ಬಡತನ ನಿರ್ಮೂಲನೆಗೆ ಪ್ರಧಾನಿ ಮೋದಿಯ ಯೋಜನೆ ಏನು..?

Soma shekhar
ಬಡತನ ನಿರ್ಮೂಲನೆಗಾಗಿ ಬಡವರನ್ನು ಬಲಪಡಿಸುವುದು ಅಗತ್ಯವಾಗಿದೆ  'ಬಡವರ ಸಬಲೀಕರಣವೇ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಗುರಿ' ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮೋದಿ ಅವರು ಯೋಜನೆಯ ಕೆಲವು ಫಲಾನುಭವಿಗಳೊಂದಿಗೆ ಆನ್‌ಲೈನ್‌ ಮೂಲಕ ಸಂವಹನ ನಡೆಸಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ(ಪಿಎಂಎವೈ) ಮಧ್ಯಪ್ರದೇಶದಲ್ಲಿ ನಿರ್ಮಿಸಲಾದ 1.75 ಲಕ್ಷ ಮನೆಗಳ ಗೃಹಪ್ರವೇಶ ಕಾರ್ಯಕ್ರಮದ ವೇಳೆ ಆನ್‌ಲೈನ್‌ ಮೂಲಕ ಮೋದಿ ಮಾತನಾಡಿದರು.
ಲಾಕ್‌ಡೌನ್‌ ಅವಧಿಯಲ್ಲಿ 18 ಲಕ್ಷ ಮನೆ ನಿರ್ಮಾಣ: 'ಪಿಎಂಎವೈಯಡಿ ಒಂದು ಮನೆ ನಿರ್ಮಾಣಕ್ಕೆ ಸರಾಸರಿ 125 ದಿನಗಳು ಬೇಕಾಗಿದ್ದವು. ಆದರೆ, ಲಾಕ್‌ಡೌನ್‌ ಸಂದರ್ಭದಲ್ಲಿ ಒಂದು ಮನೆ ನಿರ್ಮಾಣದ ಅವಧಿ 45-60 ದಿನಗಳಿಗೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ಒಟ್ಟು 18 ಲಕ್ಷ ಮನೆ ನಿರ್ಮಾಣವಾಗಿದೆ. ಇದೊಂದು ದಾಖಲೆ ' ಎಂದು ಮೋದಿ ಹೇಳಿದರು.

'ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದರು. ಇವರು ಪಿಎಂಎವೈ ಕೆಲಸಕ್ಕೆ ಕೈಜೋಡಿಸಿದರು ಹಾಗೂ ಗರೀಬ್‌ ಕಲ್ಯಾಣ ರೋಜ್‌ಗಾರ್‌ ಅಭಿಯಾನದಡಿ ಉದ್ಯೋಗದ ಲಾಭವನ್ನೂ ಪಡೆದರು. ಇದು ಗ್ರಾಮೀಣ ಭಾಗದ ಆರ್ಥಿಕತೆ ವೃದ್ಧಿಯಾಗಲೂ ಸಹಕಾರಿಯಾಯಿತು' ಎಂದರು.


 

 

ಗುಣಮಟ್ಟದ ಕೊರತೆ'ಸ್ವಾತಂತ್ರ್ಯ ಬಂದ ನಂತರ ಬಡವರಿಗೆ ಸೂರು ಒದಗಿಸುವ ಹಲವು ಯೋಜನೆಗಳು ಬಂದಿದ್ದವು. ಇವುಗಳಿಗೂ ಪಿಎಂಎವೈಗೂ ವ್ಯತ್ಯಾಸವೇನು ಎಂದು ಹಲವರು ಕೇಳುತ್ತಿದ್ದರು. ಹಿಂದಿನ ಯಾವುದೇ ಯೋಜನೆಗಳಲ್ಲಿ ನಿಗದಿತ ಗುರಿಯನ್ನು ಮುಟ್ಟಲು ಆಗಿರಲಿಲ್ಲ. ಹಳೆಯ ಯೋಜನೆಗಳು ದೆಹಲಿ ಕೇಂದ್ರೀಕೃತವಾಗಿರುತ್ತಿದ್ದವು ಹಾಗೂ ಪಾರದರ್ಶಕತೆ ಇರುತ್ತಿರಲಿಲ್ಲ. ಈ ಪ್ರಕ್ರಿಯೆಯಲ್ಲಿ ಫಲಾನುಭವಿಗಳು ಭಾಗಿಯಾಗಲು ಅವಕಾಶವಿರಲಿಲ್ಲ. ಮನೆಯೂ ಕಳಪೆಯಾಗಿದ್ದ ಕಾರಣ ಜನರೂ ಅಂಥ ಮನೆಗಳಿಗೆ ಹೋಗುತ್ತಿರಲಿಲ್ಲ. ಪಿಎಂಎವೈ ಯೋಜನೆಯಡಿ ಪಾರದರ್ಶಕತೆಗೆ ಒತ್ತು ನೀಡಲಾಗಿದ್ದು, ಸರ್ಕಾರವೇ ಬಡವರ ಬಳಿಗೆ ಹೋಗುತ್ತಿದೆ' ಎಂದು ಮೋದಿ ಹೇಳಿದರು.'ಕೋವಿಡ್‌: ನಿರ್ಲಕ್ಷ್ಯ ಬೇಡ'


'ಕೋವಿಡ್‌ಗೆ ಮದ್ದು ಕಂಡುಹಿಡಿಯುವ ತನಕ, ಕೋವಿಡ್‌ ಸೋಂಕಿನ ಕುರಿತು ನಿರ್ಲಕ್ಷ್ಯ ತೋರಿಸಬೇಡಿ' ಮುನ್ನೆಚ್ಚರಿಕಾ ಕ್ರಮಗಳನ್ನು ಜನರು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಸಿದ ಅವರು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಹಾಗೂ ಮುಖಗವಸು ಧರಿಸುವುದು ಅಗತ್ಯವಾಗಿದೆ ಎಂದು ಜನರಿಗೆ ಮೋದಿ ಕಿವಿಮಾತು ಹೇಳಿದರು.


Find Out More:

Related Articles: