
ಮೈತ್ರಿ ಸರ್ಕಾರಕ್ಕೆ ಯಡಿಯೂರಪ್ಪ ಹಾಕಿದ ಸವಾಲೇನು?
ಸರಕಾರ ನಡೆಸೋಕೆ ನಿಮಗೆ ಸಾಧ್ಯ ಆದರೆ ನಡೆಸಿ, ಇಲ್ಲದಿದ್ದರೆ ನಮಗೆ ಬಿಟ್ಟುಕೊಡಿ ನಾವು ಸರಕಾರವನ್ನು ಸರಿಯಾಗ ನಡೆಸುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸವಾಲು ಎಸೆದಿದ್ದಾರೆ.
ಹೌದು, ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಯಾವಾಗಲಾದರೂ ಚುನಾವಣೆ ನಡೆಯಬಹುದು. ಅದಕ್ಕೆ ಸಿದ್ಧರಾಗಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಹೇಳಿದ್ದಾನೆ. ಆದರೆ ನಾನು ಹೇಳುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆ ನಡೆಯಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಅಧಿಕಾರ ಮಾಡುವುದು ನಿಮ್ಮಿಂದ ಆದರೆ ಮಾಡಿ. ಇಲ್ಲದಿದ್ದರೆ ನಮಗೆ ಬಿಟ್ಟು ಕೊಡಿ ನಾವು ಸರ್ಕಾರ ನಡೆಸುತ್ತೇವೆ . ಯಾವುದೇ ಕಾರಣಕ್ಕೂ ಮತ್ತೆ ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ. ಜನರ ಬಳಿ ಹೋಗಲು ಇನ್ನೂ ನಾಲ್ಕು ವರ್ಷಗಳ ಕಾಲ ಬಾಕಿ ಇದೆ. ಆದರೆ ಈ ಸರ್ಕಾರ ಬಹಳ ದಿನ ಇರುತ್ತೆ ಅನ್ನೋ ವಿಶ್ವಾಸ ಯಾರಲ್ಲೂ ಇಲ್ಲ ಎಂದರು.
ಕೇಂದ್ರ ಸಂಪುಟದಲ್ಲಿ ಲಿಂಗಾಯತರಿಗೆ ಅವಕಾಶ ನೀಡಿರುವುದು ಪ್ರಧಾನಿ ಅವರಿಗೆ ಬಿಟ್ಟಿದ್ದು, ಇನ್ನು ಸುಮಲತಾ ಅವರನ್ನು ಬಿಜೆಪಿಗೆ ಸೇರುವಂತೆ ನಾವು ಯಾವತ್ತೂ ಸಂಪರ್ಕಿಸಿಲ್ಲ ಎಂದರು.