ಈ ಒಂದು ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಕೋರ್ಟ್ ವಿಧಿಸಿದ ದಂಡ ಎಷ್ಟು ಗೊತ್ತಾ..?

Soma shekhar
ಪ್ರತಿಯೊಬ್ಬರೂ ಕಾನೂನಿಗೆ ತಲೆ ಬಾಗಲೇ ಬೇಕು. ಜೊತಗೆ ಕಾನೂನನ್ನು ಪಾಲಿಸುವಂತಹ  ನ್ಯಾಯಾಂಗವನ್ನು  ನಿಂದಿಸುವಂತಹ ಯಾವುದೇ ಕೆಲಸಗಳು ಮಾಡುವಂತಿಲ್ಲ, ಅಕಸ್ಮಾತ್ ನಡೆದದ್ದೇ ಆದರೆ ನ್ಯಾಯಾಂಗ ನಿಂದನೆ ಮಾಡಿದವರ ಮೇಲೆ ಬಾರೀ ಪ್ರಮಾಣದ ದಂಡವನ್ನು ಹಾಕಲಾಗುತ್ತದೆ. ತಪ್ಪಿದ್ದಲ್ಲಿ ಸೆರೆವಾಸವನ್ನೂ ಕೂಡ ಅನುಭವಿಸಬೇಕಾಗುತ್ತದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ನ್ಯಾಯಾಂಗ ನಿಂಧನೆ ಯಾಗಿದೆ  ಆದರೆ  ನ್ಯಾಯಾಂಗ ಇವರಿಗೆ ವಿಧಿಸಿರುವ ದಂಡ ಅಲ್ಪಪ್ರಮಾಣದ್ದು.  ಅಷ್ಟಕ್ಕೂ ಆ ದಂಡ ಎಷ್ಟು ಗೊತ್ತಾ..?




ನ್ಯಾಯಾಂಗ ನಿಂದನೆ ಕೇಸ್ನಲ್ಲಿ ಕೋರ್ಟ್ ವಿಧಿಸಿದ್ದ ಒಂದು ರೂಪಾಯಿ ದಂಡ ಕಟ್ಟೋದಿಲ್ಲ. ಹೊಸ ನ್ಯಾಯಪೀಠ ಹೊಸದಾಗಿ ಕೇಸ್ ವಿಚಾರಣೆ ನಡೆಸಲಿ ಎಂದು ಮೇಲ್ಮನವಿ ಹಕ್ಕನ್ನು ಪ್ರತಿಪಾದಿಸಲು ಮುಂದಾಗಿದ್ದಾರೆ ನ್ಯಾಯವಾದಿ ಪ್ರಶಾಂತ್ ಭೂಷಣ್! ಎರಡು ಟ್ವೀಟ್ ಮೂಲಕ ನ್ಯಾಯಾಂಗ ನಿಂದನೆ ಮಾಡಿದ ಪ್ರಕರಣದಲ್ಲಿ ಒಂದು ರೂಪಾಯಿ ದಂಡಕ್ಕೆ ಒಳಗಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್ ಶನಿವಾರ 'ಮೇಲ್ಮನವಿ ಸಲ್ಲಿಸುವ ಹಕ್ಕು' ಬಳಸಿಕೊಂಡಿದ್ದಾರೆ. ಆ ಮೂಲಕ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಅವರು, ನ್ಯಾಯಾಂಗ ನಿಂದನೆಯ ಮೂಲಕ ಕೇಸ್ ಅನ್ನೇ ವಿಸ್ತೃತ ಮತ್ತು ಬೇರೆಯದೇ ಆದ ನ್ಯಾಯಪೀಠದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ.



 


ನ್ಯಾಯಾಂಗ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ವಿರುದ್ಧದ ಆಕ್ಷೇಪಾರ್ಹ ಟ್ವೀಟ್ಗಳಿಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ಗೆ 1 ರೂ. ದಂಡ ಕಟ್ಟುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸೆ.15ರ ಒಳಗಾಗಿ ದಂಡ ಕಟ್ಟದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆ ಮತ್ತು 3 ವರ್ಷಗಳ ಕಾಲ ವಕೀಲಿಕೆಗೆ ನಿಷೇಧ ಹೇರಲಾಗುವುದು ಎಂದು ನ್ಯಾ. ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಆಗಸ್ಟ್ 31ರಂದು ತಿಳಿಸಿತ್ತು. ಆದರೆ, ಲಾಯರ್ ಕಾಮಿನಿ ಜೈಸ್ವಾಲ್ ಅವರ ಮೂಲಕ ಹೊಸ ಮೇಲ್ಮನವಿಯನ್ನು ಸಲ್ಲಿಸಿರುವ ಪ್ರಶಾಂತ್ ಭೂಷಣ್, ಡಿಕ್ಲರೇಷನ್ ಅನ್ನೂ ಮಾಡಿದ್ದು, ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಪ್ರತಿಪಾದಿಸಿದ್ದಾರೆ.



 

ಟ್ವೀಟ್ನಲ್ಲಿ ಏನಿತ್ತು: ಜೂನ್ 27ರ ಟ್ವೀಟ್ನಲ್ಲಿ, 'ಭವಿಷ್ಯದ ಇತಿಹಾಸಕಾರರು 2014ರಿಂದ 2020ರ ತನಕ ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಹೇಗೆ ಘಾಸಿಗೊಳಿಸಲಾಯಿತು ಎಂಬುದನ್ನು ದಾಖಲಿಸುವ ವೇಳೆ, ಅದರಲ್ಲಿ ಸುಪ್ರೀಂಕೋರ್ಟ್ನ ಪಾಲುದಾರಿಕೆ ಮತ್ತು ಮುಖ್ಯವಾಗಿ 4 ಮುಖ್ಯ ನ್ಯಾಯಮೂರ್ತಿಗಳ ಪಾತ್ರವನ್ನೂ ದಾಖಲಿಸಬಹುದು' ಎಂದು ಭೂಷಣ್ ಬರೆದುಕೊಂಡಿದ್ದರು. ಜೂನ್ 29ರಂದು ಸಿಜೆಐ ಎಸ್.ಎ. ಬೊಬ್ಡೆ ಕುರಿತ ಟ್ವೀಟ್ನಲ್ಲಿ, 'ಲಾಕ್ಡೌನ್ನಿಂದಾಗಿ ಸುಪ್ರೀಂಕೋರ್ಟ್ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ದೇಶದ ಪ್ರಜೆಗಳು ನ್ಯಾಯಕ್ಕಾಗಿ ಪರಿತಪಿಸುವಂತಾಗಿದೆ. ಇಂಥಾ ಸನ್ನಿವೇಶದಲ್ಲಿ, ನಾಗ್ಪುರದ ಬಿಜೆಪಿ ಮುಖಂಡನೊಬ್ಬನಿಗೆ ಸೇರಿದ 50 ಲಕ್ಷ ರೂಪಾಯಿಯ ಬೈಕನ್ನು ಸಿಜೆಐ ರೈಡ್ ಮಾಡುತ್ತಿದ್ದಾರೆ. ನೋಡಿ, ಮಾಸ್ಕ್, ಹೆಲ್ಮೆಟ್ ಎರಡನ್ನೂ ಧರಿಸಿಲ್ಲ!' ಎಂದು ಟೀಕಿಸಿದ್ದರು. ವಿಚಾರಣೆ ವೇಳೆ 'ಭೂಷಣ್ಗೆ ಶಿಕ್ಷೆ ನೀಡಬಾರದು, ಎಚ್ಚರಿಕೆ ನೀಡಿ ಬಿಟ್ಟು ಬಿಡಬೇಕು' ಎಂದು ಕೇಂದ್ರದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಿನಂತಿಸಿಕೊಂಡಿದ್ದರು.

Find Out More:

Related Articles: