ಕೊರೋನಾದಿಂದ ವಿಮಾನಯಾನ ಸಂಸ್ಥೆಗಾದ ನಷ್ಟ ಎಷ್ಟು ಗೊತ್ತಾ..?

Soma shekhar
ಕೊರೋನಾ ವೈರಸ್ ಇಂದಾಗಿ ದೇಶದಲ್ಲಿ ನಡೆಯುತ್ತಿದ್ದಂತಹ ಎಲ್ಲಾ ಉದ್ದಿಮೆಗಳು ತನ್ನ ಅಸ್ತಿತ್ವವನ್ನು ಕಳೆದುಕೊಂಡು ಬಾಗಿಲೆಳೆದುಕೊಂಡಿತು, ಇದರಿಂದಾಗಿ ಅನೇಕ ಕಾರ್ಮಿಕರು ಬೀದಿಗೆ ಬಿದ್ದರು, ಇದರಿಂದ ದೇಶದ ಆರ್ಥಿಕ ಸ್ಥಿತಿ ಪಾತಾಳ ಸೇರಿತು. ಇದರಿಂದ ಅನೇಕರು ಉದ್ಯೋಗ ಕಳೆದುಕೊಂಡು ನಿರ್ಗತಿಕರಾದರು, ಅಬ್ಬಾ ಒಂದಾ ಎರಡ ಕೊರೋನಾ ಸೃಷ್ಠಿಸಿದ ಅವಾಂತರ ಈ ಎಲ್ಲಾ ನಷ್ಟಗಳ ಜೊತೆಗೆ ವಿಮಾನಯಾನ ಸಂಸ್ಥೆಯಲ್ಲೂ ಕೂಡ ಬಾರಿ ಪ್ರಮಾಣದ ನಷ್ಟವಾಗಿದೆಹೌದು ಕೊರೋನ ಸೋಂಕಿನ ಕಾರಣದಿಂದ 2020-21ರ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಭಾರತದ ವಿಮಾನಯಾನ ಸಂಸ್ಥೆಗಳ ಆದಾಯದಲ್ಲಿ 85.7ರಷ್ಟು % ಕುಸಿತವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ಸಿಂಗ್ ಪುರಿ ಹೇಳಿದ್ದಾರೆ.ಭಾರತದ ವಿಮಾನಯಾನ ಸಂಸ್ಥೆಗಳು 2019ರ ಎಪ್ರಿಲ್-ಜೂನ್ ಅವಧಿಯಲ್ಲಿ 25,517 ಕೋಟಿ ಆದಾಯ ದಾಖಲಿಸಿದ್ದರೆ, 2020ರ ಎಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಆದಾಯ 3,651 ಕೋಟಿ ರೂ.ಗೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು 85.7% ಕಡಿಮೆಯಾಗಿದೆ ಎಂದು ಸಚಿವ ಸಿಂಗ್ ರಾಜ್ಯಸಭೆಯಲ್ಲಿ ಲಿಖಿತ ಉತ್ತರದ ಮೂಲಕ ತಿಳಿಸಿದರು.ಭಾರತದ ವಿಮಾನಯಾನ ಸಂಸ್ಥೆಗಳ ಉದ್ಯೋಗಿಗಳ ಸಂಖ್ಯೆಯಲ್ಲೂ 7.07% ಇಳಿಕೆಯಾಗಿದ್ದು ಈ ವರ್ಷದ ಮಾರ್ಚ್ 31ರಂದು ಒಟ್ಟು 74,887 ಉದ್ಯೋಗಿಗಳಿದ್ದರೆ ಜುಲೈ 31ಕ್ಕೆ ಇದು 69,589ಕ್ಕೆ ಕುಸಿದಿದೆ. ಜೊತೆಗೆ, ವಿಮಾನನಿಲ್ದಾಣ ನಿರ್ವಾಹಕರ ಆದಾಯದಲ್ಲೂ ಇಳಿಕೆಯಾಗಿದ್ದು 2019ರ ಎಪ್ರಿಲ್-ಜೂನ್ ಅವಧಿಯಲ್ಲಿ 5,745 ಕೋಟಿ ರೂ. ಇದ್ದ ಆದಾಯ 2020ರ ಎಪ್ರಿಲ್-ಜೂನ್‌ನಲ್ಲಿ 894 ಕೋಟಿ ರೂ.ಗೆ ಇಳಿದಿದೆ. ವಿಮಾನ ನಿಲ್ದಾಣಗಳಲ್ಲಿನ ಉದ್ಯೋಗಿಗಳ ಸಂಖ್ಯೆಯೂ ಕಡಿಮೆಯಾಗಿದ್ದು ಮಾರ್ಚ್ 31ಕ್ಕೆ 67,760 ಉದ್ಯೋಗಿಗಳಿದ್ದರೆ ಜುಲೈ 31ಕ್ಕೆ ಇದು 64,514ಕ್ಕೆ ಇಳಿದಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ದೇಶದಲ್ಲಿ ವಿಮಾನಸೇವೆಯನ್ನು ಮಾರ್ಚ್ 25ರಿಂದ ಮೇ 24ರವರೆಗೆ ಸ್ಥಗಿತಗೊಳಿಸಿರುವುದು ಆದಾಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
2019ರ ಎಪ್ರಿಲ್-ಜೂನ್ ಅವಧಿಯಲ್ಲಿ ಏರ್‌ಇಂಡಿಯಾದ ಒಟ್ಟು ಆದಾಯ 7,066 ಕೋಟಿ ರೂ. ಆಗಿತ್ತು. 2020ರ ಎಪ್ರಿಲ್-ಜೂನ್ ಅವಧಿಯಲ್ಲಿ ಇದು 1,531 ಕೋಟಿ ರೂ.ಗೆ ಇಳಿಕೆಯಾಗಿದೆ. 2019-20ರ ಅವಧಿಯಲ್ಲಿ ದೇಶದಲ್ಲಿ 5.85 ಕೋಟಿ ದೇಶೀಯ ವಾಯುಸಂಚಾರದ ಪ್ರಮಾಣ 5.85 ಕೋಟಿಯಿದ್ದರೆ 2020ರ ಎಪ್ರಿಲ್-ಜೂನ್ ಅವಧಿಯಲ್ಲಿ ಇದು 1.2 ಕೋಟಿಗೆ ಇಳಿದಿದೆ. ಇದೇ ಅವಧಿಯಲ್ಲಿ ಅಂತರಾಷ್ಟ್ರೀಯ ವಾಯುಸಂಚಾರದ ಪ್ರಮಾಣವೂ ಕುಸಿದಿದೆ (2019ರಲ್ಲಿ 93.45 ಲಕ್ಷ, 2020ರಲ್ಲಿ 11.55 ಲಕ್ಷ) ಎಂದವರು ವಿವರಿಸಿದ್ದಾರೆ.

Find Out More:

Related Articles: