ದೇಶದ ಎಷ್ಟು ಸಂಶೋಧನಾ ಸಂಸ್ಥೆಗಳು ಕೊರೋನಾಗೆ ಔಷಧಿಯನ್ನು ಸಂಶೋಧಿಸುತ್ತಿದೆ..?

Soma shekhar
ಕೊರೋನಾ ಔಷಧಿಗೆ ವಿಶ್ವದ ಅನೇಕ ರಾಷ್ಟ್ರಗಳು ಔಷಧಿಯನ್ನು ಸಂಶೋಧನೆಯನ್ನು ನಡೆಸುತ್ತಿದ್ದು, ಈಗಾಗಲೇ  ಸಾಕಷ್ಟು ದೇಶಗಳು ಇದರಲ್ಲಿ ಯಶಸ್ವಿಯೂ ಆಗಿದೆ, ಅದೇ ರೀತಿ ಭಾರತದಲ್ಲೂ ಕೂಡ ಸಾಕಷ್ಟು ಸಂಶೋಧನಾ ಸಂಸ್ಥೆಗಳು ಈ ಕೊರೋನಾಗೆ ಔಷಧಿಯನ್ನು ಸಂಶೋಧನೆಯನ್ನು ಮಾಡುತ್ತಿದ್ದು ದೇಶದಲ್ಲಿ ಕೊವಾಕ್ಸೀನ್ ಎಂಬ ಔಷಧಿಯನ್ನು ಸಂಶೋಧಿಸಿದ್ದು ಅದರ ಕ್ಲಿನಿಕಲ್ ಟೆಸ್ಟ್  ಕೂಡ ನಡೆಯುತ್ತಿದೆ, ಇದರ ಜೊತೆಗೆ ಇನ್ನೂ ಹಲವು ಸಂಶೋಧನಾ ಸಂಸ್ಥೆಗಳು ಔಷಧಿಯನ್ನು ಸಂಶೋಧನೆಯನ್ನು ಮಾಡಿದ್ದು ಕ್ಲಿನಿಕಲ್ ಟೆಸ್ಟ್ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ ಅನುಮತಿಯನ್ನು ಪಡೆದುಕೊಂಡಿವೆ.



ಹೌದು ಪ್ರಮುಖ ಬೆಳವಣಿಗೆಯಲ್ಲಿ ಕೊರೋನಾ ಸೋಂಕಿಗೆ ಔಷಧಿ ಕಂಡುಹಿಡಿಯುವ ಸಂಸ್ಥೆಗಳ ರೇಸ್ ನಲ್ಲಿ ಪ್ರಮುಖ ಸ್ಥಾನದಲ್ಲಿರುವ ದೇಶದ ಏಳು ಸಂಸ್ಥೆಗಳಿಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ (CDSCO) ಪರವಾನಗಿ ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಕೊರೋನಾ ಸೋಂಕಿಗೆ ಔಷಧಿ ಕಂಡು ಹಿಡಿಯುತ್ತಿರುವ ದೇಶದ 7 ಪ್ರಮುಖ ಸಂಸ್ಥೆಗಳ ಔಷಧಿಗಳ ಕ್ಲಿನಕಲ್ ಪ್ರಯೋಗಕ್ಕೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ ಪರವಾನಗಿ ನೀಡಿದೆ. ಈ ಬಗ್ಗೆ ಲೋಕಸಭೆಗೆ ಲಿಖಿತ ಹೇಳಿಕೆ ನೀಡಿರುವ ಆರೋಗ್ಯ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು, ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ ಭಾರತದ ಏಳು ಔಷಧ ತಯಾರಕಾ ಸಂಸ್ಥೆಗಳಿಗೆ ಪೂರ್ವಭಾವಿ ಪರೀಕ್ಷೆ, ಪರೀಕ್ಷೆ ಮತ್ತು ವಿಶ್ಲೇಷಣೆಗಾಗಿ ಕೋವಿಡ್ ಲಸಿಕೆ ತಯಾರಿಸಲು ಪರೀಕ್ಷಾ ಪರವಾನಗಿ ಅನುಮತಿ ನೀಡಿದೆ. 





ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ ನೀಡಿರುವ ಮಾರ್ಗದರ್ಶಿ ಸೂತ್ರಗಳ ಅನ್ವಯ ಮತ್ತು ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮಗಳು, 2019ರ ಅಡಿಯಲ್ಲಿನ ನಿಯಮಗಳ ಪ್ರಕಾರವೇ ಔಷಧಿಗಳ ಪರೀಕ್ಷೆ ನಡೆಯಲಿದ್ದು, ಈ ಕುರಿತಂತೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.



SARS-CoV-2ಗೆ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಲಿಮಿಟೆಡ್ ಲಸಿಕೆ ಸಂಶೋಧನೆ ನಡೆಸುತ್ತಿದ್ದು, ಈ ಲಸಿಕೆಯ ಪ್ರಯೋಗ ಪುಣೆಯಲ್ಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಕೇಂದ್ರದಲ್ಲಿ ಐಸಿಎಂಆರ್ ಅಡಿಯಲ್ಲಿ ನಡೆಯುತ್ತಿದೆ. ಲಸಿಕೆಯ ಗುಣಲಕ್ಷಣವನ್ನು ಇಲಿಗಳು ಮತ್ತು ಮೊಲಗಳಂತಹ ಸಣ್ಣ ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿ, ಸುರಕ್ಷತೆ ಮತ್ತು ಸಹಿಷ್ಣುತೆ ಇತ್ಯಾದಿ ಅಂಶಗಳ ಕುರಿತು ಸಂಶೋಧನೆ ನಡೆಸಲಾಗುತ್ತದೆ. ಈಗಾಗಲೇ ಈ ಲಸಿಕೆಯ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಕೂಡ ನಡೆಯುತ್ತಿವೆ ಎಂದು ಹೇಳಲಾಗಿದೆ.




ಮತ್ತೊಂದು ಡಿಎನ್‌ಎಸ್ ಲಸಿಕೆಯನ್ನು ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಸಂಸ್ಥೆ ಸಂಶೋಧನೆ ನಡೆಸುತ್ತಿದ್ದು, ಸಣ್ಣ ಪ್ರಾಣಿಗಳ ಮೇಲೆ ಪೂರ್ವ-ಕ್ಲಿನಿಕಲ್ ಪ್ರಯೋಗ ನಡೆಸಲಾಯಿತು. ಈ ವೇಳೆ ಲಸಿಕೆ ಸುರಕ್ಷಿತ ಮತ್ತು ಇಮ್ಯುನೊಜೆನಿಕ್, ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಈ ಲಸಿಕೆಯ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಇದಲ್ಲದೆ ಭಾರತ್ ಬಯೋಟೆಕ್‌, ಬಯಲಾಜಿಕಲ್‌ ಇ, ರಿಲಯನ್ಸ್ ಲೈಫ್‌, ಅರಬಿಂದೋ ಫಾರ್ಮ ಮತ್ತು ಜೆನೋವಾ ಸಂಸ್ಥೆಗಳ ಲಸಿಕೆ ತಯಾರಿಕೆ ಮತ್ತು ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.




ಇದಲ್ಲದೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಐಸಿಎಂಆರ್ ಸಹಭಾಗಿತ್ವದಲ್ಲಿ ಎರಡು ಜಾಗತಿಕ ಔಷಧಿ ತಯಾರಿಕಾ ಸಂಸ್ಥೆಗಳು ಲಸಿಕೆ ಪ್ರಯೋಗದಲ್ಲಿ ತೊಡಗಿದ್ದು, ದೇಶದಲ್ಲಿ ಪ್ರಸ್ತುತ 30ಕ್ಕತೂ ಹೆಚ್ಚು ಲಸಿಕೆ ತಯಾರಿಕಾ ಸಂಸ್ಥೆಗಳು ಕೋವಿಡ್ ಲಸಿಕೆ ತಯಾರಿಕೆಯಲ್ಲಿ ತೊಡಗಿವೆ.

Find Out More:

Related Articles: