ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಮೇಲೆ ತೇಜಸ್ವಿ ಸೂರ್ಯ ಹೇಳಿದ್ದೇನು..?

Soma shekhar
ಪಕ್ಷದಲ್ಲಿ ಯುವಕರು ವೈಟಿಂಗ್ ಲಿಸ್ಟ್ ನಲ್ಲಿ ಇರಲು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುವುದಿಲ್ಲ ಎಂದು ಹೇಳಿರುವ ತೇಜಸ್ವಿ ಪಕ್ಷದ ಪೋಸ್ಟರ್ ಬಾಯ್ ಎಂದೇ ಗುರುತಿಸಿಕೊಂಡಿದ್ದಾರೆ. ಕರ್ನಾಟಕದಿಂದ ಇದೇ ಮೊಟ್ಟ ಮೊದಲ ಬಾರಿಗೆ ತೇಜಸ್ವಿ ಸೂರ್ಯ ಈ ಹುದ್ದೆ ಅಲಂಕರಿಸಿದ್ದಾರೆ. ಇದು ಎಲ್ಲಾ ಕನ್ನಡಿಗರ ಮತ್ತು ನನ್ನ ಕ್ಷೇತ್ರದ ಜನರ ಆಶೀರ್ವಾದ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.





ಇಂದಿನ ಯುವಕರು ನಾಳಿನ ನಾಯಕರಾಗುವುದು ಪ್ರದಾನಿ ಮೋದಿಗೆ ಇಷ್ಟವಿಲ್ಲ, ಇಂದಿನ ಯುವಕರು ಇಂದೇ ನಾಯಕರಾಗಬೇಕು ಎಂಬುದು ಮೋದಿ ಅಭಿಲಾಷೆಯಾಗಿದೆ. ಕಾಯುವ ಸಮಯ ಈಗ ಮುಗಿದಿದೆ, ಯುವಕರು ಇಂದೇ ನಾಯಕರಾಗಬೇಕು. ಈ ಹಿಂದೆ ರಾಜಕೀಯ ಹಿನ್ನೆಲೆ ಇಲ್ಲದ ಜನರಿಗೆ ಅವಕಾಶ ನೀಡಿದರೆ, ಕೆಲವು ಪಕ್ಷಗಳು ವಂಶವಾಹಿಯಾಗಿ ಅಧಿಕಾರ ನೀಡುತ್ತಿದ್ದವು ಎಂದು ಹೇಳಿದ್ದಾರೆ.







ದೇಶಾದ್ಯಂತ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವುದು ನನ್ನ ಪ್ರಮುಖ ಧ್ಯೇಯವಾಗಿದೆ.'ಅತ್ಯಂತ ಸಾಧಾರಣ ಮತ್ತು ಸಾಮಾನ್ಯ ಹಿನ್ನೆಲೆ, ಬಡ ಮತ್ತು ದುರ್ಬಲ ವಿಭಾಗಗಳಿಂದ ಬಂದವರನ್ನು ಗುರುತಿಸಿ, ದೇಶಾದ್ಯಂತ ನಾಯಕತ್ವದ ಸ್ಥಾನಗಳನ್ನು ಪಡೆಯಲು ಮತ್ತು ಸಂಘಟನೆಗೆ ಶಕ್ತಿ ನೀಡಲು ಅವರಿಗೆ ಸಹಾಯ ಮಾಡುವು ಉದ್ದೇಶ ಹೊಂದಿದ್ದಾರೆ.







ಭಾರತದ ಕೆಲವು ಭಾಗಗಳಲ್ಲಿ ಬಿಜೆಪಿ ನಗಣ್ಯ ಹೆಜ್ಜೆಗುರುತನ್ನು ಹೊಂದಿದೆ, ಇಂದು ಯುವ ನಾಯಕರಿಗೆ ಪ್ರಮುಖ ಸವಾಲಾಗಿದೆ. ಏಕೆಂದರೇ ನಾವು ಕಿರಿಯರು, ಆದರೆ ಪಕ್ಷ ವೇಗವಾಗಿ ಬೆಳೆಯುತ್ತಿದೆ. ಎಲ್ಲವನ್ನೂ ದೀನ್ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಮಾಡಿದ್ದರೆ, ವಾಜಪೇಯಿ ಮತ್ತು ಅಡ್ವಾಣಿ ಅವರಿಗೆ ಏನೂ ಮಾಡಲಾಗುತ್ತಿರಲಿಲ್ಲ, ಮತ್ತು ಅಡ್ವಾಣಿ ಮತ್ತು ವಾಜಪೇಯಿ ಅವರು ಎಲ್ಲವನ್ನು ಮಾಡಿದ್ದರೇ ಮೋದಿ ಮತ್ತು ಅಮಿತ್ ಶಾ ಅವರಿಗೆ ಏನೂ ಮಾಡಲು ಇರುತ್ತಿರಲಿಲ್ಲ, ಮೋದಿ ಮತ್ತು ಅಮಿತ್ ಶಾ ಅವರು ಎಲ್ಲವನ್ನು ಮಾಡಿದ್ದರೇ ನಮಗೆ ಏನು ಮಾಡಲು ಇರುತ್ತಿರಲಿಲ್ಲ, ನಾವು ತಲುಪದವರನ್ನು ತಲುಪಬೇಕು ಮತ್ತು ಜಯಿಸದವರನ್ನು ಜಯಿಸಬೇಕು ಎಂದು ತೇಜಸ್ವಿ ತಿಳಿಸಿದ್ದಾರೆ.






ಪಕ್ಷದ ಹಿರಿಯ ಮುಖಂಡರಾದ ಜಗನ್ನಾಥ ರಾವ್ ಜೋಶಿ ಮತ್ತು ಅನಂತ್ ಕುಮಾರ್ ಅವರ ಜೊತೆ ತೇಜಸ್ವಿ ಸೂರ್ ಅವರನ್ನು ಹೋಲಿಸಲಾಗುತ್ತಿದೆ, ಆದರೆ ಅವರಿಗೆ ತಮ್ಮನ್ನು ಹೋಲಿಸಲು ಸಾಧ್ಯವಿಲ್ಲ, ನಾನು ಪಕ್ಷದ ಸಣ್ಣ ಕಾರ್ಯಕರ್ತ, ನಾನು ಕಲಿಯುವುದು ಬೇಕಾದಷ್ಟಿದೆ, ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಪ್ರಮಖ ಭಾಷೆಯಾಗಿದೆ. ರಾಷ್ಟ್ರೀಯ ಭಾಷೆಗಳಲ್ಲಿ ಭಾಷಣ ಮಾಡುವುದನ್ನು ನಾನು ಕಲಿಯುತ್ತಿದ್ದೇನೆ, ನಾನು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲೆ ಈಗ ನಾನು ಭಾಷಣಗಳನ್ನು ಕಲಿಯುತ್ತಿದ್ದೇನೆ. ನಾನೊಬ್ಬ ಸಂಘಟನಾತ್ಮಕ ವ್ಯಕ್ತಿ, ನಾನು ತುಂಬಾ ಪ್ರತಿಭೆಯುಳ್ಳ ವ್ಯಕ್ತಿಯಲ್ಲ, ಪಕ್ಷ ಮತ್ತು ಸಂಘಟನೆಯಿಂದಾಗಿ ನಾನು ಇವತ್ತು ಇಲ್ಲಿದ್ದೇನೆ ಎಂದು ತೇಜಸ್ವಿ ಹೇಳಿದ್ದಾರೆ.

Find Out More:

Related Articles: