ಕೃಷಿ ಮಸೂದೆಯ ಬಗ್ಗೆ ಪ್ರಧಾನಿ ಮೋದಿ ನೀಡಿದ ಭರವಸೆಗಳೇನು..?

Soma shekhar
ಕೃಷಿ ಮಸೂದೆಗಳನ್ನು ಸಂಸತ್ ನ  ಎರಡು ಸದನಗಳಲ್ಲಿ ಅನುಮೋಧನೆ ದೊರೆಯುತ್ತಿದ್ದಂತೆ ಈ ಮಸೂದೆಯ ಕುರಿತಾಗಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿದೆ, ಈ ವಿಷಯದ ಕುರಿತು ವಿರೋಧ ಪಕ್ಷಗಳು ತಮ್ಮ ವಾಗ್ದಾಳಿಯನ್ನು ಮುಂದುವರಿಸಿದೆ, ಅದರಂತೆ ದೇಶದ ಅನೇಕ ಕಡೆಗಳಲ್ಲಿ ಈ ಮಸೂದೆಯ ವಿರುದ್ಧ ಹೋರಾಟಗಳೂ ಆರಂಭವಾಗಿದೆ. ಇವೆಲ್ಲಕ್ಕೂ ಉತ್ತರವನ್ನು ನೀಡುವುದಕ್ಕಾಗಿ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡುವುದರ ಮೂಲಕ ಈ  ಕೃಷಿ ಮಸೂದೆಯ ಬಗ್ಗೆ ರೈತರಿಗೆ ಭರವಸೆಯನ್ನು ನೀಡಿದ್ದಾರೆ.
ಹೌದು  ಕೃಷಿ ಬೆಳೆಗಳ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿ ರೈತರಿಗೆ ಭರವಸೆ ನೀಡಿದ್ದಾರೆ. ಕೃಷಿ ವಲಯದ ಸುಧಾರಣೆಗಳಿಗೆ ಸಂಬಂಧಿಸಿದ ಎರಡು ಮಹತ್ವದ ವಿಧೇಯಕಗಳು ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ರೈತರನ್ನು ಅಭಿನಂದಿಸಿದ್ದಾರೆ. ಅಲ್ಲದೆ, ಕನಿಷ್ಟ ಬೆಂಬಲ ಬೆಲೆ( ಎಂಎಸ್ಪಿ) ಹಾಗೂ ಕೃಷಿ ಉತ್ಪನ್ನಗಳ ಸರ್ಕಾರಿ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ರಾಜ್ಯಸಭೆಯಲ್ಲಿ, ಹಲವು ಪ್ರತಿ ಪಕ್ಷಗಳ ಅಡ್ಡಿ ಅಡಚಣೆಗಳ ನಡುವೆಯೂ, ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ವಿಧೇಯಕ, 2020. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ವಿಧೇಯಕ 2020 ಅಂಗೀಕಾರ ಕೊಂಡ ನಂತರ ಪ್ರಧಾನಿ ಮೋದಿ ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದಾರೆ.
'ವಿಧೇಯಕಗಳನ್ನು ವಿರೋಧಿಸುತ್ತಿರುವ ರೈತರಿಗೆ ಈಗಿರುವ ಕನಿಷ್ಟ ಬೆಂಬಲ ಬೆಲೆ ಹಾಗೂ ಕೃಷಿ ಉತ್ಪನ್ನಗಳ ಸರ್ಕಾರಿ ಖರೀದಿ ವ್ಯವಸ್ಥೆ ಮುಂದುವರಿಯಲಿದೆ ಎಂಬುದನ್ನು ಈ ಮೊದಲು ಹೇಳಿದ್ದೆ, ಈಗಲೂ ಅದಕ್ಕೆ ಬದ್ಧ ಎಂದು ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರ ರೈತರ ಸೇವೆಗಾಗಿ ಅಧಿಕಾರದಲ್ಲಿದೆ. ರೈತರ ಮುಂದಿನ ತಲೆಮಾರುಗಳಿಗೂ ಉತ್ತಮ ಬದುಕು ಖಾತರಿಪಡಿಸಲು, ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
'ಭಾರತೀಯ ಕೃಷಿ ರಂಗದ ಇತಿಹಾಸದಲ್ಲಿ ಇದೊಂದು ಮಹತ್ವದ ದಿನವಾಗಿದ್ದು, ಇದರಿಂದ ಕೃಷಿ ವಲಯ ಹಾಗೂ ಕೋಟ್ಯಾಂತರ ಮಂದಿ ರೈತರ ಬದುಕು ಸಂಪೂರ್ಣ ಬದಲಾವಣೆಯನ್ನು ಖಾತ್ರಿಪಡಿಸಲಿದೆ. ನಮ್ಮ ಅನ್ನದಾತರಿಗೆ ನೆರವಾಗಲು, ಅವರ ಮುಂದಿನ ತಲೆಮಾರುಗಳಿಗೆ ಉತ್ತಮ ಜೀವನ ಕಲ್ಪಿಸಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುವುದು. ಈ ವಿಧೇಯಕಗಳಿಂದ ಕೃಷಿ ಕ್ಷೇತ್ರದ ಶ್ರಮಜೀವಿ ರೈತರಿಗೆ ಸಹಾಯ ಮಾಡಲು ಸಾಧ್ಯವಾಗಲಿದೆ.

ಕೃಷಿ ವಲಯಕ್ಕೆ ಆಧುನಿಕ ತಂತ್ರಜ್ಞಾನ ಅಗತ್ಯವನ್ನು ಪೂರೈಸಿ. ರೈತರ ಭವಿಷ್ಯ ಹಸನುಗೊಳಿಸಲು ಪೂರಕವಾಗಲಿದೆ. ದಶಕಗಳಿಂದ, ಭಾರತೀಯ ರೈತ ಹಲವು ನಿರ್ಬಂಧಗಳಲ್ಲಿ ಬಂಧಿಯಾಗಿದ್ದಾನೆ. ಮಧ್ಯವರ್ತಿಗಳಿಂದ ಶೋಷಣೆಗೊಳಗಾಗಿದ್ದಾನೆ ಸಂಸತ್ತು ಅಂಗೀಕರಿಸಿರುವ ವಿಧೇಯಕಗಳು ರೈತರನ್ನು ಇಂತಹ ಸಂಕಷ್ಟಗಳಿಂದ ಮುಕ್ತಗೊಳಿಸಲಿವೆ, ರೈತರ ಆದಾಯ ದ್ವಿಗುಣಗೊಳಿಸುವ ಜೊತೆಗೆ ಸಮೃದ್ಧಿಯ ಬದುಕು ಖಾತ್ರಿಪಡಿಸಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Find Out More:

Related Articles: