ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ 5.40ರ ವೇಳೆಗೆ ನಡೆಯಬಾರದ ಘಟನೆಯೊಂದು ನಡೆದಿದೆ. ಹೌದು, ದುಬೈನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್-308 ವಿಮಾನ ರನ್ವೇ ಬಿಟ್ಟು ಪಕ್ಕಕ್ಕೆ ಚಲಿಸಿದೆ, ಹೀಗಾಗಿ ವಿಮಾನದ ಗಾಲಿಗಳು ಮಣ್ಣಲ್ಲಿ ಸಿಲುಕಿದ್ದವು.
ಈ ವಿಮಾನದಲ್ಲಿ ಒಟ್ಟಾರೆಯಾಗಿ 183 ಪ್ರಯಾಣಿಕರು ಹಾಗೂ 6 ಜನ ಸಿಬ್ಬಂದಿ ಸೇರಿದಂತೆ ಒಟ್ಟಾರೆ 189 ಜನರಿದ್ದರು ಎಂದು ತಿಳದು ಬಂದಿದೆ. ಆದರೆ ರನ್ ವೇ ಬದಲಾದರೂ ಯಾರಿಗೂ ಏನೂ ಆಗಿಲ್ಲ. ಎಲ್ಲರನ್ನೂ ಸುರಕ್ಷಿತವಾಗಿ ವಿಮಾನ ನಿಲ್ದಾಣಕ್ಕೆ ಕರೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕಾರಣಕ್ಕೆ ಇದೀಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸುರಕ್ಷಿತ ಹಾರಾಟದ ಕುರಿತು ಪ್ರಯಾಣಿಕರಲ್ಲಿ ಭಾರೀ ಮೂಡಿದೆ. ಜೊತೆಗೆ ಈ ಕುರಿತು ಸಮಗ್ರ ತನಿಖೆ ನಡೆಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಅವರು ಅಗ್ರಹಿಸಿದ್ದಾರೆ.