ನಾನು ಪಕ್ಕದ ಮನೆಯ ಆಂಟಿಯಂತೆ ಕಾಣುತ್ತೇನೆ ಎಂದು ನಿರ್ಮಲಾ ಸೀತಾರಾಮ್ ಹೇಳಿದ್ದೇಕೆ..?

Soma shekhar
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ದೇವರ ಆಟ ಎಂಬ ಹೇಳಿಕೆಯೊಂದನ್ನು ನೀಡಿದ್ದರು. ಈ  ಹೇಳಿಕೆಯನ್ನು  ವಿರೋಧ ಪಕ್ಷದವರು  ಸಕತ್ ವೈರಲ್ ಮಾಡಿದ್ದರು. ಇದರಿಂದಾಗಿ ನಿರ್ಮಲಾ ಅವರ ಈ ಹೇಳಿಕೆಗೆ ದೇಶದಾಧ್ಯಂತ ಸಾಕಷ್ಟು ವಿರೋಧ ಅಭಿಪ್ರಾಯಗಳೂ ಕೂಡ ವ್ಯಕ್ತವಾಗಿತ್ತು. ವಿರೋಧ ಪಕ್ಷದವರ ವರ್ತನೆಯಿಂದ ನೊಂದು ಇದಕ್ಕೆ ಪ್ರತಿಕ್ರಿಹಿಸಿರುವ ನಿರ್ಮಲಾ ಸೀತಾರಾಮ್ ಏನು ಹೇಳಿದ್ದಾರೆ ಗೊತ್ತಾ..?
ಒಬ್ಬ ಸರಳ ಹಣಕಾಸು ಸಚಿವೆ 'ಇದು ದೇವರ ಆಟ'ಎಂದು ಹೇಳಿದ ಮಾತುಗಳನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಅದೇ 'ಫೋರ್ಸ್ ಮಜೂರ್'ಎಂಬ ಶಬ್ದವನ್ನು ಚೆನ್ನಾಗಿ ಸ್ವೀಕರಿಸಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಗಳನ್ನು ಪ್ರತಿಪಕ್ಷದವರು ಸೇರಿದಂತೆ ಹಲವರು ಟೀಕಿಸಿದರು ಏಕೆಂದರೆ ನಾನು ನೋಡಲು ಸರಳವಾಗಿ ಪಕ್ಕದ ಮನೆಯ ಆಂಟಿಯಂತೆ ಕಾಣುತ್ತೇನೆ, ಆದರೆ ಅಂದು ನಾನು ಆಡಿರುವ ಮಾತುಗಳನ್ನು ತಿರುಚಿದ್ದು ನೋಡಿದರೆ ವಿರೋಧ ಪಕ್ಷದವರ ಬೇಜವಾಬ್ದಾರಿ ವರ್ತನೆ ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಆಗಸ್ಟ್ 27ರಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್, ಕೋವಿಡ್-19 ಸಾಂಕ್ರಾಮಿಕದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟು ಹೋಗಿದೆ. ಇದೆಲ್ಲ ದೇವರ ಆಟ, ಹಣಕಾಸಿನ ಮೇಲೆ ಇದು ಪರಿಣಾಮವನ್ನುಂಟುಮಾಡಿದೆ ಎಂದಿದ್ದರು. ಅವರು ಇಷ್ಟು ಹೇಳಿದ್ದೇ ತಡ, ದೇಶಾದ್ಯಂತ ಹಲವರು ಇದಕ್ಕೆ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.

ಅನೇಕ ಜನರು ಜಿಎಸ್ಟಿ ಪರಿಹಾರದ ವಿಷಯದಲ್ಲಿ ಮಾತನಾಡಿದರು, ನನ್ನ ದೇವರ ಆಟ ಹೇಳಿಕೆಯನ್ನು ಹಲವಾರು ಬಾರಿ ಹಲವು ರೀತಿಯಲ್ಲಿ ಉಲ್ಲೇಖಿಸಿದ್ದಾರೆ. ಅದಕ್ಕಾಗಿ ನನಗೆ ಸಂತೋಷವಾಗಿದೆ. ಅಸಾಮಾನ್ಯ ಪರಿಸ್ಥಿತಿಯನ್ನು ವ್ಯಕ್ತಪಡಿಸಲು ಜನರು ಮಜೂರ್ ಎಂಬ ಲ್ಯಾಟಿನ್ ಅಭಿವ್ಯಕ್ತಿಯನ್ನು ಬಳಸಲು ಇಷ್ಟಪಡುತ್ತಾರೆ. ಆದರೆ ಸರಳ ಮಹಿಳಾ ಹಣಕಾಸು ಸಚಿವೆಯಾದ ನಾನು ದೇವರ ಆಟ ಎಂದು ಹೇಳಿದೆ, ಅದನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಏನ್ಸಾರ್ ಇದು ಎಂದು ಲೋಕಸಭಾಧ್ಯಕ್ಷರನ್ನು ಪ್ರಶ್ನಿಸಿದರು.

ಕಕ್ಷಿದಾರರಿಗೆ ಕೋರ್ಟ್ ನಲ್ಲಿ ಬಲವಂತದ ಮಜೂರ್ ಹೇಳಿಕೆ ಹೊಂದಿಕೆಯಾಗುತ್ತದೆ, ಆದರೆ ದೇವರ ಆಟ ಆಗುವುದಿಲ್ಲ, ಯಾಕೆಂದರೆ ನಾನು ಹಣಕಾಸು ಸಚಿವೆ ಪಕ್ಕದ ಮನೆ ಆಂಟಿ ಥರ ಕಾಣುತ್ತೇನೆ ಅಲ್ಲವೇ ಎಂದು ನಿರ್ಮಲಾ ಸೀತಾರಾಮನ್ ಬೇಸರದಿಂದ ಹೇಳಿದರು.

Find Out More:

Related Articles: