ಕೇಂದ್ರ ಸರ್ಕಾರ ಪರೀಕ್ಷೆಗೆ ಅನುಮೋದಿಸಿದ ಕೊರೋನಾ ಲಸಿಕೆಗಳೆಷ್ಟು..?

Soma shekhar
ಕೊರೋನಾ ವೈರಸ್ ಗೆ ಇಡೀ ವಿಶ್ವದಾಧ್ಯಂತ ಎಲ್ಲಾ ದೇಶಗಳಲ್ಲೂ ಕೂಡ ಔಷಧಿಯನ್ನು ಸಂಶೋಧಿಸಲಾಗುತ್ತಿದೆ . ಈಗಾಗಲೇ ಸಾಕಷ್ಟು ದೇಶದಲ್ಲಿ ಕೊರೋನ  ಔಷಧಿಯನ್ನು ಸಂಶೋಧಿಸಲಾಗಿದ್ದು ಮಾರುಕಟ್ಟೆಗೆ ತರಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ, ಅದೇ ರೀತಿ ಭಾರತವೂ ಕೂಡ ಕೊರೋನಾಗೆ ಔಷಧಿಯನ್ನು ಸಂಶೋಧಿಸಲಾಗಿದೆ. ಸಂಶೋಧಿಸಿದ ಈ ಔಷಧಿಯನ್ನು ಪರೀಕ್ಷೆಗೆ ಒಳಪಡಿಸುವ ಸಲುವಾಗಿ ಕೇಂದ್ರ ಸರ್ಕಾರದ ಅನುಮೋದನೆಯನ್ನೂ ಕೂಡ ನೀಡಿದೆ.  


 

 

ಹೌದು ಕೋವಿಡ್ ವೈರಸ್‌ ನಿಗ್ರಹಕ್ಕಾಗಿ ರೂಪಿಸಲಾಗಿರುವ ಸುಮಾರು 30 ಲಸಿಕೆಗಳ ನಮೂನೆಗಳನ್ನು ಭಾರತದಲ್ಲಿ ಪರೀಕ್ಷೆಗೊಳಪಡಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಆ ಎಲ್ಲಾ ನಮೂನೆಗಳ ಪರೀಕ್ಷೆ ಭಾರತದಲ್ಲಿ ಆರಂಭವಾಗಿದ್ದು, ಅವುಗಳಲ್ಲಿ ಮೂರು ನಮೂನೆಗಳ ಪರೀಕ್ಷೆ ತೃತೀಯ ಹಂತಕ್ಕೆ ಕಾಲಿಟ್ಟಿದೆ. ನಾಲ್ಕು ನಮೂನೆಗಳು “ಅಡ್ವಾನ್ಸ್ ಪ್ರೀ-ಕ್ಲಿನಿಕಲ್‌ ಮತ್ತು ಡೆವಲಪ್‌ಮೆಂಟ್‌’ ಹಂತದಲ್ಲಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ನಿತ್ಯಾನಂದ ರಾಯ್‌, “”ಲಸಿಕೆಗಳ ಜೊತೆಗೆ ಈಗಾಗಲೇ ಜ್ವರ, ಶೀತದಂಥ ಕಾಯಿಲೆಗಳಿಗೆ ಬಳಸಲಾಗುವ 13 ಔಷಧಿಗಳನ್ನು ಕೋವಿಡ್ ವಿರುದ್ಧದ ಚಿಕಿತ್ಸೆಗೆ ಬಳಸಲು (ರಿ-ಪರ್ಪಸ್ಡ್) ಅನುಮತಿ ನೀಡಲಾಗಿದೆ. ಈ ಮೂಲಕ, ಕೊರೊನಾಕ್ಕೆ ಪರಿಣಾಮಕಾರಿ ಚಿಕಿತ್ಸೆಯೊಂದನ್ನು ರೂಪಿಸಲು ಪ್ರಯತ್ನಿಸಲಾಗಿದೆ. ಇದೆಲ್ಲದರ ಮೇಲೆ ನಿಗಾ ವಹಿಸಲು ಹಾಗೂ ಸೂಕ್ತ ಮಾರ್ಗದರ್ಶನವನ್ನು ನೀಡಲು ಆ. 7ರಂದು ಕೇಂದ್ರ ಸರಕಾರ ರಾಷ್ಟ್ರಮಟ್ಟದ ಲಸಿಕೆ ತಜ್ಞರ ಸಮಿತಿಯೊಂದನ್ನೂ ರಚಿಸಿದೆ’ ಎಂದರು.
ರಷ್ಯಾದಲ್ಲಿ ಸಿದ್ಧವಾಗಿರುವ ಸ್ನುಟ್ನಿಕ್‌ ಕೊರೊನಾ ಲಸಿಕೆಯ ಅಂತಿಮ ಹಂತದ ಪರೀಕ್ಷೆಯನ್ನು ಭಾರತದಲ್ಲಿ ನಡೆಸುವ ಒಪ್ಪಂದಕ್ಕೆ ಹೈದರಾಬಾದ್‌ ಮೂಲದ ಔಷಧ ತಯಾರಿಕಾ ಸಂಸ್ಥೆಯಾದ ಡಾ. ರೆಡ್ಡಿ ಲ್ಯಾಬೊರೇಟರೀಸ್‌ ಸಹಿ ಹಾಕಿದೆ. ಈ ಒಪ್ಪಂದ ಜಾರಿಗಾಗಿ ಕೇಂದ್ರ ಸರಕಾರದ ಅನುಮತಿ ಕೋರಲಾಗಿದ್ದು, “”ಅನುಮತಿ ಸಿಕ್ಕಕೂಡಲೇ ಡಾ. ರೆಡ್ಡಿ ಕಂಪನಿಯಿಂದ ಸಾಮೂಹಿಕ ಪರೀಕ್ಷೆ ಪರಿಕಲ್ಪನೆಯಡಿ 10 ಕೋಟಿ ಜನರ ಮೇಲೆ ಇದನ್ನು ಪ್ರಯೋಗಿಸಲಾಗುತ್ತದೆ” ಎಂದು ಮೂಲಗಳು ತಿಳಿಸಿವೆ. 

50 ಲಕ್ಷ ಮೀರಿದ ಪ್ರಕರಣ: ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಈಗ 50 ಲಕ್ಷ ದಾಟಿದೆ. ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 90,123 ಹೊಸ ಪ್ರಕರಣಗಳು ದೃಢಪಟ್ಟಿವೆ ಮತ್ತು 1,290 ಮಂದಿ ಅಸುನೀಗಿದ್ದಾರೆ. ದಿನಗಳಲ್ಲಿ 50 ಲಕ್ಷ ಸೋಂಕು ಪ್ರಕರಣ ದೃಢಪಟ್ಟಿರುವುದು ಗಮನಾರ್ಹವಾಗಿದೆ.

Find Out More:

Related Articles: