಕಾರಣ.

 

ಈವರೆಗಿನ ಲೆಕ್ಕಾಚಾರದಲ್ಲಿ ರಾಜ್ಯದಲ್ಲಿ 31,105 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ 17,782 ಮಂದಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12833 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಂಬತ್ತು ವರ್ಷದೊಳಗಿನ ಮಕ್ಕಳ ಪೈಕಿ 1040 ಮಂದಿ ಸೋಂಕಿತರಾಗಿದ್ದಾರೆ. 10ರಿಂದ 19 ವರ್ಷದೊಳಗಿರುವವರು 1557 ಮಂದಿ ಅಂದರೆ ಶೇ.10ರಷ್ಟು ಮಂದಿ ಸೋಂಕಿತರಾಗಿದ್ದಾರೆ.

20ರಿಂದ 39 ವರ್ಷದೊಳಗಿನ ಯುವ ಜನಾಂಗ ಶೇ.46ರಷ್ಟು ಸೋಂಕಿಗೆ ಒಳಗಾಗಿದೆ. 40 ರಿಂದ 49 ವರ್ಷದೊಳಗಿನ ಶೇ.16ರಷ್ಟು ಮಂದಿ ಸೋಂಕಿಗೆ ಸಿಲುಕಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ 20ರಿಂದ 50 ವರ್ಷದೊಳಗಿನ ವಯೋಮಿತಿಯ ವರ್ಗಕ್ಕೆ ದುಡಿಮೆ ಅನಿವಾರ್ಯವಾಗಿದ್ದು, ಮನೆಯಿಂದ ಹೊರಗಿರಲೇ ಬೇಕಿದೆ.

 

ಹಾಗಾಗಿ ಸೋಂಕಿಗೆ ಸುಲಭವಾಗಿ ಸಿಲುಕುತ್ತಿದ್ದಾರೆ. ಅತಿ ಹೆಚ್ಚು ಈ ವಯೋಮಿತಿಯವರೆ ಸೋಂಕಿತರಾಗುತ್ತಿದ್ದಾರೆ. ರಕ್ತದೊತ್ತಡ, ಮಧುಮೇಹ, ನ್ಯೂಮೋನಿಯಾದಂತಹ ಕಾಯಿಲೆಗಳಿದ್ದರೆ ಬೇಗ ಗುಣಮುಖರಾಗುತ್ತಿದ್ದಾರೆ. ದುಡಿಯುವ ವರ್ಗ ಅನಿವಾರ್ಯವಾಗಿ ಹೊರಗಿರಬೇಕಾದ ಕಾರಣಕ್ಕೆ ಸೋಂಕಿಗೆ ಸಿಲುಕುತ್ತಿದ್ದರೆ ಹದಿ ಹರೆಯದ ಯುವ ಸಮುದಾಯ ಮೋಜಿಗಾಗಿ ಮನೆಯಿಂದ ಹೊರಗಿದ್ದು ಸೋಂಕಿಗೆ ಸಿಲುಕುತ್ತಿದೆ. ಬಹಳಷ್ಟು ಮಂದಿ ಯುವಜನತೆ ಗುಂಪು ಗುಂಪಾಗಿ ಸೇರುವುದು, ಮೋಜು ಮಸ್ತಿಯಲ್ಲಿ ತೊಡಗುವುದನ್ನು ಈಗಲೂ ಬಿಟ್ಟಿಲ್ಲ.

 

ಕೊರೊನಾ ಯುವ ಸಮುದಾಯವನ್ನು ಕಾಡುವುದಿಲ್ಲ. ವಯಸ್ಸಾದವರನ್ನು ಬೇಗ ಆಕರ್ಷಿಸುತ್ತದೆ ಎಂಬ ಸಬೂಬುಗಳು ಸುಳ್ಳಾಗಿವೆ. ರಾಜ್ಯದಲ್ಲಿ ಯುವ ಜನಾಂಗವೇ ಹೆಚ್ಚಾಗಿ ಸೋಂಕಿಗೆ ಸಿಲುಕುತ್ತಿದೆ.ಇನ್ನೂ 50ರಿಂದ 59 ವರ್ಷದೊಳಗಿನ 1704 ಮಂದಿ ಅಂದರೆ ಶೇ.11ರಷ್ಟು, 69 ವರ್ಷದೊಳಗಿನ 1008 ಮಂದಿ ಸೋಂಕಿತರಿದ್ದಾರೆ. ಇನ್ನೂ ರಾಜ್ಯದಲ್ಲಿ ಸಂಭವಿಸಿರುವ 486 ಸಾವುಗಳಲ್ಲಿ ಬಹುತೇಕ 50 ವರ್ಷ ಮೇಲ್ಪಟ್ಟವರಿದ್ದಾರೆ. ಜೀವನ ಶೈಲಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸೋಂಕು ತಗುಲಿದರೆ ಚೇತರಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ.

 

ಯುವ ಸಮುದಾಯ ಸಾಮಾನ್ಯವಾಗಿ ಜೀವನ ಶೈಲಿ ಕಾಯಿಲೆಗಳಿಗೆ ತುತ್ತಾಗಿರುವುದಿಲ್ಲ. ಹಾಗಾಗಿ ಅವರಿಗೆ ಸೋಂಕು ತಗುಲಿದರೂ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗೆಂದು ಎಲ್ಲರೂ ಬದುಕುಳಿಯುತ್ತಾರೆ ಎಂದಲ್ಲ. ಇತ್ತೀಚೆಗೆ 18 ವರ್ಷದ ಹಲವಾರು ಮಂದಿ ಸೋಂಕಿಗೆ ಬಲಿಯಾಗಿದ್ದಾರ. ಯಾವುದಕ್ಕೂ ಎಲ್ಲರೂ ತಮ್ಮ ಎಚ್ಚರಿಕೆಯಲ್ಲಿ ತಾವಿರುವುದು ಸೂಕ್ತ. ಬೆಂಗಳೂರಿನಲ್ಲಿ ಮಳೆಗಾಲದ ಸಾಮಾನ್ಯ ಸೋಂಕು ಜನರನ್ನು ಬಾಧಿಸುತ್ತಿದೆ. ನೆಗಡಿ, ಶೀತ, ಗಂಟಲು ಕೆರೆತ ಸಾಮಾನ್ಯವಾಗಿವೆ. ಇದನ್ನು ಕೊರೊನಾ ಸೋಂಕು ಎಂದು ಆತಂಕಕ್ಕೆ ಒಳಗಾಗಿ ಜನ ಆಸ್ಪತ್ರೆಗಳತ್ತ ಧಾವಿಸುವುದು ಹೆಚ್ಚಾಗುತ್ತಿದೆ. ಸಾಮಾನ್ಯ ಶೀತ ಜ್ವರಗಳೆಲ್ಲ ಕೊರೊನಾ ಅಲ್ಲ. ಹಾಗೆ ಯಾವುದನ್ನು ನಿರ್ಲಕ್ಷ್ಯಸುವಂತ್ತಿಲ್ಲ ಎಂದು ವೈದ್ಯಾಧಿಕಾರಿಗಳು ಹೇಳುತ್ತಿದ್ದಾರೆ.

 

Find Out More:

Related Articles: