ಮೈತ್ರಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಸಿದ್ದರಾಮಯ್ಯ!
ಮೈತ್ರಿ ಸರ್ಕಾರದಲ್ಲಿ ಒಬ್ಬರನ್ನು
ಕಂಡರೆ
ಒಬ್ಬರಿಗೆ
ಆಗೋದಿಲ್ಲ
ಅನ್ನೋದು
ಮತ್ತೊಮ್ಮೆ
ಸಾಬೀತಾಗಿದೆ.
ಹೀಗಾಗಿಯೇ
ಮಾಜಿ
ಸಿಎಂ
ಸಿದ್ದರಾಮಯ್ಯ
ಇದೀಗ
ಸ್ಪೋಟಕ
ಮಾಹಿತಿಯನ್ನು
ಹೊರಹಾಕಿದ್ದಾರೆ.
ಮೈತ್ರಿ
ಸರಕಾರದಲ್ಲಿ
ಸಮನ್ವಯ
ಕೊರತೆ,
ಕೈ
ಪಡೆ
ಮುಖಂಡರ
ಬಹಿರಂಗ
ಕಚ್ಚಾಟ
ಇನ್ನೂ
ಮುಂದುವರೆದಿದೆ.
ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರಕಾರದ ವಿರುದ್ಧ ಬಹಿರಂಗವಾಗಿ ಗುಡುಗಿದ್ದಾರೆ. ಅವರ ಆಡಳಿತದ ದಿನಗಳನ್ನು ನೆನಪು ಮಾಡಿಕೊಂಡ ಅವರು, 'ನಾನು ನಾಡಿನ ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ವಿಷಯದ ಕುರಿತು ಸ್ಪಷ್ಟವಾದ ನಿಲುವು ಪ್ರಕಟ ಮಾಡುತ್ತಿದ್ದೆ. ಅದಕ್ಕೆ ಬೆಲೆಯೂ ಸಿಗುತ್ತಿತ್ತು' ಎಂದರು.
ಆದರೆ ಇದೀಗ ಮೈತ್ರಿ ಸರ್ಕಾರ ಇರುವುದರಿಂದ ನನ್ನ ಮಾತಿಗೆ ಬೆಲೆ ಇಲ್ಲದಂತಾಗಿದೆ. ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ನಾನಾಗಿದ್ದೇನೆ. ಆದರೆ ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ. ಈ ಹಿಂದೆ ನಾನು ಸಿಎಂ ಆಗಿದ್ದಾಗ ಹೊಸ ತಾಲೂಕುಗಳನ್ನು ಘೋಷಣೆ ಮಾಡಿದ್ದೆ. ಆದರೆ ಆ ತಾಲೂಕುಗಳಿಗೆ ಈವರೆಗೆ ಕಚೇರಿ, ತಹಸೀಲ್ದಾರ್ ಯಾರನ್ನೂ ನೇಮಕ ಮಾಡಿಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.